More

    ಕಾಗೇರಿ ಮೇಲೆ ಕಾರ್ಯಕರ್ತರ ಅಸಮಾಧಾನ

    ಸಿದ್ದಾಪುರ: ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ದುಡಿದವರಿಗೆ ಬೆಲೆ ಇಲ್ಲ. ಅಭಿವೃದ್ಧಿ ಕೆಲಸದಲ್ಲಿ ಕ್ಷೇತ್ರದಿಂದ ಕ್ಷೇತ್ರಕ್ಕೆ ತಾರತಮ್ಯ ಆಗುತ್ತಿದೆ. ಬೇರೆ ಪಕ್ಷದಲ್ಲಿ ದುಡಿದವರ ಹಾಗೂ ಮುಖಂಡರ ಕ್ಷೇತ್ರಗಳಿಗೆ ಅಪಾರ ಅನುದಾನ ಬಿಡುಗಡೆ ಆಗುತ್ತಿದೆ.ಯಾಕೆ ಈ ರೀತಿ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಸಾಯಿನಗರದಲ್ಲಿ ಸೋಮವಾರ 17.20 ಲಕ್ಷರೂ.ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಂಕುಸ್ಥಾಪನೆ ನೆರವೇರಿಸಿ ತೆರಳುವಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಚುನಾವಣಾ ಸಂದರ್ಭದಲ್ಲಿ ಬೇರೆ ಪಕ್ಷದ ಅಭ್ಯರ್ಥಿಯೊಡನೆ ಪ್ರಚಾರ ಮಾಡಿರುವವರ ಕ್ಷೇತ್ರಕ್ಕೆ ಕಾಮಗಾರಿಗಳನ್ನು ಹಾಕುವುದರ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಿರಿ. ಇದರಿಂದ ಚುನಾವಣಾ ಸಂದರ್ಭದಲ್ಲಿ ನಿಮ್ಮ ಪರವಾಗಿ ಮತಯಾಚಿಸಿದ ನಮಗೆ ಮುಜಗರವಾಗುತ್ತಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆಯಲ್ಲಿ ಭಾಗವಹಿಸಿ. ಜತೆಗೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಎಂದು ಆಗ್ರಹಿಸಿದರು.

    ಕಾರ್ಯಕರ್ತರ ಮಾತಿಗೆ ಸಿಟ್ಟಾದ ಕಾಗೇರಿ ‘ಇನ್ನೊಂದು ದಿನ ಮಾತಾಡೋಣ ಎಂದು ಹೊರಟು ಹೋದರು.

    ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ಯುವಮೋರ್ಚಾ ಅಧ್ಯಕ್ಷ ಹರೀಶ ಗೌಡ, ಪಪಂ ಸದಸ್ಯರಾದ ಮಾರುತಿ ನಾಯ್ಕ, ಸುಧೀರ ಕೊಂಡ್ಲಿ, ರವಿ ನಾಯ್ಕ ಜಾತಿಕಟ್ಟೆ, ವಿಜಯೇಂದ್ರ ಗೌಡರ್, ಬಿಜೆಪಿ ಪದಾಧಿಕಾರಿಗಳಾದ ಕೃಷ್ಣಮೂರ್ತಿ ಕಡಕೇರಿ,ರಮಾನಂದ ನಾಯ್ಕ ಇಟಗಿ ಇತರರಿದ್ದರು.

    ಅಸಮಾಧಾನವೇ ಕಾರಣ? : ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಇವರ ನಡುವೆ ಮೊದಲಿದ್ದ ಸಲುಗೆಯ ಮಾತುಕತೆ ಈಗ ಹಲವು ತಿಂಗಳುಗಳಿಂದ ಇಲ್ಲ. ಇವರಿಬ್ಬರ ಅಸಮಾದಾನ ಇಂದಿನ ಘಟನೆಗೆ ಕಾರಣ ಇರಬಹುದೇ ಎಂಬ ಪ್ರಶ್ನೆ ಹುಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts