More

    ಕನ್ನಡ ಮನಸ್ಸು ಕಟ್ಟೋಣ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಉಣಕಲ್ ಗ್ರಾಮದ ಹೊಸ ಸಿದ್ದಪ್ಪಜ್ಜನವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹುಬ್ಬಳ್ಳಿ ನಗರ ತಾಲೂಕು 8ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

    ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿಗೆ ಎಲ್ಲರೂ ಕಂಕಣ ಬದ್ಧರಾಗಬೇಕು. ಕನ್ನಡ ಮನಸ್ಸುಗಳನ್ನು ಕಟ್ಟುವ ಕಾರ್ಯ ನೆರವೇರಿಸಬೇಕು ಎಂದರು.

    ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಮಾತನಾಡಿ, ಜನಸಾಮಾನ್ಯರಿಗೆ ಸಾಹಿತ್ಯಿಕ ಸಂದೇಶ ತಲುಪಿಸಬೇಕೆಂದರು.

    ಗಂಗಾಧರ ದೊಡ್ಡವಾಡ, ಹಿರಿಯ ಕವಿ ಎಸ್.ಐ. ನೇಕಾರ ಮಾತನಾಡಿದರು.

    ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಚನ್ನಬಸಪ್ಪ ಧಾರವಾಡಶೆಟ್ರ, ಡಾ.ಬಿ.ಎಸ್. ಮಾಳವಾಡ, ಅಶೋಕ ಸನ್ನಿ, ಸಿ.ಎಂ. ಚನ್ನಬಸಪ್ಪ, ಡಾ. ಲಿಂಗರಾಜ ಮುಳ್ಳಳ್ಳಿ, ಎಸ್.ಎಸ್. ಕರಡಿ, ಎಂ.ಎಸ್. ಮುದುಕನಗೌಡ್ರ, ಮಹಾಂತೇಶ ಕೋಳಿವಾಡ, ಎಸ್.ವಿ. ಬಿದರಳ್ಳಿ, ಸಂಧ್ಯಾ ದೀಕ್ಷಿತ, ಗಿರಿಜಾ ಚಿಕ್ಕಮಠ, ಶಕುಂತಲಾ ಹೂಗಾರ, ಡಾ. ರಮೇಶ ಅಂಗಡಿ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಸ್ವಾಗತಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts