More

    ಕರಾಟೆಯಲ್ಲಿ ಸ್ವಾಗತ್, ಗೌರವ್‌ಗೆ ಚಿನ್ನ

    ಗೋಣಿಕೊಪ್ಪ : ಜಪಾನ್ ಶೋಟಕಾನ್ ಕರಾಟೆ ಸಂಸ್ಥೆ (ಜೆ.ಎಸ್.ಕೆ.ಎ) ವತಿಯಿಂದ ಕೇರಳ ರಾಜ್ಯದ ತ್ರಿಶೂರ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಕರಾಟೆ ಪಟುಗಳು ಸಾಧನೆ ಮಾಡಿದ್ದಾರೆ.
    ಪೊನ್ನಂಪೇಟೆ ಸಂತ ಅಂಥೋಣಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಪಿ.ಎಚ್. ಸ್ವಾಗತ್ ಕತಾ ವಿಭಾಗದಲ್ಲಿ ಚಿನ್ನದ ಪದಕ, ಪಿ.ಎಸ್.ಗೌರವ್ ಕುಮಿತೆ ವಿಭಾಗದಲ್ಲಿ ಚಿನ್ನ, ಆಕರ್ಷ್ ಸಂತೋಷ್ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಪ್ರೌಢ ಶಾಲೆಯ ಅರ್ಜುನ್ ಮಹೇಂದ್ರಗೆ ಚಿನ್ನ ಮತ್ತು ಕಂಚು, ಎನ್. ಎಸ್. ಶ್ರೀಹರಿಗೆ ಕಂಚು, ಡೆಲ್ಸಿಣಿ ಮರಿಯಾಗೆ ಬೆಳ್ಳಿ, ಗೋಣಿಕೊಪ್ಪ ಕಾಪ್ಸ್ ಶಾಲೆಯ ಸಿ.ಬಿ. ನಿಹಾನ್ ಅಯ್ಯಣ್ಣಗೆ ಚಿನ್ನ ಮತ್ತು ಕಂಚು, ಅರ್ವತೊಕ್ಕಲು ಸರ್ವದೈವತ ಶಾಲೆಯ ಲಿರನ್ ಬೋಪಣ್ಣಗೆ 2 ಬೆಳ್ಳಿ, ಗೋಣಿಕೊಪ್ಪ ಲಯನ್ಸ್ ಶಾಲೆಯ ಎ. ಎನ್. ದ್ರುವಿಕ್‌ಗೆ ಚಿನ್ನ, ಐ.ಎಸ್.ಇಶಾನ್ ಮತ್ತು ಸಿ.ಕೆ.ತಮ್ಮಯ್ಯಗೆ ಬೆಳ್ಳಿ, ಪಿ.ಎ. ಕೃದಯ್‌ಗೆ 2 ಕಂಚು, ಐಕಾನ್ ಇಂಟರ್ ನ್ಯಾಷನಲ್ ವಿದ್ಯಾಸಂಸ್ಥೆಯ ಅಕ್ಷಿತ್‌ಗೌಡಗೆ ಚಿನ್ನ ಲಭಿಸಿದೆ. ಬಿ.ಎಸ್ ಸೆನ್ಸಾಯ್ ಮತ್ತು ಸಂತೋಷ್‌ಕುಮಾರ್ ತರಬೇತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts