More

    ಕಲಘಟಗಿ ಬಿಇಒ ಕಚೇರಿ ಕಲಾಮಯ

    ಕಲಘಟಗಿ: ಲಾಕ್​ಡೌನ್​ನ ಎರಡ್ಮೂರು ತಿಂಗಳ ರಜೆ ಅವಧಿಯಲ್ಲಿ ತಾಲೂಕಿನ ಪ್ರೌಢಶಾಲೆಗಳ ಚಿತ್ರಕಲಾ ಶಿಕ್ಷಕರ ಶ್ರಮದಿಂದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಾರ್ಯಾಲಯದ ಗೋಡೆಗಳು ಚಿತ್ರಮಯವಾಗಿ ಕಂಗೊಳಿಸುತ್ತಿವೆ.

    ಪಟ್ಟಣದ ಬಿಇಒ ಕಾರ್ಯಾಲಯದ ಗೋಡೆ ಮೇಲೆ ಶಿಕ್ಷಕರು ಬಿಡಿಸಿರುವ ಕಲಾಕೃತಿಗಳು ಮಕ್ಕಳು, ದಾರಿಹೋಕರ ಮನ ಸೆಳೆಯುತ್ತಿವೆ. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಾದ ವಸ್ತುಪ್ರದರ್ಶನ, ನೃತ್ಯ, ಕ್ರೀಡೆ, ಬಿಸಿಯೂಟ, ಕ್ಷೀರ ಭಾಗ್ಯ, ಉಚಿತ ಸೈಕಲ್, ಸಮವಸ್ತ್ರ ವಿತರಣೆ, ಆಟದ ಮೈದಾನ, ಸುವರ್ಣ ಆರೋಗ್ಯ ಚೇತನ, ಇನ್​ಸ್ಪೈಯರ್ ಅವಾರ್ಡ್ ಮೊದಲಾದ ಯೋಜನೆಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಅಲ್ಲದೆ, ಕಚೇರಿ ಒಳ ಗೋಡೆಗಳ ಮೇಲೂ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಸೇವಾ ಕಾರ್ಯದಲ್ಲಿ ತಾಲೂಕಿನ ಪ್ರೌಢಶಾಲೆಗಳ ಚಿತ್ರಕಲಾ ಶಿಕ್ಷಕರಾದ ಸಂಜೀವ ಕಾಳೆ, ಸಿಕಂದರ ಹೊಸಳ್ಳಿ, ಶಿವಾನಂದ ಅಂಗಡಿ, ನಿಂಗಪ್ಪ ಕಂಬಾರ, ಅರವಿಂದ ಡಿ., ಸುರೇಶ ಎಸ್., ಪಟ್ಟೇದ ಜಿ., ಅವಧಿ ವೈ. ಮತ್ತಿತರರು ಭಾಗವಹಿಸಿದ್ದರು.

    ಬಿಡುವಿನ ಸಮಯವನ್ನು ಸ್ವಂತ ಕಾರ್ಯಗಳಿಗೆ ವಿನಿಯೋಗಿಸದೇ, ಸಮಯ, ಭತ್ಯೆ, ಯಾವ ಆಡಂಬರವನ್ನೂ ಲೆಕ್ಕಿಸದೆ ನಿಷ್ಠೆಯಿಂದ ಕಚೇರಿಯನ್ನು ಚಿತ್ರಮಯವಾಗಿ ರೂಪಿಸುವ ತಾಲೂಕಿನ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರ ಕಾರ್ಯ ಶ್ಲಾಘನೀಯ.

    | ಉಮಾದೇವಿ ಬಸಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ, ಕಲಘಟಗಿ

    ವಿವಿಧ ಕಲಾಕೃತಿ ಬಿಡಿಸಿ ಬಿಇಒ ಕಚೇರಿ ಜತೆಗೆ ಸುತ್ತಲಿನ ವಾತಾವರಣವನ್ನು ಜನಸ್ನೇಹಿ ಮಾಡ ಬೇಕೆಂಬಾಸೆ ಬಹಳ ವರ್ಷಗಳಿಂದ ಇತ್ತು. ಈ ಸೇವೆಗೆ ಲಾಕ್​ಡೌನ್ ರಜಾ ಅವಧಿ ಅವಕಾಶ ಕಲ್ಪಿಸಿತು.

    | ವಿಜಯಕುಮಾರ ಗಾಯಕವಾಡ ಚಿತ್ರಕಲಾ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts