More

    ಕಲಬುರಗಿಯಲ್ಲಿ ಮತ್ತೆ ಮೂವರಿಗೆ ಪಾಸಿಟಿವ್

    ಕಲಬುರಗಿ: ಜಿಲ್ಲೆಯಲ್ಲಿ ಮಕ್ಕಳನ್ನೂ ಕರೊನಾ ಸೋಂಕು ಬಿಡುತ್ತಿಲ್ಲ. ಮಂಗಳವಾರ ಮತ್ತೆ ಮೂರು ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇವುಗಳಲ್ಲಿ 10 ವರ್ಷದ ಬಾಲಕಿ ಸೇರಿದ್ದು, ಸೋಂಕಿನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯೂ ಎರಡು ಆದಂತಾಗಿದೆ. ಅಲ್ಲದೆ ಒಟ್ಟು ಸೋಂಕಿತರ ಸಂಖ್ಯೆ 16ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.
    ನಿಜಾಮುದ್ದೀನ್ ತಬ್ಲಿಘಿ ಜಮಾತೆ ಸಭೆಗೆ ಹೋಗಿಬಂದಿದ್ದವರ ಜತೆ ಸಂಪರ್ಕ ಹೊಂದಿ ಮೃತರಾದ ಇಬ್ಬರಿಗೆ ಹೊಸದಾಗಿ ದಾಖಲೆಯಾದ ಮೂರು ಸೋಂಕಿತರು ನೇರ ಸಂಬಂಧ ಹೊಂದಿದ್ದಾರೆ. ಈಗಾಗಲೇ ಮೃತಪಟ್ಟ ಪೇಶೆಂಟ್ ನಂ.177ರ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ 10 ವರ್ಷದ ಬಾಲಕಿ (ಪಿ 254) ಮತ್ತು 35 ವರ್ಷದ ಮಹಿಳೆಗೆ (ಪಿ.256) ಕರೊನಾ ದೃಢಪಟ್ಟಿದೆ.
    ಸೋಮವಾರವಷ್ಟೇ ಮೃತನಾದ ಪೇಶೆಂಟ್ 205ರ ಬಟ್ಟೆ ವ್ಯಾಪಾರಿ ಸಹೋದರ (255)ನಿಗೂ ಸೋಂಕು ಇದೆ. ಈ ಮೂವರಿಗೂ ಇಎಸ್ಐ ಐಸೋಲೇಷನ್ ವಾರ್ಡ ಸೇರಿಸಲಾಗಿದ್ದು, ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ.
    ಜಿಲ್ಲೆಯಲ್ಲಿ ಈವರೆಗೆ 413 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಿದ್ದು, ಈ ಪೈಕಿ 16 ಪಾಸಿಟಿವ್ ಬಂದಿವೆ. ಇದರಲ್ಲಿ ಇಬ್ಬರು ಗುಣಮಖರಾಗಿದ್ದು, 357 ಜನರ ನೆಗೆಟಿವ್ ರಿಪೋರ್ಟ ಬಂದಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.
    ತಾಂತ್ರಿಕ ಕಾರಣಗಳಿಂದ ಇಬ್ಬರ ಲ್ಯಾಬ್ ಟೆಸ್ಟ್ ಆಗಿಲ್ಲ. 38 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಎಲ್ಲ ಎಂಟು ಕಂಟೇನ್ಮೆಂಟ್ ಝೋನ್ಗಳಲ್ಲಿ 22549 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ಸ್ 271, ಸೆಕೆಂಡರಿ ಕಾಂಟ್ಯಾಕ್ಟ್ಸ್ 1153, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 870 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನ ಹೋಂ ಕ್ವಾರಂಟೈನ್ ಮುಗಿಸಿದ 799 ಹಾಗೂ 14 ದಿನದ ಅವಧಿ ಪೂರ್ಣಗೊಳಿಸಿದ 171 ಜನರನ್ನು ಮುಕ್ತಗೊಳಿಸಲಾಗಿದೆ. 85 ಜನರನ್ನು ಇಎಸ್ಐಸಿ ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
    ಮಕ್ಕಳಿಗೆ ಕರೊನಾ ಸೋಂಕು ಡಿಸಿಎಂ ಕಾರಜೋಳ ಕಳವಳ: ವಾಡಿಯ ಎರಡು ವರ್ಷದ ಮಗು ಮತ್ತು ಕಲಬುರಗಿ ನಗರದ 10 ವರ್ಷದ ಬಾಲಕಿಗೆ ಕರೊನಾ ಸೋಂಕು ತಗುಲಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಎಲ್ಲ ಮನೆಗಳ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಮತ್ತು ಇತರೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೂಡಲೇ ಎಲ್ಲ ಮನೆಗಳ ಸಮೀಕ್ಷೆ ಮಾಡಿ ಸಕರ್ಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕೆಂದು ಸಲಹೆ ಮಾಡಿದ್ದಾರೆ. ಅದೇ ರೀತಿ ವಾಡಿ ಮತ್ತು ಶಹಾಬಾದ್ಗಳಲ್ಲೂ ಮನೆಗಳ ಸಮೀಕ್ಷೆ ತಕ್ಷಣ ಆರಂಭಿಸುವಂತೆ ಸೂಚಿಸಿದ್ದಾರೆ.ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲಾಡಳಿತ ಕೆಲಸ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಿದೆ.
    ಕಂಟೇನ್ಮೆಂಟ್ ಕಮಿಟಿ
    ಆಯಾ ಪ್ರದೇಶದ ಡಿವೈಎಸ್ಪಿ, ಕಲಬುರಗಿ ಟಿಎಚ್ಒ (9448652625), ಚಿತ್ತಾಪುರ ಟಿಎಚ್ಒ (98457 08581), ಅಫಜಲಪುರ ಟಿಎಚ್ಒ (99013 53337), ಟಿಎಚ್ಒ ಆಳಂದ (87224 48020), ಟಿಎಚ್ಒ ಚಿಂಚೋಳಿ (99723 60209), ಟಿಎಚ್ಒ ಜೇವಗರ್ಿ (81399 05322), ಟಿಎಚ್ಒ ಸೇಡಂ (99721 38929), ಸಂಬಂಧಿಸಿದ ಪ್ರದೇಶದ ಪಿಎಚ್ಸಿ ಎಎಂಒಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts