More

    ಕಾಂಗ್ರೆಸ್​ನಿಂದ ಶಹಾಬಾದ್​ ಮುಖಂಡರ ಕಡೆಗಣನೆ

    ಶಹಾಬಾದ್: ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಸ್ಥಳೀಯ ನಾಯಕರನ್ನು ಕಡೆಗಣಿಸುವ ಕೆಲಸ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಶಹಾಬಾದ್‌ನ ಕಾಂಗ್ರೆಸ್ ಮುಖಂಡರಿಗೆ ಸೂಕ್ತ ಸ್ಥಾನ-ಮಾನ ನೀಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ ಎಚ್ಚರಿಸಿದರು.

    ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರತಿ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಬರುವಂತೆ ಸಂಘಟನೆ ಮಾಡಿದ್ದೇವೆ. ಆದರೆ ಪಕ್ಷ ಸ್ಥಳೀಯರಲ್ಲದವರಿಗೆ ಸ್ಥಾನಮಾನ ನೀಡುತ್ತಿರುವುದರಿಂದ ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಇನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರವಾದ ನಂತರ ಇಲ್ಲಿಯ ಚುನಾಯಿತಿ ಪ್ರತಿನಿಧಿಗಳು ಕಮಲಾಪುರ, ಮಹಾಗಾಂವ್‌ನತ್ತಲೇ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಹೀಗಾಗಿ ತಾಲೂಕಿನ ಅಭಿವೃದ್ಧಿಗೂ ಪೆಟ್ಟು ಬಿದ್ದಿದೆ ಎಂದು ದೂರಿದರು.

    ಪಕ್ಷಕ್ಕಾಗಿ ಕಳೆದ 40, 50 ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತರು, ಮುಖಂಡರನ್ನು ಕೇವಲ ನಗರಸಭೆಗೆ ಸೀಮಿತ ಮಾಡಲಾಗಿದೆ. ರಾಜ್ಯ ಮಟ್ಟದ ಯಾವುದೇ ಹುದ್ದೆಯನ್ನು ನೀಡಿಲ್ಲ. ನಿಗಮ ಮಂಡಳಿಗೂ ನೇಮಕ ಮಾಡಿಲ್ಲ. ಈಗಾಗಲಾದರೂ ನಾಯಕರು ಎಚ್ಚೆತ್ತುಕೊಳ್ಳಬೇಕು. ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವವರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

    ನಿಂಗಣ್ಣ ದೇವಕರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಜೀತಕುಮಾರ ಪೊಲೀಸ್ ಪಾಟೀಲ್, ಮಹ್ಮದ್ ಉಬೇದುಲ್ಲಾ, ಇನಾಯತ್ ಖಾನ್ ಜಮಾದಾರ್, ನಾಗರಾಜ ಸಿಂಘೆ, ಮೃತ್ಯುಂಜಯ ಸ್ವಾಮಿ ಹಿರೇಮಠ, ಡಾ.ಅಹ್ಮದ್ ಪಟೇಲ್ಇ ತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts