More

    ಕಾಗವಾಡ ಕ್ಷೇತ್ರದಲ್ಲಿ ಅಭಿವೃದ್ಧಿಗೆ ತೀವ್ರ ಹಿನ್ನಡೆ

    ಬೆಳಗಾವಿ/ಕಾಗವಾಡ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ನೂರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತ ಸಾಗಿದ್ದು, ಕೆಲವು ಕಾಮಗಾರಿಗಳನ್ನು ಹಾಲಿ ಶಾಸಕರು ತಡೆ ಹಿಡಿದಿದ್ದಾರೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಆರೋಪಿಸಿದ್ದಾರೆ.

    ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂ ಯೋಜನೆಗಳಲ್ಲಿ ಒಂದಾಗಿರುವ ಜಲಜೀವನ ಮಿಷನ್​ ಮೂಲಕ ಪ್ರತಿ ಹಳ್ಳಿಯಲ್ಲಿರುವ ಎಲ್ಲರ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದೆ. ಆದರೆ ಈ ಯೋಜನೆ ಕಾಮಗಾರಿಗಳನ್ನು ಹಾಲಿ ಶಾಸಕರು ಅರ್ಧಕ್ಕೆ ನಿಲ್ಲಿಸಿರುವುದು ಯಾವ ಕಾರಣಕ್ಕಾಗಿ ಎಂದು ಜನತೆಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಖಿಳೇಗಾವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಬೇಕು. 23 ಕೆರೆ ತುಂಬಿಸುವ ಯೋಜನೆ ಟೆಂಡರ್​ ಪ್ರಕ್ರಿಯೆ ಮುಗಿದ್ದಿದ್ದರೂ ಈಗಿನ ಶಾಸಕ ರಾಜು ಕಾಗೆ ಅವರು ಪ್ರಾರಂಭ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

    ಜತೆಗೆ ಕಾಗವಾಡದಲ್ಲಿ ಹೊಸದಾಗಿ ತಾಲೂಕು ಆಸ್ಪತ್ರೆ, ಮಿನಿ ವಿಧಾನ ಸೌಧ, ಸುಸಜ್ಜಿತ ಕ್ರೀಡಾಂಗಣ, ಅಗ್ನಿ ಶಾಮಕ ಠಾಣೆ ಸೇರಿದಂತೆ ನನೆಗುದಿಗೆ ಬಿದ್ದಿರುವ ವಿವಿಧ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಗುಂಡೇವಾಡಿ, ಪಾರ್ಥನಹಳ್ಳಿ, ಮಾಯನಟ್ಟ, ಚಮಕೇರಿ ಹಾಗೂ ಬೇಡರಹಟ್ಟಿ ಗ್ರಾಮಗಳಿಗೆ ಕರಿ ಮಸೂತಿ ಯೋಜನೆ ಮೂಲಕ ನೀರು ಪೂರೈಸಬೇಕು ಎಂದು ಶ್ರೀಮಂತ ಪಾಟೀಲ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts