More

    ಕಲೆ, ಕಲಾವಿದರನ್ನು ಗುರುತಿಸಿ


    ಯಾದಗಿರಿ: ಆಧುನಿಕರಣದ ಇಂದಿನ ಭರಾಟೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಮ್ಮ ಪೂರ್ವಜರು ಬಿಟ್ಟ ಹೋದ ಸಂಸ್ಕೃತಿ, ಕಲೆಗಳನ್ನು ಮರೆಯಬಾರದು ಎಂದು ಬಾಗಲಕೋಟೆ ಆರೋಗ್ಯ ಇಲಾಖೆ ಅಧಿಕಾರಿ ಲಕ್ಷ್ಮೀಕಾಂತ್ ಒಂಟಿಪೀರ ಸಲಹೆ ನೀಡಿದರು.

    ನಗರದ ಲುಂಬಿನಿ ವನದಲ್ಲಿ ಭಾನುವಾರ ಸಂಜೆ ಅನಿಕೇತನ ಟ್ರಸ್ಟ್ ಯಾದಗಿರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೊಗದಲ್ಲಿ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಜಾನಪದ ನಮ್ಮ ಸಾಂಸ್ಕೃತಿಕ ಸಂಪತ್ತು ಅದನ್ನು ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಲು ಅವರಲ್ಲಿ ಆಸಕ್ತಿ ಬೆಳೆಸಬೇಕು. ಜಾನಪದ ಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.

    ಇಂದಿನ ಬದಲಾಗುತ್ತಿರುವ ತಂತ್ರಜ್ಞಾನ ಮನಸ್ಥಿತಿ, ಟಿವಿ, ಸಿನಿಮಾ ಸೆಳೆತಗಳ ನಡುವೆ ಇನ್ನೂ ಜಾನಪದ ಕಲೆ ಉಳಿದಿದೆ ಎಂದರೆ ಅದಕ್ಕಿರುವ ಶಕ್ತಿ ಹಾಗೂ ಅದನ್ನು ಬೆಳೆಸಲು ಹೊರಟಿರುವ ಕಲಾವಿದರ ಆಸಕ್ತಿ ಕಾರಣ. ಗ್ರಾಮೀಣ ಭಾಗದ ಶ್ರಮ ಸಂಸ್ಕೃತಿಯ ಪ್ರತೀಕವವಾದ ಈ ಕಲೆಗೆ ಸೂಕ್ತ ವೇದಿಕೆ, ಕಲಾವಿದರಿಗೆ ಪೂರಕ ಅವಕಾಶ, ಪ್ರೋತ್ಸಾಹವನ್ನು ಸಕರ್ಾರ, ಸಮಾಜ ಹಾಗೂ ನಾವೆಲ್ಲ ನೀಡಿ, ನಮ್ಮ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

    ಪತ್ರಕರ್ತ ಬಿ.ಜಿ.ಪ್ರವೀಣಕುಮಾರ ಮಾತನಾಡಿ, ಯಾರಿಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಇರುವುದೊ, ಯಾರು ಸಂಸ್ಕೃತಿಯನ್ನು ಅನುಸರಿಸುತ್ತಾರೊ ಅವರಿಗೆ ಸಂಸ್ಕಾರವಿರುತ್ತದೆ. ಜಾನಪದರು ಸಂಸ್ಕಾರವನ್ನು ಸಾರಿ ಹೇಳಿದ್ದಾರೆ. ಇಂಥ ಅಮೂಲ್ಯವಾದ ಕಲೆಯನ್ನು ಅನಿಕೇತನ ಟ್ರಸ್ಟ್ ಯುವಜನರಿಗೆ ಕಲಿಸಿ, ಮುಂದುವರೆಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts