More

    ಕಲಬುರಗಿ ಜಿಲ್ಲೆಗೂ ಮಿಡತೆ ಲಗ್ಗೆ ಭೀತಿ

    ಕಲಬುರಗಿ: ಚೀನಿ ವೈರಸ್ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಇನ್ನೂ ಪಾಕಿಸ್ತಾನದ ಮಿಡತೆಗಳು ರೈತರನ್ನು ಕಂಗೆಡಿಸಿವೆ. ಈ ಮಿಡತೆಗಳು ರಾಜಸ್ಥಾನ ಮೂಲಕ ಮಹಾರಾಷ್ಟ್ರವನ್ನು ಪ್ರವೇಶಿಸಿದ್ದು ಕಲಬುರಗಿ ಜಿಲ್ಲೆಯ ರೈತರಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತರಲ್ಲಿ ತಳಮಳ ಶುರು ಮಾಡಿದೆ.
    ಮೂಲಗಳ ಪ್ರಕಾರ ಮಹಾರಾಷ್ಟ್ರದ ಲಾತೂರ ಇನ್ನಿತರ ಜಿಲ್ಲೆಗಳಲ್ಲಿ ಮಿಡತೆ ಕಾಣಿಸಿಕೊಂಡಿವೆ. ಹೀಗಾಗಿ ಲಕ್ಷಾಂತರ ಮಿಡತೆಗಳ ಹಿಂಡು ಜಿಲ್ಲೆಗೆ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ತಳಮಳಕ್ಕೀಡು ಮಾಡಿದೆ.
    ಈಗ ಬಿರುಬೇಸಿಗೆಯಾಗಿದೆ. ಅಲ್ಲದೆ ಹೊಲಗಳಲ್ಲಿ ಬೆಳೆಗಳಿಲ್ಲ. ಅದರೆ, ತೋಟಗಾರಿಕೆ ಬೆಳೆಗಳಾದ ಪಪ್ಪಾಯ, ಕಲ್ಲಂಗಡಿ, ದಾಳಿಂಬೆ,ಮಾವು, ಅಲ್ಲದೆ ತರಕಾರಿ ಬೆಳೆಗಳಿವೆ. ಮಿಡತೆಗಳು ಜಿಲೆಯನ್ನು ಪ್ರವೇಶಿಸಿದರೆ ಈ ಎಲ್ಲ ಬೆಳೆಗಳನ್ನು ತಿಂದು ಹಾಳು ಮಾಡಲಿವೆ. ಅಲ್ಲದೆ ಹುಣಸೆ ಸೇರಿ ಎಲ್ಲ ಹಸಿರು ಗಿಡಗಳ ತಪ್ಪಲು ತಿಂದು ಮೊಟ್ಟೆ ಇಟ್ಟು ಹೋಗುತ್ತವೆ. ಮೊಟ್ಟೆ ಇಟ್ಟು ಹೋದರೆ, ಅವುಗಳ ಸಂತತಿ ಮುಂದುವರಿಯಲಿದೆ.
    ಬೆಳೆಗಳಲ್ಲಿರುವ ಪತ್ರಹರಿತ್ವವನ್ನೇ ತಿಂದು ಹಾಕಿ, ಅದರ ರಸವನ್ನು ಈ ಮಿಡತೆಗಳು ಸೇವಿಸಲಿವೆ. ಹೀಗಾಗಿ ಹೊಲ-ಗದ್ದೆಗಳಲ್ಲಿರುವ ಎಲ್ಲ ತೆರನಾದ ಬೆಳೆಗಳು ತಿಂದು ಹಾಕಲಿವೆ. ಹೀಗಾಗಿ ರೈತರು ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಸಿಕ್ಕಾಪಟ್ಟೆ ಇರುವುದರಿಂದ ಮಿಡತೆ ಉಳಿಯುವುದು ಕಷ್ಟಕರ ಎನ್ನಲಾಗುತ್ತದೆ. ಆದರೂ ನಿರ್ಲಕ್ಷಿಸುವಂತಿಲ್ಲ. ಕಲಬುರಗಿ, ಮಿಡತೆ, ಬೆಳೆ, kalaburagi, locuses, Crops

    ರೈತರು ಮುಂಜಾಗ್ರತೆಯಾಗಿ ಹೊಲದಲ್ಲಿರುವ ತೋಟಗಾರಿಕೆ ಇನ್ನಿತರ ಬೆಳೆಗಳಿಗೆ ಕೀಟನಾಶಕ ಮತ್ತು ಮೊಟ್ಟೆ ನಾಶಪಡಿಸುವ ಔಷಧ ಸಿಂಪಡಿಸಬೇಕು. ಸುದೈವದಿಂದ ಬೇಸಿಗೆಯಾಗಿದ್ದರಿಂದ ಹೊಲಗಳಲ್ಲಿ ಬೆಳೆಗಳು ಇಲ್ಲ. ತೋಟಗಾರಿಕೆ ಬೆಳೆಗಳಿಗೆ ಅಪಾಯವಾಗ ಬಹುದು. ಹೀಗಾಗಿ ರೈತರು ಕೃಷಿ ವಿಜ್ಞಾನಿಗಳಿಂದ ಸಲಹೆ ಪಡೆದುಕೊಂಡು ಔಷಧ ಸಿಂಪರಣೆ ಮಾಡಬೇಕು.
    |ರಿತೇಂದ್ರನಾಥ ಸೂಗೂರು ಜಂಟಿ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts