More

    ಕನಕಗುರು ಪೀಠದಿಂದ ನೂರು ದಿನ ಸಾವಿರ ಹಳ್ಳಿ ಒಂದು ಗುರಿ

    ಭದ್ರಾವತಿ: ನಗರ ಹಾಗೂ ಗ್ರಾಮೀಣ ಭಾಗದ ಸಾಕಷ್ಟು ಜನರಿಗೆ ಇಂದಿಗೂ ಸಮಾಜದ ಮಠ ಹಾಗೂ ಗುರುಗಳ ಪರಿಚಯವೇ ಇಲ್ಲದಂತಾಗಿದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನೂರು ದಿನ ಸಾವಿರ ಹಳ್ಳಿ ಒಂದು ಗುರಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 400 ಹಳ್ಳಿಗಳಿಗೆ ಭೇಟಿ ಮಾಡಿದ್ದು, ಭಕ್ತರಿಗೆ ಮಠ ಮಾನ್ಯಗಳನ್ನು ಪರಿಚಯಿಸುವ ಕೆಲಸ ಮಾಡಲಾಗಿದೆ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
    ಶ್ರೀ ಮಠದ ಅಭಿವೃದ್ಧಿ ವಿಚಾರ ಕುರಿತು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಶ್ರೀಗಳು ಭಾನುವಾರ ನಗರದ ಹೊಸಮನೆ ಕೆರೆಕೋಡಮ್ಮ ದೇವಸ್ಥಾನದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
    ಶಿವಮೊಗ್ಗದಿಂದ ಕೋಲಾರದವರೆಗೂ ಬರುವ ಸುಮಾರು 42 ಹಳ್ಳಿಗಳಿಗೂ ಭೇಟಿ ಮಾಡಿ ಅಲ್ಲಿನ ಸಮಾಜದ ಬಂಧುಗಳಿಗೆ ಮಠಗಳ ಪ್ರಾಮುಖ್ಯತೆ ಕುರಿತು ಮನವರಿಕೆ, ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕೆಲವೆ ಜನರು ಮಾತ್ರ ಮಠಗಳಿಗೆ ಹೋಗಿ ಬರುವ ಕೆಲಸ ಮಾಡುತ್ತಿದ್ದಾರೆ. ಮಠಗಳಿಗೆ ನಮ್ಮನ್ನು ಮತ್ತೊಬ್ಬರು ಕರೆದುಕೊಂಡು ಹೋಗುವ ಅಗತ್ಯವಿಲ್ಲ. ನಮ್ಮ ಸಮಾಜ, ನಮ್ಮ ಮಠ, ನಮ್ಮ ಸ್ವಾಮೀಜಿ ಎಂಬ ಭಾವನೆ ನಮ್ಮಲ್ಲೇ ಮೂಡಿದಾಗ ನಾವಾಗಿಯೆ ಭಕ್ತಿಯಿಂದ ಮಠಕ್ಕೆ ಹೋಗಬಹುದು. ಅಂತಹ ಗೌರವ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕಾಗಿದೆ ಎಂದರು.
    ಹೊಸದುರ್ಗ ಮಠದ 30 ಎಕರೆ ಜÁಗದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ, 57 ಅಡಿಯ ಭಕ್ತ ಕನಕದಾಸರ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಶೀಘ್ರದಲ್ಲಿಯೆ ಉದ್ಘಾಟನೆ ನೆರವೇರಲಿದೆ. ಇದರೊಂದಿಗೆ ಶ್ರೀ ಮಠದ ಕಾಂಪೌಂಡ್ ನಿರ್ಮಾಣ, ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣ ಕಾಮಗಾರಿ ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.

    ನಮ್ಮ ಸಮುದಾಯದ ಜನರಿಗೆ ಮಾರಿ ಹಬ್ಬ, ಅಂತರಘಟ್ಟಮ್ಮನ ಹಬ್ಬ ಮಾಡುವುದು, ಬೀಗರಿಗೆ ಕರೆದು ಊಟ ಹಾಕುವುದು ಗೊತ್ತು. ಆದರೆ ಮಠಗಳಿಗೆ ಕಾಣಿಕೆ ಕೂಡುವುದು ಮಾತ್ರ ಗೊತ್ತಿಲ್ಲ. ಅದನ್ನು ಪರಿಪಾಠ ಮಾಡುವ ಹಿನ್ನೆಲೆಯಲ್ಲಿಯೆ ಇವತ್ತು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಪ್ರತಿಯೊಬ್ಬರಿಂದ ಅವರ ಶಕ್ತಿ ಅನುಸಾರ ಕಾಣಿಕೆ ಸಂಗ್ರಹಿಸಲಾಗುತ್ತಿದೆ ಎಂದು ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.
    ಸಮಾಜದ ಬಂಧುಗಳು ನಾವೆಲ್ಲರೂ ಒಂದೇ ಎಂಬ ವಿಶಾಲ ಮನೋಭಾವನೆ ಬೆಳಸಿಕೊಳ್ಳಬೇಕು. ಸಮಾಜ ಕಟ್ಟುವ ಕೆಲಸ ಮಾಡುವವರಿಗೆ ಬೆನ್ನುತಟ್ಟಿ, ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು. ಆಗ ಎಲ್ಲರೂ ಸಂಘಟಿತರಾಗಿ ಸಮಾಜ ಅಭಿವೃದ್ಧಿ ಹೊಂದುತ್ತದೆ. ನಮ್ಮಲ್ಲಿರುವ ವೈಮನಸ್ಸುಗಳು ದೂರವಾಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
    ಕುರುಬ ಸಮಾಜದ ಅಧ್ಯಕ್ಷ ಬಿ.ಎಂ.ಸಂತೋಷ್, ಸಣ್ಣಯ್ಯ, ಬಿ.ಎಚ್.ವಸಂತ, ಮಂಜುನಾಥ್, ವಿನೋದ್‍ಕುಮಾರ್, ಹೇಮಾವತಿ ಶಿವಾನಂದ, ಸುಬ್ಬಣ್ಣ, ಶ್ರೇಯಸ್ ಇದ್ದರು.
    ತಾಲೂಕಿನಾದ್ಯಂತ ಶ್ರೀಗಳ ಸಂಚಾರ: ಹಳೇನಗರ, ಹೊಸಮನೆ, ಕಾರೇಹಳ್ಳಿ, ಸಿದ್ಧಾಪುರ, ಕಾಗದನಗರ ಸೇರಿದಂತೆ ತಾಲೂಕಿನಾದ್ಯಂತ ಶ್ರೀಗಳು ಸಂಚರಿಸಿ, ಭಕ್ತರಿಗೆ ಆಶೀರ್ವದಿಸಿದರು. ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts