More

    ಕರೆಂಟ್ ಕಣ್ಣಾಮುಚ್ಚಾಲೆಗೆ ಮುಕ್ತಿ

    ಹೊಸನಗರ: ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತತ್ತರಿಸಿದ್ದ ಹೊಸನಗರ ತಾಲೂಕಿಗೆ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಯಿಂದ ಮುಕ್ತಿ ದೊರೆಯಲಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ತಾಲೂಕಿನ ಹರಿದ್ರಾವತಿ ಗ್ರಾಮದಲ್ಲಿ 448.28 ಲಕ್ಷ ರೂ. ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ತಾಲೂಕಿನ ಹರಿದ್ರಾವತಿ, ಮಾರುತಿಪುರ, ಪುರಪ್ಪೇಮನೆ ಸೇರಿದಂತೆ ಹಲವು ಗ್ರಾಪಂ ರೈತರು ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ನಲುಗಿ ಹೋಗಿz್ದÁರೆ. ಇದನ್ನರಿತು 33/11 ಕೆ.ವಿ. ವಿತರಣಾ ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿತ್ತು. ಆದರೆ ಜಾಗದ ಸಮಸ್ಯೆಯಿಂದ ಕಾಮಗಾರಿ ಕಾರ್ಯಗತಗೊಳಿಸಲು ಹಿನ್ನಡೆಯಾಗಿತ್ತು. ಇದೀಗ ಸಮಸ್ಯೆ ಬರೆಹರಿದಿದೆ. ಈ ಯೋಜನೆ ಶೀಘ್ರವಾಗಿ ಮುಕ್ತಾಯವಾಗಲಿದ್ದು ರೈತರ ಬವಣೆ ನೀಗಲಿದೆ ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗ್ರಾಪಂ ಅಧ್ಯಕ್ಷೆ ಲೀಲಾವತಿ ಸುರೇಶ್, ಸದಸ್ಯರಾದ ಕೆ.ಆರ್.ಮಂಜುನಾಥ್, ವಾಟಗೋಡು ಸುರೇಶ, ವಿಶಾಲಾ, ಹೀಲಗೌಡ ಅಶೋಕಗೌಡ, ಪೂರ್ಣಿಮಾ ಲಕ್ಷ್ಮಣ್, ಸೀತಾ ಸಂತೋಷ್, ಮೆಸ್ಕಾಂ ಮುಖ್ಯ ಇಂಜಿನಿಯರ್ ಎಚ್.ಬಸಪ್ಪ, ಅ„ಕಾರಿಗಳಾದ ಎಸ್.ಜಿ.ಶಶಿಧರ್, ವೆಂಕಟೇಶ್, ಟಿ.ತಿಪ್ಪೇಸ್ವಾಮಿ, ಕೆ.ಎಲ್.ರಂಗನಾಥ್, ಹೊಸನಗರ ಎಇಇ ಚಂದ್ರಶೇಖರ್, ರಾಜಶೇಖರ್ ಇದ್ದರು.
    ಎರಡು ಬಾರಿ ಶಾಸಕರಾದ್ರೂ ಮಾತನಾಡಲಿಲ್ಲ: ಶಾಸಕರಾದವರೂ ಸದನದ ಒಳಗೆ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಬೇಕು, ಸದನದ ಹೊರಗೆ ಜನರ ಜತೆ ನಿಲ್ಲಬೇಕು. ಆದರೆ ಎರಡು ಬಾರಿ ಶಾಸಕರಾದರೂ ಸದನದ ಒಳಗೂ ಮಾತನಾಡಲಿಲ್ಲ, ಹೊರಗೂ ಮಾತನಾಡಲಿಲ್ಲ. ಹೆಗಲ ಮೇಲೆ ಕೈಹಾಕಿ ಓಡಾಡಲು ಸ್ನೇಹಿತರಿz್ದÁರೆ. ಅದಕ್ಕೆ ಶಾಸಕ ಆಗಬೇಕಿಲ್ಲ ಎಂದು ಬೇಳೂರು ಹೆಸರು ಹೇಳದೆ ಹರತಾಳು ಹಾಲಪ್ಪ ವಾಗ್ದಾಳಿ ನಡೆಸಿದರು. ಈವರೆಗಿನ ಜನರ ಸಮಸ್ಯೆಗೆ ಯಾರು ಕಾರಣ. ಯಾವ ಪಕ್ಷ ಹೆಚ್ಚಾಗಿ ಆಡಳಿತ ನಡೆಸಿತ್ತು. ಗ್ಯಾರಂಟಿ ಯಾರು, ಯಾರಿಗೆ ಕೊಡುತ್ತಿz್ದÁರೆ ಎಂದು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts