More

    ಕೃಷಿ ತಂತ್ರಜ್ಞಾನ ಬಗ್ಗೆ ರೈತರಿಗೆ ಮಾಹಿತಿ ನೀಡಿ

    ಗಂಗಾವತಿ: ಕೃಷಿ ತಂತ್ರಜ್ಞಾನ ಮತ್ತು ಸುಧಾರಿತ ಬೇಸಾಯ ಕ್ರಮಗಳನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಕೃಷಿ ಸಖಿಯರ ಮೇಲಿದ್ದು, ಲಾಭದಾಯಕ ಕೃಷಿಯನ್ನಾಗಿ ಮಾಡಲು ಪ್ರೇರಿಪಿಸಬೇಕು ಎಂದು ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.

    ಇದನ್ನೂ ಓದಿ: ಸಾಲ ತೀರಿಸುವಂತೆ ರೈತರನ್ನು ಬಲವಂತ ಮಾಡಬೇಡಿ: ಕೊಮ್ಮೇರಹಳ್ಳಿ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿಕೆ

    ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಜಿಪಂ ಮತ್ತು ಕೃಷಿ ವಿಜ್ಞಾನ ಕೇಂದ್ರ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕು ಮಟ್ಟದ ವಿಸ್ತರಣಾ ಕಾರ್ಯಕರ್ತರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

    ಸಮಗ್ರ ಕೃಷಿ, ಮೌಲ್ಯವರ್ಧನೆ, ಗೃಹ ಉದ್ಯಮಗಳಿಂದ ಕೃಷಿಯನ್ನು ಲಾಭದಾಯವನ್ನಾಗಿ ಮಾಡಬಹುದಾಗಿದ್ದು, ಹೊಸ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸಬೇಕಿದೆ. ತಜ್ಞರು ಶಿಾರಸ್ಸು ಮಾಡಿದ ಗೊಬ್ಬರ, ಕೀಟನಾಶಕ, ಶಿಲೀಂಧ್ರನಾಶಕಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

    ಇದೇ ಸಂದರ್ಭದಲ್ಲಿ ಕಷಿ ಹವಾಮಾನ ಸಂಬಂಧಿತ ಮೇಘ ಸಂದೇಶ ವಾರ್ತಾಪತ್ರ ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಕೃಷಿ ಕಾಲೇಜು ವಿಶೇಷಾಧಿಕಾರಿ ಡಾ.ಜೆ.ವಿಶ್ವನಾಥ, ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ಪ್ರಾಧ್ಯಾಪಕ ಡಾ.ಮಹಾದೇವಸ್ವಾಮಿ,

    ತಜ್ಞರಾದ ಡಾ.ಕೀರಪ್ಪ ಅಹಂಭಾವಿ, ಜೆ.ರಾಧಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಕಿರಣ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ ಎಚ್.ದೀಪಾ, ಕಾರ್ಯಕ್ರಮ ವ್ಯವಸ್ಥಾಪಕ ಶ್ಯಾಮಸುಂದರ್, ಕೃಷಿ ಜೀವನೋಪಾಯ ಘಟಕದ ವ್ಯವಸ್ಥಾಪಕ ಮುದ್ದಣ್ಣೇಶ, ಮೇಲ್ವಿಚಾರಕರಾದ ಮಲ್ಲಿಕಾರ್ಜುನ, ರೇಣುಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts