More

    ಕಂದಾಯ ಸರ್ವೇ ನಂಬರ್ ಕೈಬಿಡುವಂತೆ ಮನವಿ

    ತಲಕಾಡು: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ, ಕಂದಾಯ ಇಲಾಖೆಯ ಸರ್ವೇ ನಂಬರ್‌ಗಳನ್ನು ಕೈಬಿಡುವಂತೆ ತಲಕಾಡು ಗ್ರಾಮ ಪಂಚಾಯಿತಿಯಿಂದ ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿದೆ.


    ಈ ಬಗ್ಗೆ ಜೂ.27ರ ಸಾಮಾನ್ಯ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ತಲಕಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಕಾಡು ಹಾಗೂ ವಡೆಯಾಂಡಹಳ್ಳಿ ಗ್ರಾಮಗಳಲ್ಲಿ ಈಗಾಗಲೇ ಬಡಾವಣೆ ಹಾಗೂ ಜನವಸತಿ ಪ್ರದೇಶಗಳು ನಿರ್ಮಾಣವಾಗಿದ್ದು, ಸದರಿ ಪ್ರದೇಶಗಳಲ್ಲಿ ಸುಮಾರು 50 ವರ್ಷಗಳಿಂದ ಜನ ವಾಸವಾಗಿದ್ದಾರೆ. ಇವರಿಗೆ ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ಮುಖಾಂತರ ಖಾತೆ ನೀಡಲು ತಾಲೂಕು ಮೋಜಿಣಿ ತಂತ್ರಾಂಶಕ್ಕೆ ಕಳುಹಿಸಿದ ಸಂದರ್ಭದಲ್ಲಿ ಸದರಿ ಪ್ರದೇಶ ಗ್ರಾಮಠಾಣ ವ್ಯಾಪ್ತಿಯಿಂದ ಹೊರಗಡೆ ಇದೆ ಎಂದು ವರದಿ ಬರುತ್ತಿದೆ.

    ತಲಕಾಡು ಗ್ರಾಮ ಠಾಣಾ ವ್ಯಾಪ್ತಿಯನ್ನು ಅನೇಕ ವರ್ಷಗಳಿಂದ ವಿಸ್ತರಣೆ ಮಾಡದೆ ಇರುವುದರಿಂದ ಆಸ್ತಿಯ ಮಾಲೀಕರಿಗೆ ಇ-ಸ್ವತ್ತು ಖಾತೆ ಪಡೆದುಕೊಳ್ಳಲು ತೊಂದರೆಯಾಗಿದೆ. ಜನತೆಗೆ ಆಗುತ್ತಿರುವ ತೊಂದರೆ ಪರಿಗಣಿಸಿ ಇತ್ತೀಚೆಗೆ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜನವಸತಿ ಪ್ರದೇಶಗಳನ್ನು ಕಂದಾಯ ಇಲಾಖೆಯ ಸರ್ವೇ ನಂಬರ್ ವ್ಯಾಪ್ತಿಯಿಂದ ಕೈಬಿಡುವಂತೆ ಮನವಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts