More

    ಕನ್ನಡ ಉಳಿಯುವುದು ಅಗತ್ಯ


    ಇಟಗಿ: ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೆ ಸಾಕಷ್ಟು ಸಾಹಿತಿಗಳು ಕನ್ನಡಮ್ಮನ ಸೇವೆ ಮಾಡುವ ಮೂಲಕ ಭಾಷೆ ಶ್ರೀಮಂತಗೊಳಿಸಿದ್ದಾರೆ. ಅವರೆಲ್ಲರ ಸೇವೆ ಸ್ಮರಿಸುವುದು ಕನ್ನಡ ಉಳಿಸಿ, ಬೆಳೆಸುವುದು ಅವಶ್ಯ ಎಂದು ಖಾನಾಪುರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯ ಮೃತ್ಯುಂಜಯಸ್ವಾಮಿ ಹಿರೇಮಠ ಹೇಳಿದರು.

    ಇಟಗಿ ಸಮೀಪದ ಗಂದಿಗವಾಡ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ ಶ್ರೀ ಗುರುಸಿದ್ಧೇಶ್ವರ ವೇದಿಕೆಯಲ್ಲಿ ಶನಿವಾರ ಏರ್ಪಡಿಸಿದ್ದ ಖಾನಾಪುರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

    ಖಾನಾಪೂರ ತಾಲೂಕು ಐತಿಹಾಸಿಕ ನೆಲೆಬೀಡಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕನ್ನಡದೊಂದಿಗೆ ಮರಾಠಿ, ಕೊಂಕಣಿ, ಉರ್ದು ಭಾಷಿಕರ ಭಾವೈಕ್ಯದ ಸಂಗಮವಾಗಿದೆ. ಕನ್ನಡ ಭಾಷೆ, ನಾಡು&ನುಡಿ ಅಸ್ಮಿತೆ ಕಾಪಾಡುವ ಗಡಿಭಾಗದ ಮಹಾದ್ವಾರ ಆಗಿದೆ ಎಂದರು. ಕಸಾಪ ಜಿಲ್ಲಾಧ್ಯೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡ ಭಾಷೆ ಉಳಿವೆಗೆ ಕನ್ನಡ ಮನಸ್ಸುಗಳು ಸದಾ ಹಾತೊರೆಯುತ್ತಿದ್ದು, ಹೊಸ ಸಾಹಿತಿಗಳ ಕಾವ್ಯಗಳೇ ಅದಕ್ಕೆ ಸಾ ಎಂದರು.

    ಸಮ್ಮೇಳನ ಉದ್ಘಾಟಿಸಿದ ರಾಣಿ ಶುಗರ್ಸ್​ ಮಾಜಿ ಚೇರ್ಮನ್​ ನಾಸೀರ್​ ಬಾಗವಾನ ಮಾತನಾಡಿ, ಖಾನಾಪುರ ತಾಲೂಕಿನಲ್ಲಿ ಭಾಷಾಭಿಮಾನದ ಜತೆಗೆ ಶೈಣಿಕ, ಆರ್ಥಿಕ, ಸಾಮಾಜಿಕ ಪ್ರಗತಿಗೆ ಸಾಮೂಹಿಕ ಇಚ್ಛಾಶಕ್ತಿ ಮುಖ್ಯ ಎಂದು ತಿಳಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯ ಈಶ್ವರ ಸಂಪಗಾವಿ ಮಾತನಾಡಿದರು. ಕಸಾಪ ತಾಲೂಕು ಟಕದ ನಿಕಟಪೂರ್ವ ಅಧ್ಯ ವಿಜಯ ಬಡಿಗೇರ ಸಮ್ಮೇಳನಾಧ್ಯರ ಪರಿಚಯ ಮಾಡಿದರು. ಅವರೊಳ್ಳಿ&ಬಿಳಕಿ ಚನ್ನಬಸವದೇವರು ಸಾನ್ನಿಧ್ಯವಹಿಸಿದ್ದರು.

    ಲೈಲ್​ ಶುಗರ್ಸ್​ ಎಂಡಿ ಸದಾನಂದ ಪಾಟೀಲ, ಗ್ರಾಪಂ ಅಧ್ಯ ದೇಸಾಯಿ ಗಾಳಿ, ಸ್ವಾಗತ ಸಮಿತಿ ಕಾರ್ಯದರ್ಶಿ ವೀರಯ್ಯ ಹಿರೇಮಠ, ೇತ್ರ ಶಿಣಾಧಿಕಾರಿ ರಾಜೇಶ್ವರಿ ಕುಡಚಿ, ೇತ್ರ ಸಮನ್ವಯಾಧಿಕಾರಿ ಎ.ಆರ್​.ಅಂಬಗಿ, ಅಶೋಕ ಮೂಲಿಮನಿ, ವಿಜಯ ಸಾಣಿಕೊಪ್ಪ, ಮಹಾದೇವ ಮೇದಾರ, ಅಶೋಕ ಯಮಕನಮರಡಿ, ಸ.ರಾ.ಸುಳಕೂಡೆ, ಮಹಾಂತೇಶ ಚಿಕ್ಕಮಠ, ವಿಠ್ಠಲ ಹಿಂಡಲ್ಕರ್​, ಜಗದೀಶ ಹೊಸಮನಿ, ಮಹಾಂತೇಶ ಸಾಣಿಕೊಪ್ಪ, ಮಹಾಂತೇಶ ಕಮತಗಿ, ವಿಜಯ ಕುಲಕರ್ಣಿ ಇತರರು ಇದ್ದರು. ಮಂಜುನಾಥ ಶೆಟ್ಟೆಣ್ಣವರ ನಿರೂಪಿಸಿದರು. ಎಸ್​.ಎಚ್​.ಬಾಗವಾನ ಸ್ವಾಗತಿಸಿದರು. ಉದಯ ಬಡಸದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts