More

    ಕನ್ನಡ ರಥಕ್ಕೆ ದಾವಣಗೆರೆಯಲ್ಲಿ ಅದ್ದೂರಿ ಸ್ವಾಗತ 

    ದಾವಣಗೆರೆ: ಹಾವೇರಿಯಲ್ಲಿ ಆಯೋಜಿತ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥವಾಗಿ ರಾಜ್ಯವ್ಯಾಪಿ ಸಂಚರಿಸುತ್ತಿರುವ, ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ಭಾನುವಾರ ಚನ್ನಗಿರಿ ಮೂಲಕ ದಾವಣಗೆರೆ ನಗರ ಪ್ರವೇಶಿಸಿತು.
    ಇಲ್ಲಿನ ವಿದ್ಯಾನಗರದ ಆಂಜನೇಯ ದೇವಸ್ಥಾನ ಬಳಿ, ಕನ್ನಡ ಭುವನೇಶ್ವರಿಯ ಎರಡು ಮೂರ್ತಿಗಳಿದ್ದ ರಥವನ್ನು ಕನ್ನಡಾಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. ಅಲ್ಲಿಂದ ಶುರುವಾದ ಮೆರವಣಿಗೆ ವಿದ್ಯಾನಗರ ವೃತ್ತ, ಗುಂಡಿ ಮಹದೇವಪ್ಪ ವೃತ್ತ ಮೂಲಕ ಸಾಗಿ ನಗರಪಾಲಿಕೆ ಆವರಣದಲ್ಲಿ ಅಂತ್ಯಗೊಂಡಿತು.
    ಗಾರುಡಿ ಗೊಂಬೆಗಳು, ಸೋಮನ ಕುಣಿತ, ನಂದಿಕೋಲು, ಡೊಳ್ಳು ಕುಣಿತ ಮೊದಲಾದ ತಂಡದ ಕಲಾವಿದರು ಗಮನ ಸೆಳೆದರು. ಕುಂಭ ಹೊತ್ತ ಮಹಿಳೆಯರು, ಕನ್ನಡ ಧ್ವಜಗಳೊಂದಿಗೆ ಸಾಲುಸಾಲು ಹೆಜ್ಜೆ ಹಾಕಿದ ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯ ಶೋಭೆ ಹೆಚ್ಚಿಸಿದರು. ಕನ್ನಡದ ಹಾಡುಗಳು ಮೊಳಗಿದವು.
    ಸಂಸದ ಜಿ.ಎಂ.ಸಿದ್ದೇಶ್ವರ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿ ತೆರಳಿದರು. ನಂತರದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೂವಿನ ಹಾರ ಸಲ್ಲಿಸುವ ಮೂಲಕ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಜಿಲ್ಲಾ ಕಸಾಪ ಪ್ರಯತ್ನದೊಂದಿಗೆ ಎಲ್ಲ ಕನ್ನಡಾಭಿಮಾನಿಗಳು ಕನ್ನಡ ರಥ ಯಾತ್ರೆಯಲ್ಲಿ ಭಾಗಿಯಾಗಿದ್ದೀರಿ. ಕನ್ನಡದ ಸಂಸ್ಕೃತಿ, ನೆಲ-ಜಲದ ಮೇಲಿನ ಹುಮ್ಮಸ್ಸು ಮತ್ತು ಪ್ರೀತಿ ಸದಾ ಹೀಗೇ ಇರಲಿ ಎಂದು ಡಿಸಿ ಹೇಳಿದರು.
    ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ, ಯರಗುಂಟೆ ಕರಿಬಸವೇಶ್ವರ ಗದ್ದುಗೆ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ, ತಹಸೀಲ್ದಾರ್ ಬಸನಗೌಡ ಕೋಟೂರ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಬಿ.ದಿಳ್ಯೆಪ್ಪ, ಡಾ.ಮಂಜುನಾಥ ಕುರ್ಕಿ, ರೇವಣಸಿದ್ದಪ್ಪ ಅಂಗಡಿ, ಸುಮತಿ ಜಯಪ್ಪ, ಎ.ಆರ್. ಉಜ್ಜಿನಪ್ಪ, ಎಲ್.ಜಿ.ಮಧುಕುಮಾರ್, ಎನ್.ಟಿ.ಯರ‌್ರಿಸ್ವಾಮಿ. ಎಚ್.ಎನ್.ಶಿವಕುಮಾರ್, ಎನ್.ಎಸ್.ರಾಜು, ಜಗದೀಶ್ ಕೂಲಂಬಿ, ರಾಘವೇಂದ್ರ ನಾಯರಿ, ಡಿಡಿಪಿಐ ಜಿ.ಆರ್.ತಿಪ್ಪೇಶಪ್ಪ, ವೀರೇಶ್ ಹನಗವಾಡಿ, ಎ.ಎಸ್.ವಿಜಯಕುಮಾರ್, ಸೋಗಿ ಶಾಂತಕುಮಾರ್, ಕೆ.ಟಿ.ಗೋಪಾಲಗೌಡ, ಹಿರೇಮಠ, ಪರಮೇಶ್ವರಪ್ಪ, ಸತ್ಯಭಾಮಾ ಮಂಜುನಾಥ್, ರುದ್ರಾಕ್ಷಿಬಾಯಿ, ಕಲ್ಪನಾ ರವಿ, ಜ್ಯೋತಿ ಉಪಾಧ್ಯಾಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts