More

    ಕಡಲೆ ಖರೀದಿ ಶೀಘ್ರ ಪುನಾರಂಭ?

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಬೆಂಬಲ ಬೆಲೆ ಕಡಲೆ ಖರೀದಿ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಗೊಳಿಸಿರುವ ಸರ್ಕಾರ ಶೀಘ್ರ ಪುನಾರಂಭ ಮಾಡುವ ಸಾಧ್ಯತೆ ಇದೆ.

    ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಾರತ ಲಾಕ್​ಡೌನ್ ಘೋಷಣೆ ನಂತರ ಈಗಾಗಲೇ ಆರಂಭಿಸಲಾಗಿದ್ದ ಕಡಲೆ ಖರೀದಿ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಈ ಕುರಿತು ಸರ್ಕಾರ ತಾತ್ಕಾಲಿಕ ಸ್ಥಗಿತಕ್ಕೆ ಆದೇಶ ಕೂಡ ಮಾಡಿತ್ತು. ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಕೊಡಲು ಈಗಾಗಲೇ ರೈತರು ಹೆಸರು ನೋಂದಣಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಬರುವ ರೈತರ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಅಲ್ಲದೆ, ಖರೀದಿ ಕೇಂದ್ರದವರು ಫೋನ್ ಮಾಡಿ ಹೇಳಿದ ರೈತರು ಮಾತ್ರ ಖರೀದಿಗೆ ತರುತ್ತಾರೆ. ಹಾಗಾಗಿ ಸೀಮಿತ ಜನರ ಮಧ್ಯೆ ನಡೆಯುವ ಖರೀದಿ ಪ್ರಕ್ರಿಯೆಗೆ ಪುನಃ ಚಾಲನೆ ನೀಡಬೇಕೆಂಬುದು ರೈತರ ಒತ್ತಾಯವಾಗಿದೆ. ಧಾರವಾಡ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದಿದೆ. ಕಡಲೆ ಖರೀದಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರಿದೆ. ಸರ್ಕಾರದ ಆದೇಶ ಬಂದ ನಂತರ ಪುನಾರಂಭ ಮಾಡಲಾಗುವುದು. ಅಲ್ಲದೆ, ಮುಕ್ತ ಮಾರುಕಟ್ಟೆಯಲ್ಲೂ ಕಡಲೆ ಸೇರಿ ಎಲ್ಲ ಬೆಳೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts