More

    ಕರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ

    ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭೆಯ ಮುಖ್ಯ ಸಚೇತಕ ಡಾ. ಅಜಯಸಿಂಗ್, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಕಲಬುರಗಿಯಲ್ಲಿ ಎರಡು ಕೋವಿಡ್ ಆಸ್ಪತ್ರೆಗಳನ್ನಾಗಿ ಮಾಡಿದರೂ, ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಸೋಂಕಿತರಿಗೆ ಮತ್ತು ಕ್ವಾರಂಟೈನ್ದಲ್ಲಿರುವ ಶಂಕಿತರಿಗೆ ಸರಿಯಾದ ಊಟ ಕೊಡುತ್ತಿಲ್ಲವೆಂಬ ದೂರುಗಳಿವೆ. ಚಿಕಿತ್ಸೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸರಿಯಾದ ಸವಲತ್ತುಗಳಿಲ್ಲ, ಆದರೂ ಸಕರ್ಾರ ಕ್ಯಾರೆ ಎನ್ನುತ್ತಿಲ್ಲ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
    ಗುಣಮಟ್ಟದ ಪಿಪಿಇ ಕಿಟ್, ಸಿಬ್ಬಂದಿಗೆ ಮಾಸ್ಕ್ ಸಿಗುತ್ತಿಲ್ಲ, ಕರೊನಾ ವಾರ್ಡಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ, ಕ್ವಾರಂಟೈನ್ ಸೆಂಟರ್ಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಸಾಮೂಹಿಕವಾಗಿ ಶೌಚಗೃಹಗಳು ಸ್ವಚ್ಛವಿಲ್ಲ. ಎಲ್ಲ ಹಂತದಲ್ಲಿ ಸಮಸ್ಯೆಗಳಿಗೆ, ವಿರೋಧ ಪಕ್ಷದವರು ನೀಡಿದ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಕಿಡಿ ಕಾರಿದರಲ್ಲದೇ ವಿಡಿಯೋಗಳನ್ನು ಪ್ರದಶರ್ಿಸಿದರು.
    ಕೆಲವು ಕ್ವಾರಂಟೈನ್ ಕೇಂದ್ರಗಳಲ್ಲಿ ಹಾವು, ಚೇಳು ಓಡಾಡುತ್ತಿವೆ ಎಂಬುದರ ಫೋಟೋ ತೋರಿಸಿದರು. ಜಿಮ್ಸ್ ಮತ್ತು ಇಎಸ್ಐಸಿಗೆ ಭೇಟಿ ನೀಡಿದಾಗ ರೋಗಿಗಳ ಸಂಬಂಧಿಕರು ತಮ್ಮ ಗೋಳು ತೋಡಿಕೊಂಡ ಗಳಗಳ ಅತ್ತಿರುವ ವಿಡಿಯೋ ಸೇರಿ ಅಲ್ಲಿನ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.
    ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಯೇ ಬಿಡಾರ ಹೂಡಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಸರ್ಕಾರದ ನಾಯಕತ್ವವೇ ಇಲ್ಲದಂತಾಗಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ದೂರಿದರು.
    ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಂ.ವೈ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವರಾದ ಕೆ.ಬಿ.ಶಾಣಪ್ಪ, ಮಾಜಿ ಶಾಸಕ ಅಲ್ಲಂಪ್ರಭು ಪಾಟೀಲ್ ನೆಲೋಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣಕುಮಾರ ಮೋದಿ, ಮುಖಂಡರಾದ ವಿಜಯಕುಮಾರ ಜಿ.ಆರ್, ಡಾ.ಕಿರಣ ದೇಶಮುಖ, ಬಿ.ಕೆ.ಬಿರಾದಾರ ಸೊನ್ನ, ಪ್ರವೀಣ ಪಾಟೀಲ್ ಹರವಾಳ, ಈರಣ್ಣ ಝಳಕಿ, ಮಜರ್ ಅಲಂಖಾನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts