More

    ಕಲ್ಲಂಗಡಿ ಖರೀದಿಸಿ ಬೆಳೆಗಾರರಿಗೆ ನೆರವು

    ಕುಮಟಾ: ಕಳೆದ ವರ್ಷ ಲಾಕ್​ಡೌನ್ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ ಖರೀದಿಸಿ ಜನರಿಗೆ ಹಂಚುವ ಮೂಲಕ ಜನಸೇವೆಗೈದಿದ್ದ ಶಾಸಕ ದಿನಕರ ಶೆಟ್ಟಿ ಈ ಬಾರಿಯೂ ಮತ್ತೆ ಲಾಕ್​ಡೌನ್ ವೇಳೆ ಹಣ್ಣು, ತರಕಾರಿ ಬೆಳೆಗಾರರ ನೆರವಿಗೆ ಧಾವಿಸಿದ್ದಾರೆ.

    ಈ ಬಾರಿ ಮತ್ತೆ ಲಾಕ್​ಡೌನ್ ಸಮಯದಲ್ಲಿ ರೈತರು ಮತ್ತು ಜನರಿಗೆ ತಮ್ಮಿಂದಾಗುವ ಸಹಾಯ ಮಾಡಲು ಶಾಸಕರು ಮುಂದಾಗಿದ್ದಾರೆ. ಗೋಕರ್ಣ ಭಾಗದಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣುಗಳನ್ನು ಬುಧವಾರ ಖರೀದಿಸಿರುವ ಶಾಸಕ ದಿನಕರ ಶೆಟ್ಟಿ ಅವರು ಅವುಗಳನ್ನು ತಾಲೂಕು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಕರೊನಾ ಸೇನಾನಿಗಳಿಗೆ ಹಾಗೂ ಕಲಭಾಗದ ಅಳ್ವೇದಂಡೆ ಸುತ್ತಲಿನ ಪ್ರದೇಶಗಳ ಮೀನುಗಾರರು ಇತರರಿಗೆ ಹಂಚಿದ್ದಾರೆ.

    ಕಳೆದ ವರ್ಷ 60 ಲೋಡ್ ತರಕಾರಿ ವಿತರಣೆ: ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ತರಕಾರಿ ಬೆಳೆಗಳನ್ನು ಮಾರಲಾಗದೇ ಸಮಸ್ಯೆಯಲ್ಲಿದ್ದ ಗೋಕರ್ಣ ಹಾಗೂ ವಿವಿಧೆಡೆಯ ರೈತರಿಂದ 60 ಲೋಡ್​ಗಳಿಗೂ ಹೆಚ್ಚು ತರಕಾರಿ ಖರೀದಿಸಿ ತಿಂಗಳಾನುಗಟ್ಟಲೆ ಕುಮಟಾ- ಹೊನ್ನಾವರ ವಿಧಾನಸಭೆ ಕ್ಷೇತ್ರದಲ್ಲಿ ಜನರ ಮನೆಗಳಿಗೆ ಉಚಿತವಾಗಿ ತರಕಾರಿ ಹಂಚಿದ್ದರು.

    ಲಾಕ್​ಡೌನ್​ನಿಂದ ತರಕಾರಿ, ಹಣ್ಣುಹಂಪಲು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತಾಲೂಕಿನಲ್ಲಿ 30 ಟನ್​ಗೂ ಹೆಚ್ಚು ಕಲ್ಲಂಗಡಿ ಬೆಳೆಯಲಾಗುತ್ತಿದ್ದು, ಎಲ್ಲವನ್ನೂ ಖರೀದಿಸಿ ಉಚಿತವಾಗಿ ಹಂಚುತ್ತೇನೆ. ಕಳೆದ ವರ್ಷದಂತೆ ತರಕಾರಿಯನ್ನೂ ಖರೀದಿಸಿ ಹಂಚುವ ಉದ್ದೇಶವಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಸದ್ಯ ಲಭ್ಯವಿಲ್ಲ. ಲಾಕ್​ಡೌನ್​ನಿಂದ ಸಂತ್ರಸ್ತರು ಮತ್ತು ಕರೊನಾ ಸೇನಾನಿಗಳಿಗೆ ನನ್ನ ಕೈಲಾದಷ್ಟು ನೆರವು ಮತ್ತು ಬೆಂಬಲ ನೀಡುವ ಕಾರ್ಯ ಮುಂದುವರಿಯಲಿದೆ.
    | ದಿನಕರ ಶೆಟ್ಟಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts