More

    ಕಸಾಪ ಕಚೇರಿಗೆ ನಿವೇಶನ ನೀಡಲು ಆಗ್ರಹ

    ಯರಗಟ್ಟಿ, ಬೆಳಗಾವಿ: ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಸೂಕ್ತ ನಿವೇಶನ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಪರಿಷತ್ ಘಟಕ ಹಾಗೂ ಯರಗಟ್ಟಿ ತಾಲೂಕು ಘಟಕದ ಆಶ್ರಯದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲಗೆ ಕನ್ನಡ ಸಾಹಿತ್ಯ ಪರಿಷತ್ ಪಧಾದಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.

    ನೇತೃತ್ವ ವಹಿಸಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಮಾತನಾಡಿ, ನಾಡು-ನುಡಿ, ನೆಲ-ಜಲ ಸಂರಕ್ಷಣೆಯಲ್ಲಿ ಸಾಹಿತ್ಯ ಪರಿಷತ್ ಮುಂಚೂಣಿಯಲ್ಲಿದ್ದು ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದೆ. ಯರಗಟ್ಟಿ ನೂತನ ತಾಲೂಕು ರಚನೆ ನಂತರ ತಾಲೂಕು ಘಟಕ ಅಸ್ತಿತ್ವಕ್ಕೆ ಬಂದಿದ್ದು ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಕೆಲಸಗಳನ್ನು ಕೈಗೊಂಡಿದೆ.

    ಕಸಪ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲೂಕು ಘಟಕಕ್ಕೆ ಸ್ವಂತ ಕಚೇರಿ, ಸಭಾಂಗಣ, ವಾಚನಾಲಯ ಸೇರಿ ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಳ್ಳಲು ಅನುಕೂಲವಾಗುವ ದೃಷ್ಟಿಯಲ್ಲಿ ಯರಗಣವಿ ವ್ಯಾಪ್ತಿಯ ಸರ್ವೇ ನಂ. 303/ಅ ಸರ್ಕಾರಿ ಜಮೀನಿನಲ್ಲಿ ಎರಡು ಎಕರೆ ಜಮೀನು ನೀಡಬೇಕೆಂದು ಒತ್ತಾಯಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ, ಕಾರ್ಯದರ್ಶಿ ವಿ.ಮ.ಅಂಗಡಿ, ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಅವಲಕ್ಕಿ, ಯರಗಟ್ಟಿ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮಣ್ಣವರ, ಬೆಳಗಾವಿ ತಾಲೂಕಾಧ್ಯಕ್ಷ ಸುರೇಶ ಹಂಜಿ, ಆರ್.ಎಲ್.ಜೂಗನವರ, ಎಸ್.ಎಸ್.ಕುರುಬಗಟ್ಟಿಮಠ, ಡಾ.ರಾಜಶೇಖರ ಬಿರಾದಾರ, ತಾಲೂಕು ಕಸಾಪ ವಕ್ತಾರ ಮಹಾಂತೇಶ ರಾಜಗೋಳಿ ಪ್ರವೀಣ ಕದಂ, ಹಾಗೂ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts