More

    ಕಲ್ಯಾಣದ ಅಭಿವೃದ್ಧಿ ಬಾಗಿಲು ತೆರೆಯುತ್ತಾ?

    ಮಾರ್ಥಂಡ ಜೋಶಿ ಬಸವಕಲ್ಯಾಣ
    ಮಹಾತ್ಮ ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿರುವುದು ಬಸವಭಕ್ತರಲ್ಲಿ ಖುಷಿ ತಂದಿದೆ. ಕಲ್ಯಾಣದ ಸಮಗ್ರ ಪ್ರಗತಿಗೆ ಇನ್ನಷ್ಟು ವೇಗ ಸಿಗುವುದೆಂಬ ಭರವಸೆಯೂ ಮೂಡಿಸಿದೆ.

    ಕಲ್ಯಾಣವನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ಆಶಯದೊಂದಿಗೆ 16 ವರ್ಷ ಹಿಂದೆ ರಚಿತ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ(ಬಿಕೆಡಿಬಿ) ವತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಕೆಲಸ ನಡೆದಿಲ್ಲ. ರಾಜಕೀಯ ಇಚ್ಛಾಶಕ್ತಿಯ ಜತೆಗೆ ಅನುದಾನದ ಕೊರತೆಯಿಂದ ಮಂಡಳಿ ಸ್ಥಾಪನೆಯ ಮೂಲ ಆಶಯಕ್ಕೆ ಹಿನ್ನಡೆಯಾಗಿದೆ. ಮಂಡಳಿ ಅಧ್ಯಕ್ಷರೂ ಆಗಿರುವ ಸಿಎಂ ಭೇಟಿ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ ಎಂಬ ಸದಾಶಯ ಬಸವಭಕ್ತರು ಹೊಂದಿದ್ದಾರೆ.

    ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಆದ ನಂತರ ಪ್ರಥಮ ಬಾರಿಗೆ ಕಲ್ಯಾಣಕ್ಕೆ ಆಗಮಿಸುತ್ತಿದ್ದಾರೆ. ಜತೆಗೆ ಕಲ್ಯಾಣದ ಅಭಿವೃದ್ಧಿ ಬಗ್ಗೆ ಆಸಕ್ತಿ, ಕಾಳಜಿ ಇರುವ ಮಾಜಿ ಸಿಎಂ ಯಡಿಯೂರಪ್ಪ ಬರುತ್ತಿದ್ದಾರೆ. ಕಲ್ಯಾಣದ ಹಿತ ಬಯಸುವರು ಒಂದೇ ವೇದಿಕೆಯಲ್ಲಿ ಇರಲಿರುವುದು ವಿಶೇಷ. ನೂತನ ಅನುಭವ ಮಂಟಪ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ. ಐತಿಹಾಸಿಕ ಪರುಷ ಕಟ್ಟೆ ಜಿಣರ್ೋದ್ಧಾರಕ್ಕೆ ಸಿದ್ಧತೆ ನಡೆದಿದೆ. ಬಿಕೆಡಿಬಿ ಮೊದಲ ಹಂತದ ಕೆಲಸಗಳು ಪೂರ್ಣಗೊಂಡಿದ್ದು, ಎರಡನೇ ಹಂತದ ಕೆಲಸಗಳಿಗೆ ಚಾಲನೆ ಜತೆಗೆ ವೇಗ ಸಿಗಬೇಕಿದೆ. ಕಲ್ಯಾಣಕ್ಕೆ ಸಾಂಸ್ಕೃತಿಕ ನಗರವನ್ನಾಗಿಸುವ ಚಿಂತನೆ ಇದೆ. ಇದಕ್ಕೆ ಪೂರಕ ಕೆಲಸಗಳು ಶುರು ಮಾಡಬೇಕಿದೆ.

    ನಗರದ ರಥ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿರುವ 5 ವರ್ಷದ ಯಾತ್ರಾ ಪರ್ವ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಬೊಮ್ಮಾಯಿ ಅವರು ಬಿಕೆಡಿಬಿ ಭವನದಲ್ಲಿ ಸಭೆ ನಡೆಸಿ ಮಂಡಳಿ ಕೆಲಸದ ಅವಲೋಕನ ನಡೆಸಲಿದ್ದಾರೆ. ಹೀಗಾಗಿ ಸಿಎಂ ಭೇಟಿ ಮಹತ್ವ ಪಡೆದಿದೆ.

    ನೂತನ ಅನುಭವ ಮಂಟಪ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ. ಏ.11ಕ್ಕೆ ಬಿಡ್ ತೆರಯಲಾಗುತ್ತಿದೆ. ಬಿಕೆಡಿಬಿ ಎರಡನೇ ಹಂತದ ಕೆಲಸಕ್ಕೆ ಆದ್ಯತೆ ನೀಡಬೇಕಿದೆ. ಐತಿಹಾಸಿಕ ಕೋಟೆ ಜೀರ್ಣೋದ್ಧಾರ, ಪಂಚಸೂತ್ರ ಗವಿ, ವಿಜ್ಞಾನೇಶ್ವರ ಗವಿ, ಎಳೆಹೂಟಿ ಸ್ಥಳ, ನಾರಾಯಣಪುರ, ಶಿವಪುರದಲ್ಲಿ ಶಿವ ಮಂದಿರ ಸೇರಿ 10 ತಾಣಗಳ ಅಭಿವೃದ್ಧಿ ಕಾರ್ಯ ಎರಡನೇ ಹಂತದ ಪ್ರಸ್ತಾವನೆಯಲ್ಲಿ ಸೇರಿವೆ.

    4 ವರ್ಷದಿಂದ ನಡೆದಿಲ್ಲ ಬಸವ ಉತ್ಸವ: ಬಸವ ತತ್ವ ಪ್ರಚಾರ, ಪ್ರಸಾರದ ಜತೆಗೆ ಶರಣ ಸಂಸ್ಕೃತಿ ಪರಿಚಯಿಸುವ ಆಶಯದೊಂದಿಗೆ ಬಸವಕಲ್ಯಾಣದಲ್ಲಿ 12 ವರ್ಷಗಳ ಹಿಂದೆ ಬಸವ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಗಿತ್ತು. ಆದರೆ ಸಕರ್ಾರ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಪ್ರತಿ ವರ್ಷ ಉತ್ಸವ ನಡೆಯದೆ ಮೂಲ ಆಶಯಕ್ಕೆ ಹಿನ್ನಡೆ ಆಗಿದೆ. ಬಿ.ಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಲ್ಯಾಣ ಕನರ್ಾಟಕ ಜನರ ಆಶಯಕ್ಕೆ ಸ್ಪಂದಿಸಿ ಬಸವ ಉತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಕಳೆದ 12 ವರ್ಷದಲ್ಲಿ 5 ಸಲ ಮಾತ್ರ ಈ ಉತ್ಸವ ನಡೆದಿದೆ. ನಾಲ್ಕು ವರ್ಷದಿಂದ ಉತ್ಸವಕ್ಕೆ ಮುಹೂರ್ತ ಸಿಗದಿರುವುದು ಗಮನಾರ್ಹ. ಬಸವ ಉತ್ಸವ ಪ್ರತಿ ವರ್ಷ ಆಚರಿಸುವುದಾಗಿ ಮತ್ತು ಈ ಸಂಬಂಧ ಅಧಿಸೂಚನೆ ಹೊರಡಿಸುವುದಾಗಿ ನೀಡಿದ ಭರವಸೆ ಹುಸಿಯಾಗಿದೆ.

    ಐತಿಹಾಸಿಕ ಕೋಟೆಗೆ ಬೇಕಿದೆ ಕಾಯಕಲ್ಪ: ದೇಶದಲ್ಲಿನ ಚಾರಿತ್ರಿಕ ಕೋಟೆಗಳಲ್ಲಿ ಕಲ್ಯಾಣದ ಕೋಟೆಯೂ ಒಂದು. ಚಾಲುಕ್ಯರ ರಾಜಧಾನಿಯಾಗಿ ಮೆರೆದ ಕಲ್ಯಾಣ ಮಹಾತ್ಮ ಬಸವಣ್ಣನವರ ಕಾಯಕ ಕ್ಷೇತ್ರ ಎನ್ನುವುದು ವಿಶೇಷ. ಕಲ್ಯಾಣದ ಚಾಲುಕ್ಯರು ಈ ಕೋಟೆ ಕಟ್ಟಿಸಿದ್ದು, ಗತ ವೈಭವ ನೆನಪಿಸುವ ಈ ಕೋಟೆ ಅರಸೊತ್ತಿಗೆಗಳು ಬದಲಾದಂತೆ ಬದಲಾವಣೆ ಕಂಡಿದೆ. ಆದರೂ ತನ್ನದೇ ಆದ ವೈಶಿಷ್ಟೃತೆ ಉಳಿಸಿಕೊಂಡ ಈ ಕೋಟೆ ಸದ್ಯಕ್ಕೆ ದುಸ್ಥಿತಿಗೆ ತಲುಪಿದೆ. ಸಕರ್ಾರ ಮತ್ತು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ಲಕ್ಷದಿಂದ ಸೂಕ್ತ ನಿರ್ವಹಣೆ ಇಲ್ಲದೆ ಕೋಟೆ ಶಿಥಿಲಾವಸ್ಥೆಯಲ್ಲಿದೆೆ. ಹಲವೆಡೆಯ ಗೋಡೆಗಳು ಬಿದ್ದಿವೆ. ಬಿದ್ದಿರುವ ಗೋಡೆಗಳನ್ನು ಯಥಾಸ್ಥಿತಿ ನಿಮರ್ಿಸಿ, ಪುನಶ್ಚೇತನಗೊಳಿಸುವ ಕೆಲಸ ಕೈಗೊಳ್ಳುವ ಅಗತ್ಯವಿದೆ. ಬಿಕೆಡಿಬಿ ಎರಡನೇ ಹಂತದ ಕೆಲಸಗಳಲ್ಲಿ ಕಲ್ಯಾಣದ ಕೋಟೆ ಸಂರಕ್ಷಣೆ ಸಹ ಸೇರಿದೆ. ಆದರೆ ಅದಿನ್ನೂ ಪ್ರಸ್ತಾವನೆ ಹಂತದಲ್ಲಿಯೇ ಉಳಿದಿದೆ.

    ಐದು ವರ್ಷದ ಯಾತ್ರಾ ಪರ್ವ: ಅನುಭವ ಮಂಟಪ ನಿರ್ಮಾಣ ಅನುಷ್ಠಾನ ಸಮಿತಿ ಅಧ್ಯಕ್ಷರೂ ಆಗಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಬಸವಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿಸುವ ಆಶಯದೊಂದಿಗೆ 5 ವರ್ಷದ ಯಾತ್ರಾ ಪರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ರಥ ಮೈದಾನದಲ್ಲಿ ವಿಕಾಸ ಅಕಾಡೆಮಿ ಕಲಬುರಗಿ ಹಾಗೂ ಬಸವಕಲ್ಯಾಣ-ಕಲ್ಯಾಣ ಕನರ್ಾಟಕ ಕ್ಷೇತ್ರ ಯಾತ್ರಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಈ ಕಾರ್ಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಲಿದ್ದಾರೆ.

    ಜಿಲ್ಲಾ ಕೇಂದ್ರವಾಗುವ ಅರ್ಹತೆ: ಐತಿಹಾಸಿಕ ನಗರ ಬಸವಕಲ್ಯಾಣಕ್ಕೆ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆನ್ನುವುದು ಇಲ್ಲಿಯ ಜನರ ದಶಕದ ಬೇಡಿಕೆ. ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಕಲ್ಯಾಣ ಹೊಂದಿದೆ ಎನ್ನುವುದು ಪ್ರಮುಖರ ಸಮರ್ಥನೆಯಾಗಿದೆ. ಶರಣರ ಕಾರ್ಯಕ್ಷೇತ್ರವಾಗಿರುವ ಕಲ್ಯಾಣ ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜಿಲ್ಲೆಯ ಎರಡನೇ ದೊಡ್ಡ ವ್ಯಾಪಾರ ಕೇಂದ್ರವೂ ಹೌದು. ರಾಜ್ಯದಲ್ಲಿ ಹೆಚ್ಚು ಲಾರಿಗಳು ಹೊಂದಿದ ತಾಲೂಕು ಕೇಂದ್ರಗಳಲ್ಲಿ ಅಗ್ರಸ್ಥಾನವಿದೆ. ಇದು ಜಿಲ್ಲಾ ಕೇಂದ್ರವಾದರೆ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರು. ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ಕಲ್ಯಾಣದ ಗತವೈಭವ ಮರು ಸ್ಥಾಪಿಸಬೇಕೆನ್ನುವುದು ಜನರ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಯೋಜನೆ ರೂಪಿಸುವುದು ಸಕರ್ಾರದ ಚಿಂತನೆಯಾಗಿದೆ. ಬಿಕೆಡಿಬಿ ರಚನೆ ಉದ್ದೇಶವೂ ಇದೇ ಆಗಿದೆ. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕೆಲಸಗಳಿಗೆ ನಿರೀಕ್ಷಿತ ವೇಗ ಸಿಕ್ಕಿಲ್ಲ. ಅನುಭವ ಮಂಟಪ ನಿಮರ್ಾಣಕ್ಕೆ ಈಗ ಕಾಲ ಕೂಡಿಬಂದಿದೆ. 500 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಇದರ ಜತೆಗೆ ಎರಡನೇ ಹಂತದಲ್ಲಿ ಪ್ರಸ್ತಾವಿತ ಕಾಮಗಾರಿಗಳ ಜತೆಗೆ ಶರಣರ ಸ್ಮಾರಕ ಸ್ಥಳಗಳೆಲ್ಲವೂ ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸ ನಡೆಯಬೇಕಿದೆ.

    ಬಸವರಾಜ ಬೊಮ್ಮಾಯಿ ನೇತೃತ್ವದ ಸಕರ್ಾರ ಕಲ್ಯಾಣದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ನೂತನ ಅನುಭವ ಮಂಟಪ ನಿಮರ್ಾಣ ಮತ್ತು ಐತಿಹಾಸಿಕ ಪರುಷ ಕಟ್ಟೆ ಜೀರ್ಣೋದ್ಧಾರವಾಗಬೇಕು ಎನ್ನುವುದು ಈ ಭಾಗದ ಜನರ ಕನಸು ಇದೀಗ ನನಸಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್​ ನಿರ್ಮಾಣಕ್ಕೆ 8 ಎಕರೆ ಜಮೀನು ಮಂಜೂರಿ ಆಗಿದೆ. ಕಲ್ಯಾಣ ಗತವೈಭವ ಕಾಣಬೇಕೆಂಬ ಆಶಯದಿಂದ ಕೆಲಸ ಮಾಡುತ್ತಿರುವೆ.
    | ಶರಣು ಸಲಗರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts