More

    ಕನ್ನಡ ಮಾಧ್ಯಮದಲ್ಲಿ ಕಲಿತರೆ ಉತ್ತಮ ಭವಿಷ್ಯ

    ನವಲಗುಂದ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕಾಂತ್ರಿಯನ್ನು ಮೂಡಿಸಿರುವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸದಾ ಶಿಕ್ಷಕರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

    ಇಲ್ಲಿನ ಮಾಡೆಲ್ ಹೈಸ್ಕೂಲಿನ ಪಾರ್ಥನಾ ಮಂದಿರದಲ್ಲಿ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ವಿವಿಧ ಶಿಕ್ಷಕರ, ನೌಕರರ ಸಂಘಟನೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಶನಿವಾರ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತರೆ ಮಾತ್ರ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂಬ ಅಚಲ ನಂಬಿಕೆ ನನ್ನದು. ಈ ದೃಷ್ಟಿಕೋನದಲ್ಲಿ ಪಾಲಕರು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.

    ಸಾಂಪ್ರದಾಯಿಕ ಶಿಕ್ಷಣ ಬೋಧನೆ ಕೈಬಿಟ್ಟು ಹೊಸ ಶಿಕ್ಷಣ ನೀತಿ ತರುತ್ತಿರುವುದು ಶಿಕ್ಷಕರಿಗೆ ಬಹಳ ಕಠಿಣವಾಗಲಿದೆ. ಹೊಸ ಬದಲಾವಣೆಗೆ ತಕ್ಕಂತೆ ಶಿಕ್ಷಕರು ಹೊಂದಿಕೊಂಡು, ಹೆಚ್ಚು ಅಧ್ಯಯನ ಕೈಗೊಂಡು ಮಕ್ಕಳಿಗೆ ಪಾಠ ಭೋಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಬೇಕು ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೌಕರರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ, ನಿವೃತ ಶಿಕ್ಷಕ ಎಸ್.ಎಂ. ಪಟ್ಟಣಶೆಟ್ಟಿ, ಅನೀಲ ವೈದ್ಯ ಮಾತನಾಡಿದರು. ದಾವಣಗೆರೆಯ ಡಾ. ಪುಷ್ಪಲತಾ ಶಿಕ್ಷಕರಿಗೆ ತರಬೇತಿ ನೀಡಿದರು. ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ವೈ.ಎಚ್. ಬಣವಿ, ಶಿಕ್ಷಕ ಆರ್.ಎಸ್. ಪಾಟೀಲ, ಡಿ.ಕೆ. ಹಿರೇಗೌಡರ, ಎಸ್.ಎಫ್. ನೀರಲಗಿ, ಡಿ.ಜಿ. ಹುಲ್ಲೂರ, ಬಿ.ಬಿ. ಪೂಜಾರ, ಜೆ.ಎಸ್. ಪಾಟೀಲ, ಎ.ಬಿ. ಹಿರೇಮಠ, ಸಿದ್ದನಗೌಡ ಪಾಟೀಲ, ಅಡಿವೆಪ್ಪ ಮನಮಿ ಇತರರು ಇದ್ದರು. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಕಾವೇರಿ ಹೆಬ್ಬಾಳ, ಮಲ್ಲವ್ವ ಬೀರಣ್ಣವರ, ಅಭಿಷೇಕ ಬಳಿಗೇರ, ಮಂಜುನಾಥ ಹಿರೇಹೊಳಿ, ರಾಜೇಶ್ವರಿ ಗಂಜಪ್ಪನವರ ಅವರಿಗೆ ಸರ್ಕಾರದ ವತಿಯಿಂದ ಲ್ಯಾಪ್​ಟ್ಯಾಪ್​ಗಳನ್ನು ನೀಡಿ ಸನ್ಮಾನಿಸಲಾಯಿತು. ಬಿ.ಎಸ್. ಬಂಡಿವಡ್ಡರ ಹಾಗೂ ಆರ್.ಎಚ್. ನೆಗಲಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts