More

    ಕರೊನಾ ಸೇನಾನಿಗಳೆಂದು ಪರಿಗಣಿಸಿ

    ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಸಮಿತಿಯವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

    ಗ್ರಾ.ಪಂ. ನೌಕರರನ್ನು ಕರೊನಾ ಸೇನಾನಿಗಳೆಂದು ಎಂದು ಪರಿಗಣಿಸಬೇಕು. ನೌಕರರ ಕೆಲಸದ ಪುನರ್ ವಿಮರ್ಶೆಯ ಕಮಿಟಿ ರದ್ದುಗೊಳಿಸಬೇಕು. ಪಂಪ್ ಆಪರೇಟರ್​ಗಳಿಗೆ ಅರ್ಧ ವೇತನ ನೀಡಲು ನಿರ್ಧಾ ಕೈಬಿಡಬೇಕು. ಎಲ್ಲ ಸಿಬ್ಬಂದಿ ವೇತನಕ್ಕಾಗಿ ಕೊರತೆ ಇರುವ 328 ಕೋಟಿ ರೂ.ಗಳನ್ನು ಬೇರೆ ಯೋಜನೆಗಳಿಂದ ಕ್ರೋಡೀಕರಿಸಿ ಮಂಜೂರಾತಿ ನೀಡುವ ಆದೇಶ ಹೊರಡಿಸಬೇಕು. ಕಂಪ್ಯೂಟರ್ ಆಪರೇಟರ್​ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾರಿಗಳಿಗೆ ತಿದ್ದುಪಡಿ

    ಮಾಡಬೇಕು. ಅವರ ಹಿಂದಿನ ಸೇವಾ ಅವಧಿಯನ್ನು ಪರಿಗಣಿಸಬೇಕು. ಎಲ್ಲ ಸಿಬ್ಬಂದಿಗೆ ಪಿಂಚಣಿ ಮಂಜೂರು ಮಾಡಬೇಕು. ನೇರ ನೇಮಕಾತಿ ಗ್ರೇಡ್ 2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಲ್ಲಿ 2014ರಲ್ಲಿ ಅವಕಾಶ ಕಲ್ಪಿಸಿದಂತೆ ಈಗಲೂ

    ಬಡ್ತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಿಗೆ ಮನವಿ ರವಾನಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಐ. ಈಳಿಗೇರ, ಗುರು ಸಿದ್ದಪ್ಪ ಕರಿಮಲ್ಲಣ್ಣವರ, ಐ.ಎಂ. ಪಾಪಣ್ಣವರ, ಕಲ್ಮೇಶ ತಿಮ್ಮಾಪುರ, ಜಿ.ಆರ್. ಶಿಂಗೇನವರ, ಮಂಜುನಾಥ ದೊಡ್ಡಮನಿ, ವಿ.ಜಿ. ದುಂಡಪ್ಪನವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts