More

    ಕದ್ದು ಮುಚ್ಚಿ ನಡೆಯುತ್ತಿದೆ ವಹಿವಾಟು !

    ಹಳಿಯಾಳ: ಪಟ್ಟಣದಲ್ಲಿ ಪ್ರಮುಖ ಹಾರ್ಡ್​ವೇರ್ ವ್ಯಾಪಾರಸ್ಥರು ಲಾಕ್ ಡೌನ್ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ವಣದ ಸಾಮಗ್ರಿಗಳನ್ನು ಕದ್ದು ಮುಚ್ಚಿ ಮಧ್ಯರಾತ್ರಿ ಮಾರಾಟ ಮಾಡಲಾರಂಭಿಸಿದ್ದಾರೆ.

    ಲಾಕ್ ಡೌನ್ ಘೊಷಣೆಯಾದ ದಿನದಿಂದಲೇ ಹಾರ್ಡ್​ವೇರ್ ವ್ಯಾಪಾರಸ್ಥರು ತಾಲೂಕಾಡಳಿತ ಮತ್ತು ಪುರಸಭೆಯವರ ಕಣ್ತಪ್ಪಿಸಿ ತಮ್ಮ ಕಳ್ಳದಂದೆಯನ್ನು ಆರಂಭಿಸಿದ್ದಾರೆ. ರಾತ್ರಿಯಾದಂತೆ ಇವರ ಕಾರುಬಾರು ಆರಂಭಗೊಳ್ಳುತ್ತದೆ. ಮಧ್ಯರಾತ್ರಿಯಿಂದ ಬೆಳಗಿನ ಜಾವ ಅಥವಾ 7 ಗಂಟೆಯವರೆಗೆ ಸಿಮೆಂಟ್, ಸ್ಟೀಲ್ ಹಾಗೂ ಇನ್ನಿತರೆ ಮನೆ ನಿರ್ವಣಕ್ಕೆ ಅವಶ್ಯಕವಾದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಹೀಗೆ ಕದ್ದು ಮುಚ್ಚಿ ವಹಿವಾಟು ಮಾಡುವ ಈ ವ್ಯಾಪಾರಸ್ಥರು ಗ್ರಾಹಕರಿಗೆ ಉಪಕಾರ ಮಾಡುತ್ತಿರುವಂತೆ ಬಿಂಬಿಸಿ, ಸಾಮಗ್ರಿಗಳನ್ನು ದುಬಾರಿ ಬೆಲೆಗೆ ಮಾರಿ ವಂಚಿಸಲಾರಂಭಿಸಿದ್ದಾರೆ ಎಂಬ ಆರೋಪಗಳು ಗ್ರಾಹಕರಿಂದ ಕೇಳಿಬರುತ್ತಿವೆ.

    ಕಾಮಗಾರಿ ಜೋರು:

    ಮನೆ ನಿರ್ವಣದ ಸಾಮಗ್ರಿಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಾಂತರ ಭಾಗಗಳಿಗೆ ಹೋಗುತ್ತಿವೆ. ಇನ್ನೊಂದೆಡೆ ಗ್ರಾಪಂ ಹಾಗೂ ಪುರಸಭೆಯ ಪರವಾನಗಿ ಇಲ್ಲದೆ ಗ್ರಾಮೀಣ ಭಾಗ ಹಾಗೂ ಪಟ್ಟಣದಲ್ಲಿಯೂ ಮನೆ ನಿರ್ವಣದ ಕಾಮಗಾರಿಗಳು ಜೋರಾಗಿ ನಡೆಯಲಾರಂಭಿಸಿವೆ. ಅಲ್ಲದೆ, ಅಲ್ಲಲ್ಲಿ ಮನೆಗಳ ಮೇಲ್ಛಾವಣಿಯ (ಸ್ಲಾ್ಯಬ್) ಕಾಮಗಾರಿಗಳು ನಡೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕಾರ್ವಿುಕರು ಗುಂಪುಗೂಡಿ ಕೆಲಸ ಮಾಡುತ್ತಿರುವುದು ಜಾಗೃತ ನಾಗರಿಕರನ್ನು ಚಿಂತೆಗೀಡು ಮಾಡಿದೆ.

    ಹೆಸ್ಕಾಂ ಎಇಇ ದಿಢೀರ್ ಭೇಟಿ

    ಹಳಿಯಾಳ ಹೋಬಳಿಯ ನೋಡಲ್ ಅಧಿಕಾರಿಯಾಗಿರುವ ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ ಶುಕ್ರವಾರ ಬೆಳಗಿನ ಜಾವ ಪಟ್ಟಣದಲ್ಲಿನ ಹಾರ್ಡ್​ವೇರ್ ಅಂಗಡಿಗಳಿಗೆ ದಿಢೀರ್ ಭೇಟಿ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಿದ್ದಾರೆ. ತಾಲೂಕಾಡಳಿತದ ಗಮನಕ್ಕೆ ತರದೆ ಮಧ್ಯರಾತ್ರಿ ವಹಿವಾಟು ನಡೆಸುವುದು ಸೂಕ್ತವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮನೆ ನಿರ್ವಣದ ಸಾಮಗ್ರಿ ಮಾರಾಟ ಮಾಡಲು ತಾಲೂಕಾಡಳಿತದಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರವಾನಗಿ ಪತ್ರ ತಂದಿರುವ ಗ್ರಾಹಕರಿಗೆ ಮಾತ್ರ ಸೂಚಿತ ಅವಧಿಯಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡಿ ಎಂದು ಎಚ್ಚರಿಸಿದ್ದಾರೆ. ಮಧ್ಯರಾತ್ರಿ ಆರಂಭಗೊಳ್ಳುತ್ತಿರುವ ವಹಿವಾಟನ್ನು ನಿಯಂತ್ರಿಸಲು ಮುಂದಾಗಿರುವ ತಾಲೂಕಾಡಳಿತ ಹಾರ್ಡ್​ವೇರ್ ವ್ಯಾಪಾರಸ್ಥರು, ಸ್ಲಾ್ಯಬ್ ಕಾರ್ವಿುಕ ಗುತ್ತಿಗೆದಾರರು, ಸ್ಲಾ್ಯಬ್ ಯಂತ್ರಗಳ ಮಾಲೀಕರನ್ನು ಕರೆಸಿ ಮುಂಜಾಗ್ರತೆ ಸಭೆ ಕರೆಯಲು ಸಿದ್ಧತೆ ನಡೆಸಿದೆ.

    ಸಾರ್ವಜನಿಕರು ತಮ್ಮ ಮನೆ ನಿರ್ವಣದ ಕಾರ್ಯ ಇದ್ದರೆ ಆ ಕಾಮಗಾರಿಯ ವಿವರ, ಅದರ ಅವಶ್ಯಕತೆ, ಕಾಮಗಾರಿಗೆ ತಗಲುವ ಸಮಯ, ಬಳಸುವ ಕಾರ್ವಿುಕರ ಸಂಖ್ಯೆ ಇತ್ಯಾದಿಗಳ ವಿವರ ನೀಡಿ ಪರವಾನಗಿ ಪಡೆಯಬೇಕು. ಹಾರ್ಡ್​ವೇರ್ ವ್ಯಾಪಾರಸ್ಥರು ಸಹ ಪುರಸಭೆಯ ಪರವಾನಗಿ ಇಲ್ಲದೆ ಯಾವುದೇ ಕಟ್ಟಡ ನಿರ್ವಣದ ಸಾಮಗ್ರಿಗಳನ್ನು ಮಾರಾಟ ಮಾಡಬಾರದು.

    | ಕೇಶವ ಚೌಗಲೆ ಮುಖ್ಯಾಧಿಕಾರಿ, ಹಳಿಯಾಳ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts