More

    ಕಳಸಕೊಪ್ಪ ಕೆರೆಯಿಂದ ಬೆಳೆಗೆ ನೀರು ಬಿಡಿ, ಶಾಸಕರಿಗೆ ಮನವಿ

    ಕಲಾದಗಿ: ನೀರಿಲ್ಲದೇ ಬೆಳೆಗಳು ಒಣಗುತ್ತಿದ್ದು, ಅವುಗಳನ್ನು ಉಳಿಕೊಳ್ಳಲು ಕಳಸಕೊಪ್ಪ ಕೆರೆಯಿಂದ ಕಾಲುವೆ ಮೂಲಕ ನೀರನ್ನು ಬಿಡಬೇಕು ಎಂದು ಆಗ್ರಹಿಸಿ, ಕಲಾದಗಿ, ಕಳಸಕೊಪ್ಪ, ಗೋವಿಂದ ಕೊಪ್ಪ, ಚಿಕ್ಕಶೆಲ್ಲಿಕೇರಿ, ಅಂಕಲಗಿ ಮುಂತಾದ ಗ್ರಾಮಗಳ ರೈತರು ಶಾಸಕ ಜೆ.ಟಿ.ಪಾಟೀಲ ಅವರಿಗೆ ಮಂಗಳವಾರ ಸಂಜೆ ಮನವಿ ಸಲ್ಲಿಸಿದರು.

    ಭೂಮಿಪೂಜೆಗೆಂದು ದೇವನಾಳ ಗ್ರಾಮಕ್ಕೆ ಶಾಸಕರು ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ತುಳಸಿಗೇರಿಯಲ್ಲಿ ಶಾಸಕ ಜೆ.ಟಿ.ಪಾಟೀಲ ಅವರನ್ನು ಭೇಟಿಯಾದ ರೈತರು, ಅಂತರ್ ಜಲ ಕುಸಿತದಿಂದ ಇದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಇದರಿಂದಾಗಿ ಜಮೀನಿನಲ್ಲಿ ಬೆಳೆದು ನಿಂತಿರುವ ಗೋಧಿ, ಕಡಲೆ, ಮೆಕ್ಕೆಜೋಳ, ಅಲಸಂದಿ, ಸದಕ ಮುಂತಾದ ಬೆಳೆಗಳು ಒಣಗುವ ಹಂತ ತಲುಪುತ್ತಿದೆ. ಈ ಎಲ್ಲಾ ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು, ಕಳಸಕೊಪ್ಪ ಕೆರೆಯಿಂದ ಕಾಲುವೆ ಮೂಲಕ ಎರಡರಿಂದ ಮೂರು ಬಾರಿ ನೀರು ಬಿಡಿಸಿದರೆ ಬೆಳೆಗಳು ಉಳಿಯುತ್ತದೆ. ದಯವಿಟ್ಟು ನೀರು ಬಿಡಿಸುವುದರ ಮೂಲಕ ಕೈಗೆ ಬಂದಿರುವ ಬೆಳೆಗಳನ್ನು ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.

    ರೈತರ ಮನವಿಯನ್ನು ಆಲಿಸಿದ ಶಾಸಕರು, ಸದ್ಯದ ಪರಿಸ್ಥಿತಿಯಲ್ಲಿ ಕೆರೆ, ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ಕೇವಲ ಕುಡಿಯುಲು ಮಾತ್ರ ಬಳಸಬೇಕು ಎಂದು ಸರ್ಕಾರದ ಸ್ವಷ್ಟ ಆದೇಶವಿದೆ. ಈಗ ನೀರು ಬಿಡಿಸುವುದು ಕಷ್ಟಸಾಧ್ಯ. ಆದರೂ ಸಂಬಂಧಿತರೊಂದಿಗೆ ವಸ್ತುಸ್ಥಿತಿ ಮನವರಿಕೆ ಮಾಡಿ ಮೂರು ದಿನಗಳ ಕಾಲ ಕಾಲುವೆಗೆ ನೀರು ಬಿಡಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

    ಹೆಚ್ಚುವರಿ ನೀರಿಗಾಗಿ ಸಂಬಂಧಿಸಿದವರೊಂದಿಗೆ ಮಾತನಾಡುತ್ತೇನೆ ಎಂದ ಶಾಸಕರು, ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರಿಗೂ ಮನವಿಯನ್ನು ಸಲ್ಲಿಸಲು ರೈತರಿಗೆ ಸೂಚಿಸಿದರು.

    ರೈತ ಮುಖಂಡರಾದ ತಿಮ್ಮನಗೌಡ ಗೌಡರ್, ಮಂಜುಗೌಡ ಗೌಡರ, ಮಲ್ಲಪ್ಪ ಪಾಣಿಶೆಟ್ಟರ್, ಕಲ್ಲಪ್ಪ ಯಂಡಿಗೇರಿ, ಪ್ರಭು ಶಿವಾಪುರ, ತಿಪ್ಪಣ್ಣ ಬೀಡಕಿ, ಹನುಮಂತ ಬಳೂಲದ, ದಯಾನಂದ ದೇಶಮುಖ, ರಾಮನಗೌಡ ಪಾಟೀಲ, ತಿಪ್ಪಣ್ಣ ಸೊನ್ನದ, ಅಶೋಕ ಜೀರಗಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts