More

    ಕಾಂಗ್ರೆಸ್ ಮುಖಂಡನ ಮನೆ ಎದುರು ಜನಜಾತ್ರೆ

    ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಅನಿಲಕುಮಾರ ಪಾಟೀಲ ಮನೆ ಎದುರು ಸೋಮವಾರ ಆಹಾರ ಪ್ಯಾಕೆಟ್ ಪಡೆಯಲು ನೂರಾರು ಜನರು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಸಾಮಾಜಿಕ ಅಂತರಕ್ಕೆ ಬೆಲೆಯೇ ಇರಲಿಲ್ಲ. ಸೋಂಕಿನ ಭಯವೂ ಇರಲಿಲ್ಲ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಬಡವರ ಮನೆ ಮನೆಗೆ ತೆರಳಿ ಆಹಾರ ಸಾಮಗ್ರಿ ವಿತರಣೆ ಮಾಡುವುದು ಸಾಮಾನ್ಯ. ಆದರೆ, ಇಲ್ಲಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ನಿಯಮ ಉಲ್ಲಂಘಿಸಿ ಕಾರವಾರ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿಯೇ ಬಡವರಿಗೆ ಆಹಾರ ಸಾಮಗ್ರಿ ವಿತರಣೆ ಮಾಡುವುದಾಗಿ ಹೇಳಿ ಎಡವಟ್ಟು ಮಾಡಿಕೊಂಡರು. ನೂರಾರು ಜನರು ಸೇರಿದ್ದರಿಂದ ಪೊಲೀಸ್ ಬಲದಿಂದ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು.

    ಅವರ ಮನೆಯ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿತ್ತು. ಆದರೆ, ಗೇಟ್ ಹೊರಗೆ ನೂರಾರು ಜನರು ಜಾತ್ರೆಯಂತೆ ಸೇರಿದ್ದರು. ಒಂದು ಹಂತದಲ್ಲಿ

    ಕೆಲವರು ಗೇಟ್ ತಳ್ಳಿ ಒಳಗೆ ನುಗ್ಗಿದ್ದರು. ನೂಕುನುಗ್ಗಲಿನಲ್ಲಿ ಕೆಲವರು ನೆಲಕ್ಕೆ ಬಿದ್ದರು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

    ಬಳಿಕ ಕೆಲ ಸಮಯ ವಿತರಣೆಯನ್ನು ಸ್ಥಗಿತಗೊಳಿಸಿ ಜನರನ್ನು ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.

    ಉಚಿತ ವಿತರಣೆ ಒಳ್ಳೆಯದೇ. ಆದರೆ, ಇಂತಹ ವಿಷಮ ಸ್ಥಿತಿಯಲ್ಲಿ ರಾಜಕೀಯ ನಾಯಕರು ತಮ್ಮ ಮನೆಗೆ ಬನ್ನಿ ಎಂದು ಸಾರ್ವಜನಿಕರನ್ನು ಆಹ್ವಾನಿಸುವ ಮೂಲಕ ಗುಂಪು ಸೇರಲು, ಪರಸ್ಪರರ ಮಧ್ಯೆ ಅಂತರ ಇಲ್ಲದೇ ವೈರಸ್ ಹರಡುವಿಕೆಗೆ ಪೂರಕ ವಾತಾವರಣ ನಿರ್ವಣವಾಗಲು ಕಾರಣರಾದರೆ ಹೇಗೆ? ಇಂಥದ್ದರ ವಿರುದ್ಧ ಜಿಲ್ಲಾಡಳಿತದ ಕ್ರಮ ಏನು ಎಂಬ ಪ್ರಶ್ನೆ ಉದ್ಭವಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts