More

    ಕಲಾವಿದರಿಂದ ಸಾಂಸ್ಕೃತಿಕ ಪರಂಪರೆ ಉಳಿವು, ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ಅಭಿಮತ, ವಿಶ್ವದಗಲಕ್ಕೂ ಹರಡಿದ ಜಾನಪದ ಕಲೆ

    ನೆಲಮಂಗಲ: ನಾಡಿನ ಸಾಂಸ್ಕೃತಿಕ ಪರಂಪರೆ ಉಳಿವಿಗೆ ಕಲಾವಿದರು ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ಅಭಿಪ್ರಾಯಪಟ್ಟರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಂಜೆ ಅಂಜನಾದ್ರಿ ಕಲಾನಿಕೇತನ ಟ್ರಸ್ಟ್ ಆಯೋಜಿಸಿದ್ದ ದಸರಾ ರಂಗ ಸಂಭ್ರಮ-2021ರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗ್ರಾಮೀಣ ಪ್ರದೇಶದ ಜನರಿಂದ ಹುಟ್ಟಿದ ಜಾನಪದ ಕಲೆ ವಿಶ್ವದಗಲಕ್ಕೂ ಹರಡಿದೆ. ಅಂದಿನ ಜನಜೀವನ, ಆಚಾರ-ವಿಚಾರ, ಸಂಸ್ಕೃತಿ ಪ್ರತಿಬಿಂಬವಾಗಿದ್ದ ಜಾನಪದ ಕಲೆಗಳು ಇಂದು ಮನೆಮನಗಳನ್ನು ಬೆಳಗುತ್ತಿವೆ ಎಂದರು.

    ಇತ್ತೀಚಿನ ದಿನಗಳಲ್ಲಿ ದೇಶದ ಎಲ್ಲ ಭಾಷೆಗಳ ದೃಶ್ಯಮಾಧ್ಯಮಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ವಿಶೇಷ ವೇದಿಕೆ ಒದಗಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು

    ಮುಖಂಡ ಜಗದೀಶ್‌ಚೌಧರಿ ಮಾತನಾಡಿ, ಆಧುನಿಕತೆ ಬೆಳೆದಂತೆ ಜಾನಪದ ಕಲೆಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಇಂತಹ ಅಪರೂಪದ ಕಲೆಯನ್ನು ಉಳಿಸಬೇಕು. ಗ್ರಾಮೀಣಭಾಗದಲ್ಲಿ ಮತ್ತೆ ಜಾನಪದ ಕಲಾ ವೈಭವವನ್ನು ಮರು ಸ್ಥಾಪಿಸುವ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡಬೇಕು ಎಂದರು.

    ತಾಲೂಕಿನಲ್ಲಿ ಸುಸಜ್ಜಿತ ಬೃಹತ್ ರಂಗ ಮಂದಿರ ಇಲ್ಲದಿರುವುದು ಬೇಸರದ ಸಂಗತಿ. ರಂಗಮಂದಿರ ನಿರ್ಮಾಣಕ್ಕೆ ಶ್ರಮಿಸಿ ತಾಲೂಕಿನ ರಂಗಕಲಾವಿದರಿಗೆ ಕೊಡುಗೆ ನೀಡುವುದಾಗಿ ತಿಳಿಸಿದರು.

    ವರ್ಷದ ಹಿಂದೆ ದುಬಾರಿ ವೆಚ್ಚದಲ್ಲಿ ನಾಲ್ಕೈದು ಬೃಹತ್ ಕಾರ್ಯಕ್ರಮ ಆಯೋಜಿಸಿದ್ದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡಿಲ್ಲ. ಕಲಾವಿದರ ಸಂಘಗಳು ಸಂಕಷ್ಟಕ್ಕೆ ಒಳಗಾಗಿವೆ. ಸಂಕಷ್ಟದ ಮಧ್ಯೆಯೂ ಕಲೆಯ ಉಳಿಗೆ ಶ್ರಮಿಸಲಾಗುತ್ತಿದೆ ಎಂದು ಅಂಜನಾದ್ರಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ದಿನೇಶ್‌ಚಿಕ್ಕಮಾರನಹಳ್ಳಿ ತಿಳಿಸಿದರು.

     

    ವಿ.ಎಸ್.ಅಶ್ವತ್ಥ್ ರಚಿತ ಚಿಕ್ಕಮಾರನಹಳ್ಳಿ ದಿನೇಶ್ ನಿರ್ದೇಶಿಸಿದ್ದ ರೂಪಾ ದಿನೇಶ್ ರಂಗವಿನ್ಯಾಸ, ಪ್ರಸಾದನ ವಿ.ದೆೇವರಾಜು, ವಸ್ತ್ರಾಲಂಕಾರ ಡಾ.ಎಂ.ಪುಪಷ್ಪಲತಾ, ಚಿಕ್ಕಮಾರನಹಳ್ಳಿ ಗಂಗರಾಜು ಸಂಗೀತ ನಿರ್ದೇಶನದಲ್ಲಿ ಶ್ರೀ ಕೃಷ್ಣಸಂಧಾನ ನಗೆ ನಾಟಕ ಪ್ರದರ್ಶಿಸಲಾಯಿತು.

    ಶಿವಾನಂದ ಆಶ್ರಮದ ಶ್ರೀ ರಮಾಣಾನಂದ ಸ್ವಾಮೀಜಿ, ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ದರಾಜು, ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ಉದ್ಯಮಿ ಚನ್ನತಿಮ್ಮಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆರ್.ಪ್ರಮೋದ್‌ಕುಮಾರ್, ಪ್ರಧಾನಕಾರ್ಯದರ್ಶಿ ಡಿ.ಆರ್.ಅಭಿಷೇಕ್, ಟ್ರಸ್ಟ್ ಕಾರ್ಯದರ್ಶಿ ಕನಕರಾಜು, ಕೆಪಿಸಿಸಿ ಸದಸ್ಯ ಖಲೀಂಉಲ್ಲಾ, ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪ್ರದೀಪ್, ಕಲಾವಿದರಾದ ಪ್ರಕಾಶ್‌ಮೂರ್ತಿ, ದೊಡ್ಡರಾಮಯ್ಯ, ಎಸ್.ಮುನಿರಾಜು, ಕೇಶವಮೂರ್ತಿ, ಎಂ.ಕಿರಣ್, ವೈ.ನಯನಶ್ರೀ, ಕಿರ್ತನ್, ಆರ್.ದಶರಥ, ಆರ್.ರಾಮಕೃಷ್ಣ, ಎ.ಸಾಗರ್, ಭೂಮಿಕಾ ಎಸ್.ರಾವ್, ಮಂಜುನಾಥ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts