More

    ಕರೊನಾ ಸೋಂಕಿತ ಪತ್ನಿ ಕಳಿಸಲು ಪತಿಯ ರಂಪಾಟ

    ಹಾವೇರಿ: ಕರೊನಾ ಪಾಸಿಟಿವ್ ವರದಿ ಬಂದ ಗರ್ಭಿಣಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ತೆರಳಿದಾಗ ಪತ್ನಿಯೊಂದಿಗೆ ಪತಿಯೂ ಆಂಬುಲೆನ್ಸ್ ಏರಲು ಯತ್ನಿಸಿ, ರಂಪಾಟ ಮಾಡಿದ ಘಟನೆ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

    ಕೆಮ್ಮು, ನೆಗಡಿ, ಜ್ವರದ ಲಕ್ಷಣದ ಹಿನ್ನೆಲೆಯಲ್ಲಿ ತಾಲೂಕಿನ ಕನವಳ್ಳಿ ಗ್ರಾಮದ ಗರ್ಭಿಣಿಯೊಬ್ಬರ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಗುರುವಾರ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗೆ ಆಂಬುಲೆನ್ಸ್​ನೊಂದಿಗೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಕರೊನಾ ಸೋಂಕಿತೆಯ ಪತಿ ‘ಪ್ರೀತಿಯ ಮಡದಿಯೇ ನಿನ್ನ ಹೇಗೆ ಕಳುಹಿಸಲಿ. ನಾನೂ ನಿನ್ನೊಂದಿಗೆ ಬರುತ್ತೇನೆ’ ಎಂದು ಆಂಬುಲೆನ್ಸ್ ಏರಲು ಯತ್ನಿಸಿದ್ದಾನೆ. ಸಿಬ್ಬಂದಿ ಎಷ್ಟೇ ವಿನಂತಿಸಿದರೂ ಕೇಳದೇ ವಾಹನ ೕರಲು ಮುಂದಾಗಿದ್ದಾನೆ. ಆಗ ಗ್ರಾಮಸ್ಥರು ಮನವೊಲಿಸಿ ಪತ್ನಿಯನ್ನು ಮಾತ್ರ ಆಸ್ಪತ್ರೆಗೆ ಕಳಿಸಿದ್ದಾರೆ. ಆಂಬುಲೆನ್ಸ್ ಮುಂದೆ ಹೋಗುತ್ತಿದ್ದಂತೆ ಬೈಕ್​ನಲ್ಲಿ ಹಿಂಬಾಲಿಸಿ ಆಸ್ಪತ್ರೆಯವರೆಗೂ ಹೋಗಿದ್ದಾನೆ. ಕೋವಿಡ್ ಆಸ್ಪತ್ರೆಗೆ ಸೋಂಕಿತೆಯನ್ನು ದಾಖಲಿಸಿದ ನಂತರವೂ ಒಳಗಡೆ ಹೋಗಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ಬೆದರಿಸಿದ್ದಾರೆ. ನಂತರ ಆತನನ್ನು ಹಾವೇರಿ ಹೊರವಲಯದಲ್ಲಿರುವ ವಸತಿ ನಿಲಯದ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗಿದೆ. ಗರ್ಭಿಣಿಯ ಪ್ರಾಥಮಿಕ ಸಂರ್ಪತ ಪತಿ ಸೇರಿ 26 ಜನರನ್ನು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts