More

    ಕಪ್ಪತಗುಡ್ಡಕ್ಕೆ ಮತ್ತೆ ಬೆಂಕಿ



    ಮುಂಡರಗಿ: ತಾಲೂಕಿನ ಡೋಣಿ ಭಾಗದ ಆಯುರ್ವೆದ ಸಸ್ಯಕಾಶಿ ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಶುಕ್ರವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಅರಣ್ಯ ಪ್ರದೇಶ ನಾಶವಾಗಿದೆ.

    ಡೋಣಿ ಭಾಗದ ಗ್ವಾಲಗೇರಿ ಮಠದ ಬಳಿಯ ಮುಂಡರಗಿ ವಲಯದ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ 15ರಿಂದ 20 ಎಕರೆ ಮತ್ತು ಶಿರಹಟ್ಟಿ ವಲಯದಲ್ಲಿ ಅಂದಾಜು 50 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ನಾಶವಾಗಿದೆ. ಘಟನೆ ಸ್ಥಳಕ್ಕೆ ಡಿಎಫ್​ಒ ಸೂರ್ಯಸೇನ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಪ್ರತಿ ವರ್ಷವೂ ಬೇಸಿಗೆ ಸಮಯದಲ್ಲಿ ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಅಪಾರ ಹಾನಿಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದ್ದು, ಸಾಕಷ್ಟು ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

    ಮುಂಡರಗಿ ಆರ್​ಎಫ್​ಒ ಎಸ್.ಎಂ. ಶಿವರಾತ್ರೇಶ್ವರಸ್ವಾಮಿ ಹಾಗೂ ಶಿರಹಟ್ಟಿ ಆರ್​ಎಫ್​ಒ ಸತೀಶ ಪೂಜಾರ ಪ್ರತಿಕ್ರಿಯಿಸಿ, ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts