More

    ಕಣಬರ್ಗಿ ಬಡಾವಣೆ ನಿರ್ಮಾಣಕ್ಕೆ ಷರತ್ತು!

    ಮಂಜುನಾಥ ಕೋಳಿಗುಡ್ಡ ಬೆಳಗಾವಿ
    ಮಹಾನಗರದಲ್ಲಿ ಎರಡೂವರೆ ದಶಕದ ಬಳಿಕ ನಿರ್ಮಾಣಗೊಳ್ಳುತ್ತಿರುವ ಕಣಬರ್ಗಿ ವಸತಿ ಬಡಾವಣೆ ಸಂಬಂಧ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ಕ್ಕೆ ಸರ್ಕಾರವು ಹಲವು ಷರತ್ತು ವಿಧಿಸಿದೆ. ರಾಜ್ಯದಲ್ಲಿಯೇ ಮಾದರಿ ಬಡಾವಣೆಗಾಗಿ 127 ಕೋಟಿ ರೂ. ವೆಚ್ಚ ಮಾಡುತ್ತಿದೆ.

    ನಗರದ ಹೊರವಲಯದ ಕಣಬರ್ಗಿಯಲ್ಲಿ 127.80 ಎಕರೆ ಜಮೀನಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಿರುವ ಕಣಬರ್ಗಿ ವಸತಿ ಬಡಾವಣೆ (ಸ್ಕೀಂ ನ.61)ಯಲ್ಲಿ ಬಡಾವಣೆ ಕಲುಷಿತ ನೀರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ), ಮಳೆ ನೀರು ಸಂಗ್ರಹಿಸಿ ಮರು ಬಳಕೆ ಮಾಡಲು ಮಳೆ ನೀರು ಕೊಯ್ಲು ಘಟಕ, ಸೋಲಾರ್ ಬೀದಿ ದೀಪ, ಸೋಲಾರ್ ವಿದ್ಯುತ್ ಘಟಕ, ಆಸ್ಪತ್ರೆ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ.

    ಬುಡಾ ಹೊಸ ಬಡಾವಣೆ ರಚನೆಗೆ 177.45 ಕೋಟಿ ರೂ. ಅಂದಾಜು ಮೊತ್ತದ ಪಟ್ಟಿಯನ್ನು ಬುಡಾ ಸಲ್ಲಿಸಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆಯು ಅದನ್ನು 127.71 ಕೋಟಿ ರೂ. ಪರಿಷ್ಕರಿಸಿ ಅನುಮೋದನೆ ನೀಡಿದೆ. ಅಲ್ಲದೆ, ಕಾಮಗಾರಿಗೆ ಟೆಂಡರ ಕರೆಯುವ ಸಂದರ್ಭದಲ್ಲಿ 29.15ನ್ನು ಹಾಗೆಯೇ ಬಿಟ್ಟು 127.71 ಎಕರೆ ಭೂಮಿಗೆ ಮಾತ್ರ ಟೆಂಡರ್ ಕರೆಯಬೇಕು. ಬಡಾವಣೆಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಕೇಳುವಂತಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಷರತ್ತು ವಿಧಿಸಿದೆ.
    ಬುಡಾವು ಕಣಬರ್ಗಿಯಲ್ಲಿ 157.01 ಎಕರೆ ಜಮೀನಿನಲ್ಲಿ ಕಣಬರ್ಗಿ ವಸತಿ ಬಡಾವಣೆಗಾಗಿ ಸರ್ಕಾರವು ಪ್ರಸ್ತಾಪಿಸಿತು. ಅದರಲ್ಲಿ 127.86 ಎಕರೆ ಈಗಾಗಲೇ ಬುಡಾ ಕೈಯಲ್ಲಿದೆ. ಉಳಿದ 29.15 ಎಕರೆ ಜಮೀನಿಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಇದೆ. ದಶಕದ ಹಿಂದೆಯೇ ಈ ಪ್ರಕ್ರಿಯೆ ಆರಂಭವಾಗಿದ್ದರೂ ಕಾರಣಾಂತರಗಳಿಂದ ಭೂಸ್ವಾಧೀನ ಕಾರ್ಯ ಪೂರ್ಣಗೊಳ್ಳಲಿಲ್ಲ. ಇದೀಗ ಬುಡಾ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, 2023 ನವೆಂಬರ್ ಅಂತ್ಯದ ವೇಳೆ ಬಡಾವಣೆ ನಿರ್ಮಾಣವಾಗುವ ಸಾಧ್ಯತೆ ಇದೆ.

    ಬಡಾವಣೆ ನಿರ್ಮಾಣಕ್ಕೆ ಮಂಜೂರಾದ 127.71 ಕೋಟಿ ರೂ.ಮೊತ್ತದಲ್ಲಿ ಪ್ಲಾಟ್ ಪಾರ್ಕಿಂಗ್ ಕಾಮಗಾರಿಗೆ 5.55 ಕೋಟಿ ರೂ. ಬಳಸಿಕೊಳ್ಳಬೇಕು. ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣಕ್ಕೆ 3.40 ಕೋಟಿ ರೂ. ಆರ್‌ಸಿಸಿ ಚರಂಡಿ ನಿರ್ಮಾಣ 2.87 ಕೋಟಿ ರೂ., ಕುಡಿಯುವ ನೀರು, ಪೈಪ್ ಲೈನ್ ಮತ್ತಿತರರ ಕಾಮಗಾರಿಗಳಿಗೆ 5.50 ಕೋಟಿ ರೂ. ಹೀಗೆ ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ಪ್ರತ್ಯೇಕವಾಗಿ ಖರ್ಚು ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 105 ಎಕರೆ ಪ್ರದೇಶದಲ್ಲಿ 1245 ನಿವೇಶನ ನಿರ್ಮಾಣ, ಎರಡನೇ ಹಂತದಲ್ಲಿ 23 ಎಕರೆ ಪ್ರದೇಶದಲ್ಲಿ ಜಿ+3 ಮಾದರಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ
    ಮನೆಗಳ ಹಂಚಿಕೆ ಮಾಡಲಿದೆ. ಅಲ್ಲದೆ, ಬಡಾವಣೆಯಲ್ಲಿ ಶೇ.3ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೂ ಮೀಸಲಿಡಲಾಗಿದ್ದು, ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣವಾಗಲಿವೆ ಎಂದು ಬುಡಾ ಅಧಿಕಾರಿಗಳು ತಿಳಿಸಿದ್ದಾರೆ.

    ವಾರದಲ್ಲಿಯೇ ಕಣಬರ್ಗಿ ವಸತಿ ಬಡಾವಣೆ (ಸ್ಕೀಂ ನ.61) ಕಾಮಗಾರಿ ಟೆಂಡರ್ ಕರೆಯಲಾಗುವುದು. ಮಾರ್ಚ್‌ನಲ್ಲಿಯೇ ನಿವೇಶನಗಳಿಗಾಗಿ ಸಾರ್ವಜನಿಕರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗುವುದು. ಒಟ್ಟು 127 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬಡಾವಣೆಯಲ್ಲಿ ಎಸ್‌ಟಿಪಿ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದೊಂದು ಮಾದರಿ, ಹೈಟೆಕ್ ಸೌಲಭ್ಯ ಒಳಗೊಂಡಿರುವ ಬಡಾವಣೆಯಾಗಲಿದೆ.
    | ಪ್ರೀತಂ ನಸ್ಲಾಪುರೆ ಬುಡಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts