More

    ಕಲ್ಯಾಣ ಕರ್ನಾಟಕ ಜೆಡಿಎಸ್ ಗುರಿ 20

    ಬೀದರ್: ಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗುರಿ ಏನಿದ್ದರೂ 123 ಇದೆ. ಕಲ್ಯಾಣ ಕನರ್ಾಟಕ ಭಾಗದ 40 ಸ್ಥಾನಗಳ ಪೈಕಿ 20ರಲ್ಲಿ ಗೆಲುವು ಸಾಧಿಸುವ ಗುರಿ ಹೊಂದಲಾಗಿದೆ ಎಂದು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ನಗರದಲ್ಲಿ ಶುಕ್ರವಾರ ಜೆಡಿಎಸ್ನಿಂದ ಆಯೋಜಿಸಿದ್ದ ಕಲ್ಯಾಣ ಕನರ್ಾಟಕ ವಿಭಾಗದ ಸಮಾಲೋಚನೆ ಹಾಗೂ ಚುನಾವಣೆ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿ, ಬರುವ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಮ್ಮ ಏಕೈಕ ಗುರಿ. ಹೀಗಾಗಿ ಕಲ್ಯಾಣ ಕನರ್ಾಟಕ ಭಾಗದ ಸಭೆ ಇಲ್ಲಿ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

    ಮೈತ್ರಿ ಆಡಳಿತ ಹೇಗೆ ಎನ್ನುವುದು ಈಗಾಗಲೇ ನೋಡಿದ್ದೇವೆ. ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಈಗಿನಿಂದಲೇ ಕಾಯರ್ಾಚರಣೆ ಶುರು ಮಾಡಲಾಗಿದೆ. ಜನತಾ ಜಲಧಾರೆ ಯಾತ್ರೆ ಯಶಸ್ವಿಯಾಗಿ ನಡೆಸಲಾಗಿದೆ. ಬರುವ ದಿನಗಳಲ್ಲಿ ಪಂಚ ರತ್ನ ಯಾತ್ರೆಗಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದೆ. 120 ದಿನ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬೂತ್ ಮಟ್ಟದಿಂದ ಮಜಬೂತ್ ಮಾಡಲಾಗುವುದು ಎಂದು ಹೇಳಿದರು.

    ಪಕ್ಷದ ಎಲ್ಲ ಘಟಕಗಳ ಪ್ರಮುಖರಿಗೆ ಕಳೆದ ವರ್ಷ ಬೆಂಗಳೂರಿನಲ್ಲಿ ಒಂದು ವಾರ ತರಬೇತಿ ನೀಡಿ ಸಂಘಟನೆ ಬಲಪಡಿಸಲು ತಿಳಿಸಲಾಗಿತ್ತು. ಕೆಲವು ಕಡೆ ಯಶಸ್ವಿಯಾಗಿ ಪಕ್ಷ ಸಂಘಟನೆ ನಡೆಯುತ್ತಿದೆ. ಆದರೆ ಇನ್ನೂ ಕೆಲವು ಕಡೆ ಸಮಾಧಾನ ತಂದಿಲ್ಲ. ಎಲ್ಲ ಘಟಕಗಳ ಪದಾಧಿಕಾರಿಗಳು ಶ್ರಮ ವಹಿಸಿದ್ದರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ ಎಂದರು.

    ಕಲ್ಯಾಣ ಕನರ್ಾಟಕ ಎಂದು ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಭಾಗಕ್ಕೆ ಹೆಸರು ಬದಲಾವಣೆ ಮಾಡಿದರೆ ಸಾಲದು. ಅದರಂತೆ ಅಭಿವೃದ್ಧಿ ಮಾಡಬೇಕಾಗಿದೆ. ಕಲ್ಯಾಣ ಕನರ್ಾಟಕ ಸೇರಿ ಉತ್ತರ ಕನರ್ಾಟಕದಲ್ಲಿ ಹಲವು ಸಂಕಷ್ಟಗಳಿವೆ. ಅತಿವೃಷ್ಟಿ, ಬೆಳೆ ಹಾನಿ, ಪೌಷ್ಟಿಕ ಆಹಾರ ಕೊರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿದ್ದರೂ ಸಕರ್ಾರ ಸ್ಪಂದಿಸುತ್ತಿಲ್ಲ. ಬಿಜೆಪಿ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಬಗ್ಗೆಯೂ ಒಲವು ಇಲ್ಲ ಎಂದು ತಿಳಿಸಿದರು.

    ಗೆಲ್ಲುವ ಸಾಮಥ್ರ್ಯ ಇರುವ ಅಭ್ಯಥರ್ಿಗಳನ್ನು ಹುಡುಕಾಟ ಮಾಡಲಾಗುತ್ತಿದೆ. ಕೆಲವು ಕಡೆ ಉತ್ತಮ ಅಭ್ಯಥರ್ಿಗಳು ಬರಲು ಸಿದ್ಧರಾಗಿದ್ದರೂ ನಮ್ಮವರೇ ಅಡ್ಡಗಾಲು ಆಗಿದ್ದಾರೆ. ಅವರು ಬಂದರೆ ನಮಗೆ ಕಂಠಕ ಎನ್ನುವ ಭಾವನೆ ಇದೆ. ಇದು ಮೊದಲು ತೆಗೆದು ಹಾಕಬೇಕು. ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಏಕೈಕ ಗುರಿಯಾಗಬೇಕು ಎಂದು ಸಲಹೆ ನೀಡಿದರು.

    ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಬಂಡೆಪ್ಪ ಖಾಶೆಂಪುರ, ವೆಂಕಟರಾವ ನಾಡಗೌಡ, ಮಾಜಿ ಸಚಿವ ಎಂ.ಎನ್. ನಬಿ, ಶಮಸುಲ್ಲಾ ಖಾನ್, ಬಸವರಾಜ ಪಾಟೀಲ್ ಹಾರೂರಗೇರಿ ಇತರರಿದ್ದರು. ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಸ್ವಾಗತಿಸಿದರು.

    ರಾಜ್ಯಾದ್ಯಂತ ಪಂಚ ರತ್ನ ಯಾತ್ರೆ: ಈಗಾಗಲೇ ಜನತಾ ಜಲಧಾರೆ ಯಾತ್ರೆ ಯಶಸ್ವಿಯಾಗಿ ಮುಗಿದಿದ್ದು, ಬರುವ ಆಗಸ್ಟ್ನಲ್ಲಿ ಪಂಚ ರತ್ನ ಯಾತ್ರೆ ಆರಂಭಿಸಲಾಗುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯ ಯೋಜನೆಗಳನ್ನು ಜನರಿಗೆ ತಿಳಿಸಲು ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಾಗುತ್ತಿದೆ. ಒಟ್ಟು 4 ಹಂತಗಳಲ್ಲಿ ಸುಮಾರು 120 ದಿನಗಳ ಕಾಲ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ಎರಡನೇ ಹಂತದಲ್ಲಿ ಕಲ್ಯಾಣ ಕನರ್ಾಟಕ ಭಾಗಕ್ಕೆ ಯಾತ್ರೆ ಬರಲಿದೆ ಎಂದರು. ಶಿಕ್ಷಣ, ನೀರಾವರಿ ಸೇರಿ ವಿವಿಧ 5 ವಿಷಯಗಳನ್ನು ಮುಂದಿಟ್ಟುಕೊಂಡು ಪಂಚ ರತ್ನ ಯೋಜನೆ ಸಿದ್ಧಪಡಿಸಲಾಗಿದೆ. ಪ್ರತ್ಯೇಕ ಐದು ರಥಗಳು ಏಕಕಾಲಕ್ಕೆ ಚಾಲನೆಗೊಳ್ಳಲಿವೆ. ಟ್ಯಾಬ್ಲೊ ಮಾದರಿಯಲ್ಲಿ ಈ ವಾಹನಗಳು ಪ್ರಚಾರ ನಡೆಸಲಿವೆ. ಪ್ರತಿ ದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಒಂದು ಕ್ಷೇತ್ರದಲ್ಲಿ ಸಂಚರಿಸಲಿದೆ. ಬಳಿಕ ಹಳ್ಳಿಯ ದೇವಾಲಯ ಅಥವಾ ಸಕರ್ಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಲಾಗುವುದು ಎಂದು ಹೇಳಿದರು.

    ಕೆಲಸ ಮಾಡದ ಜಿಲ್ಲಾ ಘಟಕ ವಿಸರ್ಜನೆ: ಪಕ್ಷದ ನೀಡುವ ಸೂಚನೆ, ಸಲಹೆದಂತೆ ಕೆಲಸ ಮಾಡದ ಪಕ್ಷದ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಎಚ್ಚರಿಕೆ ನೀಡಿದರು. ನಮ್ಮ ಜತೆ ದಿನದ 24 ಗಂಟೆ ಕೆಲಸ ಮಾಡಲು ತಯ್ಯಾರಿ ಇದ್ದವರು ಮಾತ್ರ ಪಕ್ಷದಲ್ಲಿ ಉಳಿಯಿರಿ. ಜನತಾ ದಳ ಸಂಘಟನೆ ಬಲಿಷ್ಠಗೊಳಿಸಬೇಕಿದೆ. ಇದಕ್ಕಾಗಿ ನಾನು ಪ್ರತಿ ಜಿಲ್ಲೆಗೆ ಭೇಟಿ ಕೊಡುತ್ತೇನೆ. ಜಿಲ್ಲಾಧ್ಯಕ್ಷರು ಪ್ರತಿ ತಿಂಗಳಲ್ಲಿ 20 ದಿನ ಪಟ್ಟಣ, ಹಳ್ಳಿಗಳಲ್ಲಿ ಪ್ರವಾಸ ಮಾಡಬೇಕು ಎಂದು ನಿದರ್ೇಶನ ನೀಡಿದರು.

    ಜೆಡಿಎಸ್ಗೆ ಒಳ್ಳೆಯ ಕಾಲ ಬರಲಿದೆ. ಮತ್ತೆ ಕುಮಾರಸ್ವಾಮಿ ನೇತತ್ವದಲ್ಲಿ ಸಕರ್ಾರ ರಚನೆಯಾಗುವುದು ನಿಶ್ಚಿತ. ನಾನು ಅಧಿಕಾರ ತ್ಯಾಗ ಮಾಡಿ ಜೆಡಿಎಸ್ಗೆ ಬಂದಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ನೋಡಬೇಕಿದೆ. ಇಷ್ಟು ದಿನ ಕಷ್ಟಗಳನ್ನು ಎದುರಿಸುತ್ತಿದ್ದೀರಿ. ಮುಂದೆ ಒಳ್ಳೆಯ ದಿನಗಳು ಅನುಭವಿಸುತ್ತೀರಿ ಎಂದು ಭವಿಷ್ಯ ನುಡಿದರು.

    ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಪಕ್ಷದ ಯೋಜನೆ ಕುರಿತು ಎಲ್ಇಡಿ ಹೊಂದಿರುವ ವಾಹನ ಕಳುಹಿಸಲಾಗುವುದು. ಅಲ್ಲಿನ ಆಕಾಂಕ್ಷಿ ಅಭ್ಯಥರ್ಿ ಹಾಗೂ ಪದಾಧಿಕಾರಿಗಳು ಪ್ರತಿ ಹಳ್ಳಿಗೆ ವಾಹನವನ್ನು ತೆಗೆದುಕೊಂಡು ಹೋಗಿ ನಮ್ಮ ಸಾಧನೆ, ಮುಂದಿನ ಯೋಜನೆ ಕುರಿತು ಜನರಿಗೆ ತೋರಿಸಬೇಕು.
    | ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

    ಬರುವ ಚುನಾವಣೆಯಲ್ಲಿ ಕಲ್ಯಾಣ ಕನರ್ಾಟಕ ಭಾಗದ 40 ಕ್ಷೇತ್ರಗಳ ಪೈಕಿ ಜೆಡಿಎಸ್ ಕನಿಷ್ಠ 18ರಿಂದ 20ರಲ್ಲಿ ಅಭ್ಯಥರ್ಿಗಳನ್ನು ಗೆಲ್ಲಿಸಿ ತರುವ ಪ್ರಯತ್ನ ನಡೆದಿವೆ. ಇದಕ್ಕಾಗಿ ಹಗಲು ರಾತ್ರಿ ಎಲ್ಲರೂ ಶ್ರಮಿಸಿ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ.
    | ಬಂಡೆಪ್ಪ ಖಾಶೆಂಪುರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts