More

    ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿ ಸಾಧ್ಯ

    ಶಿರಸಿ: ರೈತರು ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿಯನ್ನು ಹಸಿರುಮನೆಯಲ್ಲಿ ಪಡೆಯಬಹುದಾಗಿದೆ. ಅದರತ್ತ ಆದ್ಯತೆ ನೀಡುವ ಅಗತ್ಯವಿದೆ ಎಂದು ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಎನ್.ಕೆ. ಹೆಗಡೆ ಹೇಳಿದರು.

    ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಹಸಿರುಮನೆ ನಿರ್ಮಾಣ ಮತ್ತು ನಿರ್ವಹಣೆ ಕುರಿತ ಒಂದು ದಿನದ ಅಂತರ್ಜಾಲ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

    ಹೆಚ್ಚುತ್ತಿರುವ ಜನಸಂಖ್ಯೆ, ದಿನೇ ದಿನೇ ಕಡಿಮೆಯಾಗುತ್ತಿರುವ ತಲಾವಾರು ಕ್ಷೇತ್ರ, ನೀರು ಇತ್ಯಾದಿ ಕಾರಣಕ್ಕೆ ರೈತರಿಗೆ ವಿಶ್ವ ಮುಕ್ತ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲು ಕಷ್ಟವಾಗುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿಯಲ್ಲಿ ಅಧಿಕ ಇಳುವರಿ ಮತ್ತು ಉತ್ಕೃಷ್ಟ ಗುಣಮಟ್ಟ ಪಡೆಯುವುದು ಅತ್ಯವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದಕ್ಕೆ ಹಸಿರುಮನೆ ಪೂರಕವಾಗಲಿದೆ ಎಂದರು.

    ಮಹಾವಿದ್ಯಾಲಯದ ಪುಷ್ಪಕೃಷಿ ಮತ್ತು ಉದ್ಯಾನ ವಿನ್ಯಾಸಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರೀತಮ್ ಎಸ್.ಪಿ. ಅವರು ಹಸಿರುಮನೆ ನಿರ್ವಣ, ನಿರ್ವಹಣೆ, ಲಾಭಗಳು, ಉಪಯುಕ್ತತೆಗಳ ಬಗ್ಗೆ ತರಬೇತಿ ನೀಡಿದರು.

    ಹಸಿರುಮನೆಯನ್ನು ಎಲ್ಲಿ? ಹೇಗೆ? ಯಾವ ದಿಕ್ಕಿನಲ್ಲಿ ನಿರ್ವಿುಸಿದರೆ ಸೂಕ್ತ? ಬೇಕಾಗುವ ಸಾಮಗ್ರಿ, ಯಾವ ಪ್ರದೇಶಕ್ಕೆ ಅನುಕೂಲಕರವಾದ ಪಾಲಿಥಿನ್ ಹಾಳೆ ಬಳಸಬೇಕು? ಹಸಿರುಮನೆಯೊಳಗೆ ಗಿಡಗಳು ಹೇಗೆ ಅಧಿಕ ಇಳುವರಿ ಕೊಡುತ್ತವೆ? ಅನುವಂಶಿಕ ಉತ್ಪಾದನೆ ಸಾಮರ್ಥ್ಯ ಹೇಗೆ ಹೆಚ್ಚಿಗೆ ಆಗುತ್ತದೆ? ಹಸಿರುಮನೆ ವಿಧಗಳು, ಆಕಾರಗಳು, ನಿರ್ವಹಣೆಗಳಾದ ನೀರಾವರಿ ಘಟಕ, ರಸಾವರಿ ಘಟಕ, ಹವಾಮಾನ ಹತೋಟಿ, ಕೀಟ, ರೋಗಗಳಿಂದ ಮುಕ್ತಗೊಳಿಸುವ ಕುರಿತು ಮಾಹಿತಿ ನೀಡಿದರು.

    ವಿವಿಧ ಜಿಲ್ಲೆಗಳ 50ಕ್ಕೂ ಹೆಚ್ಚರು ರೈತರು, ರೈತ ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಸ್ತರಣಾ ಮುಂದಾಳು ಡಾ. ಶಿವಕುಮಾರ ಕೆ.ಎಂ. ನಿರೂಪಿಸಿದರು. ತಾಂತ್ರಿಕ ಸಲಹೆಗಾರ ಪ್ರವೀಣಕುಮಾರ ಯಲಗೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts