More

    ದೇವಸ್ಥಾನದ ಗೋಪುರಗಳಿಗೆ ಕಳಸಾರೋಹಣ

    ಕುಷ್ಟಗಿ: ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ನಿಮಿತ್ತ ಶುಕ್ರವಾರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಬೆಳ್ಳಿ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ನೇತ್ರ ಮಿಲನ, ತತ್ವನ್ಯಾಸ, ಕಲಾವಾಹನ, ಹೋಮ, ಬಲಿಹರಣ ಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ ಪೂಜೆ ಇತರ ಕಾರ್ಯಗಳನ್ನು ನೆರವೇರಿಸಲಾಯಿತು.

    ನಂತರ ದೇವಸ್ಥಾನದ ಗೋಪುರಗಳಿಗೆ ಕಳಸಾರೋಹಣ ನಡೆಯಿತು. 108 ಮುತ್ತೈದೆಯರಿಗೆ ಉಡಿ ತುಂಬಿ ಸಿಹಿ ಉಣಬಡಿಸಿ ದಕ್ಷಿಣೆ ನೀಡಿ ಸತ್ಕರಿಸಲಾಯಿತು. ಏ.9ರಿಂದ ಆರಂಭಗೊಳ್ಳುವ ಪರಿಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

    ಜಾತ್ರಾ ಸಮಿತಿಯ ಅಧ್ಯಕ್ಷ ರವಿಕುಮಾರ ಸ್ವಾಮಿ ಹಿರೇಮಠ, ಪದಾಧಿಕಾರಿಗಳಾದ ಮಹಾಂತಯ್ಯ ಹಿರೇಮಠ, ಶಶಿಧರ ಕವಲಿ, ಮೋಹನಲಾಲ್ ಜೈನ್, ಮಲ್ಲಿಕಾರ್ಜುನ ಮಸೂತಿ, ಮಹೇಶ ಹಿರೇಮಠ, ಶಿವಕುಮಾರ ಗಂಧದಮಠ, ಅಮರೇಶ ಮಂಗಳೂರು, ದೊಡ್ಡಬಸವ ಸುಂಕದ, ಶಿವಕುಮಾರ ಹಿರೇಮಠ, ಕಿಶೋರ ಹಿರೇಮಠ, ಅನಿಲ್ ಕಮ್ಮಾರ್, ಅನಿಲಕುಮಾರ ಆಲಮೇಲ್, ಶೇಖರಯ್ಯ ಸರಗಣಾಚಾರಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts