More

    ಕನ್ನಡ ಹೋರಾಟಗಾರರು ಹೆದರಬೇಕಿಲ್ಲ

    ಚಿಕ್ಕೋಡಿ: ಗಡಿ ಭಾಗದ ರಾಜಕಾರಣಿಗಳು ಅಚ್ಚ ಕನ್ನಡದ ಜನಪ್ರತಿನಿಧಿಯಾಗಬೇಕು. ಸರ್ಕಾರ ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು ಎಂದು 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅಲ್ಲಮಪ್ರಭು ಸ್ವಾಮೀಜಿ ಆಗ್ರಹಿಸಬೇಕು ಎಂದರು.

    ಪಟ್ಟಣದ ಸಿಎಲ್​ಇ ಸಂಸ್ಥೆಯ ಸುವರ್ಣ ಮಹೋತ್ಸವ ಕಟ್ಟಡದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
    ಪರಭಾಷಿಕರು ಬಟ್ಟೆ ಹಾವು ಬಿಟ್ಟು ನಮ್ಮನ್ನು ಹೆದರಿಸಲು ನೋಡುತ್ತಾರೆ. ನಮ್ಮ ಕನ್ನಡ ಪರ ಹೋರಾಟಗಾರರು ಹೆದರುವ ಅವಶ್ಯಕತೆ ಇಲ್ಲ. ಪಟ್ಟಣದಲ್ಲಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ ಮಾಡಬೇಕಿದೆ. ಕೇಂದ್ರ ಸರ್ಕಾರ ಮಟ್ಟದಲ್ಲಿ ಕಿತ್ತೂರು ಚನ್ನಮ್ಮನ ಪ್ರಥಮ ಸ್ವಾತಂತ್ರ್ಯ ಹೋರಾಟ ಮಹಿಳೆ ಎಂಬುದು ದಾಖಲಾಗಬೇಕಿದೆ ಎಂದರು. ಸಾಹಿತಿ ಡಾ.ಅಪ್ಪಾಸಾಹೇಬ ಅಲಿಬಾದೆ ಮಾತನಾಡಿ, ರಾಜ್ಯದ ಬಸ್​ಗಳಿಗೆ ಮಸಿ ಬಳಿಯುವುದು ರಾಜಕೀಯ ಪ್ರೇರಿತವಾಗುತ್ತಿದೆ. ರಾಜಕಾರಣದ ಅನಾಚಾರದಿಂದ ಈ ರೀತಿ ಟನೆ ನಡೆಯುತ್ತವೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್​ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಗಡಿಭಾಗದಲ್ಲಿ ಸಂಚರಿಸಿ ಇಲ್ಲಿನ ಸ್ಥಿತಿಗತಿಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಮೂಲಕ ಗಡಿಭಾಗದಲ್ಲಿ ಕನ್ನಡ ನೆಲ, ಜಲ ಉಳಿಯಲು ಹಾಗೂ ಇಲ್ಲಿನ ಜನರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯೆ ಮಂಗಳಾ ಮೆಟಗುಡ್ಡ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಸಿದಗೌಡ ಕಾಗೆ ಮಾತನಾಡಿದರು.

    ಮುಖಂಡ ಜಗದೀಶ ಕವಟಗಿಮಠ, ಸಾಯಿ ಸೇವಾ ಪರಿವಾರದ ಮುಖಂಡ ಆದಿನಾಥ ಶೆಟ್ಟಿ, ಸಾಹಿತಿ ಪಿ.ಜಿ.ಕೆಂಪನ್ನವರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ, ಡಾ.ದಯಾನಂದ ನೂಲಿ, ಡಾ.ಸುಬ್ಬರಾವ ಎಂಟೆತ್ತಿನ್ನವರ, ಶ್ರೀಪಾದ ಕುಂಬಾರ, ಡಾ.ಸುರೇಶ ಉಕ್ಕಲಿ, ಚಂದ್ರಶೇಖರ ಅರಬಾವಿ,

    ಜಯಶ್ರೀ ನಾಗರಾಳೆ ಇತರರಿದ್ದರು. ನಿಂಗಪ್ಪ ಠಕ್ಕಾಯಿ ಸ್ವಾಗತಿಸಿದರು. ಡಾ.ರವಿ ಕುರಬೇಟ್​ ನಿರೂಪಿಸಿದರು. ಸಿದ್ದು ಬಬಲೇಶ್ವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts