More

    ಕಳಸ ಗ್ರಾಮದಲ್ಲಿ ಕನ್ನಡ ನುಡಿ ಹಬ್ಬ

    ಕುಂದಗೋಳ: ತಾಲೂಕಿನ ಕಳಸ ಗ್ರಾಮದಲ್ಲಿ ಕುಂದಗೋಳ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ. 15ರಂದು ಹಮ್ಮಿಕೊಳ್ಳಳಲಾಗಿದೆ ಎಂದು ಕಸಾಪ ಕುಂದಗೋಳ ತಗೌರವಾಧ್ಯಕ್ಷ ಎ.ಬಿ. ಉಪ್ಪಿನ ಹೇಳಿದರು.

    ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಗೌರವಾಧ್ಯಕ್ಷರನ್ನಾಗಿ ಸಾಹಿತಿ ಆರ್.ಎಂ. ಹೊನಕೇರಿ ಆಯ್ಕೆ ಮಾಡಲಾಗಿದೆ. ಗುರು ಅಖಂಡೇಶ್ವರ, ಹಜರತ ಮಹಾಲಕಾರಿ ಮಹಾದ್ವಾರ ಹಾಗೂ ಗುರು ಗೋವಿಂದಭಟ್ಟರು, ಶಿಶುನಾಳ ಶರೀಫರ ಮಹಾವೇದಿಕೆಯಲ್ಲಿ ಸಮ್ಮೇಳನ ನೆರವೇರಲಿದೆ. ಅಂದು ಬೆಳಗ್ಗೆ 8.30ಕ್ಕೆ ಗ್ರಾಪಂ ಅಧ್ಯಕ್ಷ ನಬೀಬಸಾಬ್ ಉಪ್ಪಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸá-ವರು. ಎಸ್​ಡಿಎಂಸಿ ಅಧ್ಯಕ್ಷ ಮೌಲಾಸಾಬ್ ಲಾಠಿ, ನಾಡಧ್ವಜ ಹಾಗೂ ಕಸಾಪ ತಾಲೂಕಾಧ್ಯಕ್ಷ ಎಸ್.ಎನ್. ಅರಳಿಕಟ್ಟಿ ಪರಿಷತ್ ಧ್ವಜಾರೋಹಣ ನೆರವೇರಿಸá-ವರು. ಕನ್ನಡಾಂಬೆಗೆ ಪೂಜೆ ಸಲ್ಲಿಸಿ ಸಮ್ಮೇಳನ ಅಧ್ಯಕ್ಷ ಆರ್.ಎಂ. ಹೊನಕೇರಿ ಅವರನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ಮಹಾವೇದಿಕೆಗೆ ಕರೆತರಲಾಗುವುದು. ಮೆರವಣಿಗೆಗೆ ನಿವೃತ್ತ ಶಿಕ್ಷಕ ಸಂಗಯ್ಯ ಗುಡಿ ಚಾಲನೆ ನೀಡಲಿದ್ದಾರೆ ಎಂದರು.

    ಬೆಳಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿದೆ. ಕಳಸ-ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸá-ವರು. ದೂರದರ್ಶನದ ನಿವೃತ್ತ ನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಉದ್ಘಾಟಿಸá-ವರು. ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷತೆ ವಹಿಸುವರು. ಸಮ್ಮೇಳನ ಸರ್ವಾಧ್ಯಕ್ಷ ಆರ್.ಎಂ. ಹೊನಕೇರಿ ಅಧ್ಯಕ್ಷ ನುಡಿಗಳನ್ನಾಡá-ವರು. ಕಸಾಪ ತಾಲೂಕಾಧ್ಯಕ್ಷ ಎಸ್.ಎನ್. ಅರಳಿಕಟ್ಟಿ, ಗೌರವಾಧ್ಯಕ್ಷ ಎ.ಬಿ. ಉಪ್ಪಿನ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಪ್ರೊ. ಎಫ್.ಬಿ. ಸೊರಟೂರ ಮಾತನಾಡುವರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಆಶಯ ನುಡಿಗಳನ್ನಾಡá-ವರು. ಬಿ.ಎಲ್. ಪೊಲೀಸ್​ಪಾಟೀಲ ಅವರ ‘ಹಾಡುಗಳ ಸಂಗಮ’ ಪುಸ್ತಕ ಬಿಡುಗಡೆಗೊಳಿಸಲಾಗುವುದು. ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಮಲ್ಲಿಕಾರ್ಜುನ ಅಕ್ಕಿ, ಜಿಪಂ ಸದಸ್ಯರಾದ ಜ್ಯೋತಿ ಬೆಂತೂರ, ಉಮೇಶ ಹೆಬಸೂರ, ಎನ್.ಎನ್. ಪಾಟೀಲ, ಭರಮಪ್ಪ ಮುಗಳಿ, ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

    ಮಧ್ಯಾಹ್ನ 12.30ಕ್ಕೆ ತತ್ವಪದ ಸಾಹಿತ್ಯ 1ನೇ ಗೋಷ್ಠಿ ನಡೆಯಲಿದ್ದು, ಸಾಹಿತಿ ಎಂ.ಎಸ್. ಮಾಳವಾಡ ಅಧ್ಯಕ್ಷತೆ ವಹಿಸುವರು. ಚನ್ನಪ್ಪ ಅಂಗಡಿ ಉಪನ್ಯಾಸ ನೀಡಲಿದ್ದಾರೆ. ಮಾಧ್ಯಮಗಳು ಹಾಗೂ ಸಾಮಾಜಿಕ ಪ್ರಜ್ಞೆ ಕುರಿತ 2ನೇ ಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಎಸ್.ಕೆ. ಗದಿಗಿನಮಠ ವಹಿಸುವರು. ಚಿದಾನಂದ ಕಮ್ಮಾರ ಉಪನ್ಯಾಸ ನೀಡಲಿದ್ದಾರೆ. 3ನೇ ಗೋಷ್ಠಿ ಕವಿ ಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಸತೀಶ ಕುಲಕರ್ಣಿ ವಹಿಸುವರು. ಸಾಹಿತಿ ಶಂಕರಗೌಡ ಸಾತ್ಮಾರ ಚಾಲನೆ ನೀಡಲಿದ್ದಾರೆ. ಅನೇಕ ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಲಿದ್ದಾರೆ ಎಂದರು.

    ಸಂಜೆ 6.30ಕ್ಕೆ ಸನ್ಮಾನ, ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಗಂಗಾಧರಯ್ಯ ಹಿರೇಮಠ ವಹಿಸುವರು. ಎಂ.ಆರ್. ತೋಟಗಂಟಿ ಅಧ್ಯಕ್ಷತೆ ವಹಿಸುವರು. ಕೆ.ಎಸ್. ಕೌಜಲಗಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರು ಅಧ್ಯಕ್ಷೀಯ ನುಡಿಗಳನ್ನಾಡá-ವರು. ಎಸ್.ಆರ್. ಶಿರೂರ, ಶಿ.ಪಿ. ಶಿರಹಟ್ಟಿ, ಎಸ್.ಬಿ. ಕಳಸೂರ, ಬಿ.ಎಂ. ಗಾಣಗೇರ, ಬಿ.ಎಂ. ಪರಣ್ಣವರ, ಎಸ್.ಬಿ. ಗುಡಿ, ಎನ್.ಬಿ. ಮಟ್ಟಿ, ಆರ್.ಎಂ. ನೆಗಳೂರಮಠ, ಸುರೇಶ ಹೊಸಮನಿ, ವೀರೇಶ ನೆಗಳೂರಮಠ, ಶಶಿಧರ ಅಕ್ಕಿ, ಮಂಜುನಾಥ ಕಳಸೂರ, ಅಂಬರೀಷ್ ದೊಡ್ಡಮಲ್ಲಪ್ಪನವರ, ವಿಜಯಕುಮಾರ ತಗಡಿನಮನಿ, ಅನಿಲಕುಮಾರ ಕೆಂಡದ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ. ರಾಮು ಮೂಲಗಿ ಉದ್ಘಾಟಿಸಲಿದ್ದಾರೆ. ಸಾಹಿತಿ ಬಸವರಾಜ ಬೆಂಗೇರಿ ಅಧ್ಯಕ್ಷತೆ ವಹಿಸುವರು. ಅನೇಕ ಕಲಾವಿದರು ತಮ್ಮ ಕಲೆಗಳನ್ನು ಪ್ರರ್ದಸಲಿದ್ದಾರೆ ಎಂದು ಹೇಳಿದರು.

    ಕಸಾಪ ಅಧ್ಯಕ್ಷ ಎಸ್.ಎನ್. ಅರಳಿಕಟ್ಟಿ, ಎಂ.ಟಿ. ಅಕ್ಕಿ, ಸಿ.ಬಿ. ಪಾಟೀಲ, ಎಸ್.ಕೆ. ಗದಿಗಿನಮಠ, ಜೆ.ಡಿ ಘೊರ್ಪಡೆ, ರಾಮನಗೌಡ ಪಾಟೀಲ, ಬೀರಪ್ಪ ಕುರಬರ, ಎಂ.ಕೆ. ಹಿರೇಗೌಡ್ರ, ಬಿ.ಎಲ್. ಪಾಟೀಲ, ರಮೇಶ ಅತ್ತಿಗೇರಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts