More

    ಕವಿಗಳ ವಿಶ್ವ ದಾಖಲೆಗೆ ಸಿದ್ಧತೆ

    ಧಾರವಾಡ: ನಗರದ ಉನ್ನತಿ ಪ್ರತಿಷ್ಠಾನ, ಯೂನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಹಾಗೂ ಫ್ಯೂಚರ್ ಕಲಾಂ ಬುಕ್ ಆಫ್ ರೆಕಾರ್ಡ್ ವತಿಯಿಂದ ಮೇ 5ರಂದು ನಗರದಲ್ಲಿ 2020 ಕವಿಗಳು ಒಂದೆಡೆ ಸೇರಿ 2020 ಪುಟಗಳ ಪುಸ್ತಕ ರಚಿಸಿ ವಿಶ್ವ ದಾಖಲೆ ಮಾಡಲು ಸಜ್ಜಾಗಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಮಂಜುನಾಥ ಬಾರಗೇರ, ದಾಖಲೆ ನಿರ್ವಿುಸಲು ಸೇರುವ 2020 ಕವಿಗಳನ್ನು 505 ಜನರಂತೆ 4 ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಂದು ವಿಷಯ ನೀಡಲಾಗುವುದು. ಆ ವಿಷಯದ ಮೇಲೆ ಅವರು 24 ಸಾಲುಗಳಿಗೆ ಮೀರದಂತೆ 20 ನಿಮಿಷ 20 ಸೆಕೆಂಡಿನಲ್ಲಿ ಕವಿತೆ ರಚನೆ ಮಾಡಲಿದ್ದಾರೆ. ನಂತರ ಸ್ಥಳದಲ್ಲೇ ಪುಸ್ತಕ ಸಿದ್ಧಪಡಿಸುವ ಮೂಲಕ ವಿಶ್ವ ದಾಖಲೆ ನಿರ್ವಿುಸುವುದೇ ಉದ್ದೇಶವಾಗಿದೆ ಎಂದರು. ಭಾಗವಹಿಸಿದ ಎಲ್ಲ ಕವಿಗಳನ್ನು ವಿಶ್ವ ದಾಖಲೆಗೆ ಸೇರಿಸುವುದಲ್ಲದೆ, ಪ್ರತ್ಯೇಕವಾಗಿ ದಾಖಲೆಯ ಪ್ರಮಾಣಪತ್ರ ನೀಡಲಾಗುವುದು. ಈಗಾಗಲೇ 518 ಕವಿಗಳು ಹೆಸರು ನೋಂದಾಯಿಸಿದ್ದಾರೆ. ಇನ್ನೂ ಕಾಲಾವಕಾಶ ಇದೆ. ನಮ್ಮ ಗುರಿಗೆ ತಕ್ಕಷ್ಟು ಕವಿಗಳು ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ ಎಂದರು. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊ. ಸಂ. 9886262204, 8904174406 ಕ್ಕೆ ಸಂರ್ಪಸಲು ಕೋರಿದರು. ಡಾ. ಎಚ್.ವಿ. ಬೆಳಗಲಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts