More

    ಕಸ ವಿಲೇವಾರಿ ಬಗ್ಗೆ ನಿವಾಸಿಗಳಿಗೆ ಜಾಗೃತಿ ಮೂಡಿಸಬೇಕಿದೆ

    ಶನಿವಾರಸಂತೆ: ಕಸ ವಿಲೇವಾರಿ ವಾಹನ ಪಟ್ಟಣದ ನಿವಾಸಿಗಳ ಮನೆಗಳ ಬಳಿ ಬಂದಾಗ ಹಸಿ ಕಸ ಹಾಗೂ ಇತರ ತ್ಯಾಜ್ಯಗಳನ್ನು ಕಸವಿಲೇವಾರಿ ವಾಹನದಲ್ಲಿ ಹಾಕುವಂತೆ ಗ್ರಾಪಂ ವತಿಯಿಂದ ನಿವಾಸಿಗಳಿಗೆ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಸದಸ್ಯ ಎಸ್.ಎನ್.ರಘು ಸಲಹೆ ನೀಡಿದರು.
    ಶುಕ್ರವಾರ ನಡೆದ ಗ್ರಾಪಂ ಸಾಮಾನ್ಯಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ಪಟ್ಟಣದಲ್ಲಿ ಕೋಳಿ ಮಾಂಸ ಮಾರಾಟ ಅಂಗಡಿಗಳ ಮಾಲೀಕರು ಗ್ರಾಪಂ ನೀಡಿದ ಪರವಾನಗಿ ನವೀಕರಿಸದಿರುವುದು ಕಂಡು ಬಂದಲ್ಲಿ ಪರವಾನಗಿ ರದ್ದು ಮಾಡುವಂತೆ ಸಭೆಯಲ್ಲಿ ನಿರ್ಣಹಿಸಲಾಯಿತು. ಪಟ್ಟಣದಲ್ಲಿ ಸ್ವಚ್ಛತ್ತೆಗೆ ಹೆಚ್ಚಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮಾಹಿತಿ ಸಭೆಯನ್ನು ಕರೆಯುವಂತೆ ಸದಸ್ಯರು ಪಿಡಿಒರಿಗೆ ಸೂಚಿಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದರೂ, ಚಿಕಿತ್ಸೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ವೈದ್ಯಕೀಯ ಉಪಕರಣ ಸೇರಿದಂತೆ ಇತರ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾಪಂ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಾರ್ವಜನಿಕರ ಅರ್ಜಿ ಆಹವಾಲುಗಳನ್ನು ಪರಿಶೀಲಿಸಲಾಯಿತು.
    ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್, ಉಪಾಧ್ಯಕ್ಷರಾದ ಎಸ್.ಆರ್.ಮಧು, ಸದಸ್ಯರಾದ ಎಸ್.ಎನ್.ರಘು, ಎಸ್.ಸಿ.ಶರತ್ ಶೇಖರ್, ಸರ್ದಾರ್ ಅಹಮ್ಮದ್, ಕಾವೇರಿ, ಸ್ವರಸ್ವತಿ, ಪಿಡಿಒ ಮೇದಪ್ಪ, ಕಾರ್ಯದರ್ಶಿ ದೇವರಾಜು, ಗ್ರಾಪಂ ಸಿಬ್ಬಂದಿ ಪೌಜಿಯ, ಲೀಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts