More

    ಕರಾಟೆಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಐವರು ಆಯ್ಕೆ

    ವಿರಾಜಪೇಟೆ: ರಾಷ್ಟ್ರಮಟ್ಟದ ಶಿಟಾರಿಯೋ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ವಿವಿಧ ಕಾಲೇಜು ಹಾಗೂ ಶಾಲೆಯ ಐವರು ವಿದ್ಯಾರ್ಥಿ ಗಳು ಕರಾಟೆಯಲ್ಲಿ ಸಾಧನೆ ಮಾಡಿದ್ದು, ಸೆ.27, 28 ರಂದು ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಶಿಟಾರಿಯೋ ವಿಶ್ವ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾರೆ.

    ಮೈಸೂರಿನ ಸೆ.ಫಿಲೋಮಿನಾ ಕಾಲೇಜಿನಲ್ಲಿ ಜು.16 ರಂದು 26ನೇ ಅಖಿಲ ಭಾರತೀಯ ಶಿಟಾರಿಯೋ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆಲವು ಸಾಧಿಸಿದರು.

    ಪೊನ್ನಂಪೇಟೆಯ ಸಿಐಟಿ ಇಂಜೀನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ಜ್ಞಾನೇಶ್ ಚಿನ್ನದ ಪದಕ ಗಳಿಸಿದ್ದಾರೆ. ಅಂತೆಯೆ ವಿರಾಜಪೇಟೆಯ ಕಾವೇರಿ ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮನೆಯಪಂಡ ಶಿಪ್ರಾ ಕಾಳಪ್ಪಗೆ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಲಭಿಸಿದೆ. ಈಕೆ ವಿರಾಜಪೇಟೆ ಪುರಸಭೆ ಸದಸ್ಯೆ ಮನೆಯಪಂಡ ದೇಚಮ್ಮ ಹಾಗೂ ಕಾಳಪ್ಪ ದಂಪತಿ ಪುತ್ರಿ.

    ಇನ್ನು ಆದಿತ್ಯ ಅಯ್ಯಣ್ಣ ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಇವರು ತೃತೀಯ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ. ಸೇಂಟ್ ಆ್ಯನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಸ್.ಎಚ್.ಗಾಯಚನಾ ಹಾಗೂ ಪೊನ್ನಂಪೇಟೆಯ ವಿದ್ಯಾನಿಕೇತನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಿ.ಎ.ಅಯ್ಯಪ್ಪ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಎಸ್.ಎಸ್.ಶಿಟೋರಿಯೋ ಕರಾಟೆ ಅಕಾಡೆಮಿ ಮುಖ್ಯಸ್ಥ, ತರಬೇತುದಾರ ಕರ್ನಂಡ ಸೋಮಣ್ಣ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts