More

    ಕಸಾಪ ಭವನಕ್ಕೆ ಭೂಮಿಪೂಜೆ

    ಮುಂಡರಗಿ: ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾರ್ಯ ಶೀಘ್ರವೇ ಪೂರ್ಣಗೊಂಡು ಸಾಹಿತ್ಯ ಚಟುವಟಿಕೆಯ ಕಾರ್ಯ ನಿರಂತರ ನಡೆಯಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

    ಪಟ್ಟಣದ ಅನ್ನದಾನೀಶ್ವರ ಕ್ರೀಡಾಂಗಣ ಪಕ್ಕದಲ್ಲಿ ಜಗದ್ಗುರು ಅನ್ನದಾನೀಶ್ವರ ಮಠದಿಂದ ಕನ್ನಡ ಸಾಹಿತ್ಯ ಭವನ ನಿರ್ವಣಕ್ಕೆ ನೀಡಿದ 6 ಗುಂಟೆ ನಿವೇಶನದಲ್ಲಿ ನೂತನ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಸಾಹಿತ್ಯ ಕ್ಷೇತ್ರ ದೊಡ್ಡದು. ಜಗತ್ತಿನಲ್ಲಿ ಸಾಹಿತ್ಯವು ಶಾಶ್ವತವಾಗಿ ಉಳಿಯುತ್ತದೆ. ತಾಯಿ ಭಾಷೆಯಾಗಿರುವ ಕನ್ನಡದ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜನಪ್ರತಿನಿಧಿಗಳಿಂದ ಹಾಗೂ ಪ್ರತಿಯೊಂದು ಮನೆಯಿಂದ 50-100 ರೂ.ನಂತೆ ವಂತಿಗೆ ಪಡೆದು ಭವನ ನಿರ್ವಿುಸಬೇಕು. ಈ ಮೂಲಕ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾರ್ಯಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಿದಂತಾಗುತ್ತದೆ’ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಮಾತನಾಡಿ, ‘ಪಟ್ಟಣದಲ್ಲಿ ಕಸಾಪ ಭವನ ನಿರ್ವಣಕ್ಕೆ ಡಾ.ಅನ್ನದಾನೀಶ್ವರ ಸ್ವಾಮೀಜಿಯವರು ಶ್ರೀಮಠದಿಂದ ಬೆಲೆಬಾಳುವ ನಿವೇಶನ ದಾನವಾಗಿ ನೀಡಿದ್ದಾರೆ. ಶ್ರೀಗಳ ಆಶಯದಂತೆ ಸುಂದರ ಸಾಹಿತ್ಯ ಭವನ ನಿರ್ಮಾಣ ಕಾರ್ಯ ನಡೆಯಲಿದೆ. ಜಿಲ್ಲೆಯ ವಿವಿಧೆಡೆ ಸಾಹಿತ್ಯ ಭವನ ನಿರ್ವಿುಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

    ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಉಪಾಧ್ಯಕ್ಷೆ ಶೋಭಾ ಮೇಟಿ, ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಮುಖಂಡರಾದ ಕೆ.ವಿ. ಹಂಚಿನಾಳ, ಹೇಮಗಿರೀಶ ಹಾವಿನಾಳ, ವೈ.ಎನ್.ಗೌಡರ, ಡಾ.ಬಿ.ಎಸ್. ಮೇಟಿ, ಡಾ.ಬಿ.ಜಿ. ಜವಳಿ, ಬಿ.ವಿ. ಮುದ್ದಿ, ಬಸವರಾಜ ನವಲಗುಂದ, ಆರ್.ಎಲ್. ಪೊಲೀಸ ಪಾಟೀಲ, ಎಸ್.ಬಿ. ಹಿರೇಮಠ, ದೇವೇಂದ್ರಪ್ಪ ರಾಮೇನಹಳ್ಳಿ, ಗಂಗಾಧರ ಅಣ್ಣಿಗೇರಿ, ಭಾಗ್ಯಲಕ್ಷ್ಮಿ ಇನಾಮತಿ, ಅಕ್ಕಮಹಾದೇವಿ ಕೆಳಗಿನಮನಿ, ಬಿ.ಬಿ. ಬೆನಕನವಾರಿ, ಯುವರಾಜ ಮುಂಡರಗಿ, ಎನ್.ಎಂ. ಕುಕನೂರ, ಮಹೇಶ ಮೇಟಿ ಇತರರು ಇದ್ದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಎ. ಹಿರೇಮಠ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಉಳ್ಳಾಗಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts