More

    ಕಸಾಪದಿಂದ ವಿಶ್ವ ರಂಗಭೂಮಿ ದಿನಾಚರಣೆ

    ವಿಜಯವಾಣಿ ಸುದ್ದಿಜಾಲ ಗದಗ
    ಉತ್ತರ ಕರ್ನಾಟಕ ಭಾಗದಲ್ಲಿ ರಂಗಭೂಮಿ ಶ್ರೀಮಂತವಾಗಿ ಬೆಳೆದು ಬಂದಿದೆ. ಗ್ರಾಮೀಣ ಪ್ರದೇಶದ ರಂಗ ಕಲಾವಿದರು ದೊಡ್ಡಾಟಗಳಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಅಭಿನಯಿಸಿ ನಮ್ಮ ಪ್ರಾಚಿನ ಸಂಗತಿಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಎಂದು ಕಲಾವಿಕಾಸ ಪರಿಷತ್ತಿನ ಸಂಸ್ಥಾಪಕ ಅಧ್ಯ ಸಿ. ಕೆ. ಎಚ್​. ಶಾಸ್ತ್ರೀ ತಿಳಿಸಿದರು.
    ನಗರದ ಕಸಾಪ ಕಾರ್ಯಾಲಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬಯಲಾಟ ಪ್ರದರ್ಶನ, ರಂಗ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾತ್ರೀ ಹಬ್ಬದಂತೆ ಆಚರಿಸಲ್ಪಡುತ್ತಿದ್ದ ಈ ಕಲೆ ಇಂದು ಸಮೂಹ ಮಾಧ್ಯಮಗಳ ಭರಾಟೆಯಲ್ಲಿ ಅಸ್ತಿತ್ವ ಕಳೆದು ಕೊಳ್ಳುವ ಹಂತಕ್ಕೆ ಬಂದಿರುವದು ವಿಷಾದನೀಯ. ಪರಿಷತ್ತಿನಂತಹ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ. ಇಂದಿನ ಪೀಳಿಗೆಗೆ ಈ ಕಲೆಯನ್ನು ವರ್ಗಾಯಿಸುವ ಕಾರ್ಯವನ್ನು ಕಲಾ ಸಂಸ್ಥೆಗಳು ಮಾಡುಬೇಕು. ಸರ್ಕಾರ ಈ ದಿಸೆಯಲ್ಲಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
    ಸಮಾರಂಭದ ಅಧ್ಯತೆ ವಹಿಸಿದ್ದ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತ್ಯದ ಪ್ರಕಾರಗಳಲ್ಲಿ ನಾಟಕವೇ ರಮ್ಯವಾಗಿದೆ. ಇಲ್ಲಿ ನವರಸಗಳನ್ನು ಕಾಣಬಹುದು. ಕಲಾವಿದರು ಆಥಿರ್ಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ಕಲೆಯ ಮೇಲಿನ ಆರಾಧನೆಯಿಂದ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ಬೆಟಗೇರಿಯ ಹೊಸಗರಡಿ ಜಾನಪದ ಕಲಾಮೇಳದವರು ಕಳೆದ ಐವತ್ತು ವರ್ಷಗಳಿಂದ ಈ ಕಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.
    ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸತ ಅಶೋಕ ಸುತಾರ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂ ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ರಂಗಕಲಾವಿದರನ್ನು ಸನ್ಮಾನಿಸಲಾಯಿತು.
    ವಿಜಯ ಕಲಾ ಮಂದಿರ ಸಂಸ್ಥೆಯ ಕಾರ್ಯದಶಿರ್ ಪ್ರಕಾಶ ಅಕ್ಕಿ, ಅಶೋಕ ಸುತಾರ, ಪ್ರಕಾಶ ಬಡಿಗೇರ, ನಿಜಲಿಂಗಪ್ಪ ಕರಿಬಿಷ್ಠಿ, ಮಲ್ಲೇಶಗೌಡ ತಿಮ್ಮನಗೌಡ್ರ, ಬಾಳಪ್ಪ ಮನಗೂಳಿ, ಸುಭಾಸ ಮಳಗಿ, ನಿಖಿತಾ ಸುತಾರ, ಶಂಕ್ರಪ್ಪ ಬಡಿಗೇರ, ಶ್ರೀನಿವಾಸ ಹಡಪದ, ಕೇಶಪ್ಪ ಗೋಂದಕರ, ಅರುಣ ರಾಯಬಾಗಿ, ನೀಲಕಂಠಯ್ಯ ಹಿರೇಮಠ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts