More

    ಕರೊನಾದಿಂದ ಗುಣವಾದ ಮೂವರ ಬಿಡುಗಡೆ

    ಗದಗ: ಕೋವಿಡ್-19 ಸೋಂಕಿತನಿಂದ ಗುಣವಾದ ಮೂವರನ್ನು ಗದಗ ಜಿಲ್ಲಾಸ್ಪತ್ರೆಯಿಂದ ಶನಿವಾರ ಬಿಡುಗಡೆ ಮಾಡಲಾಯಿತು.

    ಕರೊನಾ ಸೋಂಕಿನಿಂದ ಗುಣವಾದ ಮೂವರು ಪುರುಷರನ್ನು ಜಿಲ್ಲಾಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಗೌರವಿಸುವ ಮೂಲಕ ಬೀಳ್ಕೊಟ್ಟರು. ಗುಣವಾದವರಿಗೆ ಪಡಿತರ ಕಿಟ್, ಮಾಸ್ಕ್ ನೀಡಿ ಆಂಬುಲೆನ್ಸ್ ಮೂಲಕ ಅವರ ಮನೆಗೆ ಕಳುಹಿಸಿಕೊಡಲಾಯಿತು.

    28 ವರ್ಷದ ಪುರುಷ ಹಾಗೂ 32 ವರ್ಷದ ಪುರುಷ ಪಿ-4079 ಇವರ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದು, ಜೂ. 5ರಂದು ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅದೇ ದಿನ ಇಬ್ಬರನ್ನೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್್ಸ) ಕೋವಿಡ್ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಯಿತು. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ 29 ವರ್ಷದ ಪುರುಷನಿಗೆ ಮೇ 22ರಂದು ಸೋಂಕು ಇರುವುದು ದೃಢಪಟ್ಟಿತ್ತು. ಅದೇ ದಿನ ಅವರನ್ನು ಸಹ ಜಿಮ್್ಸ ಕೋವಿಡ್ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ನಂತರ ಜೂ. 12ರಂದು ಜಿಮ್್ಸ ಪ್ರಯೋಗಾಲಯದಲ್ಲಿ ಈ ಮೂವರ ಗಂಟಲ ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎಲ್ಲರ ವರದಿ ನೆಗೆಟಿವ್ ಬಂದಿವೆ. ಹೀಗಾಗಿ ಅವರನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಇನ್ನು 14 ದಿನಗಳು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗುವುದು ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

    ಡಾ. ಆರ್.ಟಿ. ಪಾಟೀಲ, ಡಾ. ಕೊಟ್ರೇಶ, ಜಿಮ್್ಸ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.

    ಜಿಲ್ಲೆಯಲ್ಲಿ ಈವರೆಗೆ ಒಟ್ಟು 49 ಸೋಂಕಿತರ ಪೈಕಿ 37 ಜನರು ಗುಣವಾಗಿದ್ದಾರೆ. 10 ಸಕ್ರಿಯ ಪ್ರಕರಣಗಳಿದ್ದು, ಇಬ್ಬರು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts