More

    ಕವಳಾ ಗುಹೆಯಲ್ಲಿ ಈಶ್ವರನ ದರ್ಶನ

    ಜೊಯಿಡಾ: ತಾಲೂಕಿನ ಪ್ರಸಿದ್ಧ ಯಾತ್ರಾ ತಾಣ ಕವಳಾ ಗುಹೆಯಲ್ಲಿನ ಶಿವಲಿಂಗ ದರ್ಶನಕ್ಕಾಗಿ ಸಹಸ್ರಾರು ಭಕ್ತರು ಶುಕ್ರವಾರ ಬೆಳಗ್ಗೆ 3 ಗಂಟೆಯಿಂದಲೇ ಕವಳಾ ಗುಡ್ಡ ಹತ್ತಿ ಸರತಿ ಸಾಲಿನಲ್ಲಿ ಸಾಗಿ ದರ್ಶನ ಪಡೆದು ಪುನೀತರಾದರು.

    ಕವಳಾ ಜಾತ್ರೆಗೆ ಜಿಲ್ಲೆ ಹಾಗೂ ಧಾರವಾಡ, ಹುಬ್ಬಳ್ಳಿ, ಮೈಸೂರಿನಿಂದ ಭಕ್ತರು ಆಗಮಿಸಿದ್ದರು. ಅರಣ್ಯ ಇಲಾಖೆ, ಪರಿಸರ ಅಭಿವೃದ್ಧಿ ಸಮಿತಿ, ಸ್ವಯಂ ಸೇವಾ ಸಮಿತಿಗಳು ಜಾತ್ರೆಗೆ ಬರುವ ಭಕ್ತರಿಗೆ ಶರಬತ್ತು ನೀಡಿದರು. ದಾಂಡೇಲಿ ಡಿವೈಎಸ್​ಪಿ ಮೋಹನ ಪ್ರಸಾದ ಮಾರ್ಗದರ್ಶನದಲ್ಲಿ ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ ನೇತೃತ್ವದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಕವಳಾ ಶಿವಲಿಂಗ ದರ್ಶನಕ್ಕೆ ಸಾಗಲು ಎರಡು ಕಡೆಯಿಂದ ವ್ಯವಸ್ಥೆ ಮಾಡಲಾಗಿದ್ದು, ಜೊಯಿಡಾ ತಾಲೂಕಿನ ಪಣಸೋಲಿ ತಲುಪಿದಲ್ಲಿ ಅಲ್ಲಿಂದ ಕೆಎಸ್​ಆರ್​ಟಿಸಿ ಸಂಸ್ಥೆಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇನ್ನೊಂದು ಮಾರ್ಗ ಅಂಬಿಕಾನಗರದಿಂದ ನಾಗಝುುರಿಗೆ ಬಸ್ ವ್ಯವಸ್ಥೆ ಇದ್ದು, ನಾಗಝುುರಿ ತಲುಪಿ ಅಲ್ಲಿಂದ ಸಾವಿರ ಮೆಟ್ಟಿಲು ಹತ್ತಿ ಕವಳಾ ಶಿವ ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts