More

    ಕರೊನಾ ಮಧ್ಯೆ ದಸರಾ ಹಬ್ಬ ಆಚರಣೆಗೆ ಸಿದ್ಧತೆ

    ಹಾವೇರಿ: ಕರೊನಾಂತಕದ ನಡುವೆಯೇ ಜಿಲ್ಲಾದ್ಯಂತ ಸಂಭ್ರಮದಿಂದ ದಸರಾ ಆಚರಿಸಲು ಭರದ ಸಿದ್ಧತೆ ನಡೆದಿದೆ.

    ಅಂಗಡಿಗಳು, ವಾಹನಗಳನ್ನು ಸ್ವಚ್ಛಗೊಳಿಸಿರುವ ಜನತೆ ಪೂಜೆ ಸಿದ್ಧತೆಗಾಗಿ ನಗರದ ಮಾರುಕಟ್ಟೆಯಲ್ಲಿ ಶನಿವಾರ ಹೂವು, ಹಣ್ಣು, ಬಾಳೆ ಕಂಬ ಖರೀದಿಯಲ್ಲಿ ತೊಡಗಿದ್ದರು. ಭಾನುವಾರ ಆಯುಧ ಪೂಜೆ, ಲಕ್ಷಿ್ಮ ಪೂಜೆಗಾಗಿ ಹೂ, ಹಣ್ಣುಗಳ ಮಾರಾಟ ಪ್ರತಿ ವರ್ಷದಂತೆ ನಡೆಯಿತು.

    ಹಳ್ಳಿಗಳಿಂದ ಆಗಮಿಸಿದ್ದ ಜನರು ನಗರದ ಮೈಲಾರ ಮಹದೇವಪ್ಪ ವೃತ್ತ, ಎಂಜಿ ವೃತ್ತ ಮತ್ತಿತರ ರಸ್ತೆಗಳಲ್ಲಿ ಬೂದುಗುಂಬಳಗಳ ರಾಶಿ ಹಾಕಿಕೊಂಡು ವ್ಯಾಪಾರ ನಡೆಸಿದರು. ಒಂದು ಬೂದುಗುಂಬಳಕ್ಕೆ 30 ರೂ. ದಿಂದ 200 ರೂ. ವರೆಗೆ ಮಾರಾಟವಾದವು.

    ಪೆಟೆಲ್ಸ್​ಗುಲಾಬಿ ಕೆಜಿಗೆ 360 ರೂ. ಸೇವಂತಿ ಕೆಜಿಗೆ 280 ರೂ., ಚಂಡು ಹೂವು ಕೆಜಿಗೆ 80ರಿಂದ 100 ರೂ., ದುಂಡು ಸೇವಂತಿ ಕೆಜಿಗೆ 280 ರೂ., ಗುಲಾಬಿ 10ರ ಒಂದು ಕಟ್ಟಿಗೆ 120 ರೂ., ಕಾಕಡಾ ಮಲ್ಲಿಗೆ ಒಂದು ಮಾರಿಗೆ 120 ರೂ., ಕನಕಾಂಬರ ಒಂದು ಮಾರಿಗೆ 150 ರೂ., ಸುಗಂಧಿ ಮಾಲೆ 30ರಿಂದ 250 ರೂ., ಒಂದು ಜೊತೆ ಬಾಳೆಕಂಬಕ್ಕೆ 30ರಿಂದ 50ರೂ. ಗೆ ಮಾರಾಟವಾಯಿತು.

    ಹಣ್ಣು, ತರಕಾರಿ ಬೆಲೆ ಹೆಚ್ಚಳ: ಬಾಳೆ ಹಣ್ಣು ಒಂದು ಡಜನ್​ಗೆ 30ರಿಂದ 50 ರೂ., ಸೇಬು ಕೆಜಿಗೆ 120ರಿಂದ 150 ರೂ., ಕಿತ್ತಳೆ ಕೆಜಿಗೆ 80 ರೂ., ದಾಳಿಂಬೆ ಕೆಜಿಗೆ 120ರಿಂದ 150 ರೂ., ಉಳ್ಳಾಗಡ್ಡಿ ಕೆಜಿಗೆ 80ರಿಂದ 120 ರೂ., ಹಸಿಮೆಣಸಿನಕಾಯಿ ಕೆಜಿಗೆ 80 ರೂ., ಬದನೆಕಾಯಿ ಕೆಜಿಗೆ 60 ರೂ. ಟೊಮ್ಯಾಟೊ ಕೆಜಿಗೆ 40 ರೂ., ಹಿರೇಕಾಯಿ ಕೆಜಿಗೆ 50 ರೂ. ಗೆ ಮಾರಾಟವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts