More

    ಕಂಟೇನ್ಮೆಂಟ್ ಜೋನ್ ನಿವಾಸಿಗಳ ಪ್ರತಿಭಟನೆ

    ಶಿರಹಟ್ಟಿ: ಆಹಾರದ ಕಿಟ್​ಗಳ ಪೂರೈಕೆಗೆ ಆಗ್ರಹಿಸಿ ಪಟ್ಟಣದ ವಾರ್ಡ್ ನಂ. 6ರ ನಿವಾಸಿಗಳು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು. ಇಲ್ಲಿನ ನಿವಾಸಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಾರ್ಡ್ ನಂ. 6ರ ಪ್ರದೇಶವನ್ನು ತಾಲೂಕಾಡಳಿತ, ಪಪಂ ಸಿಬ್ಬಂದಿ ಜು. 9ರಂದು ಸೀಲ್​ಡೌನ್ ಮಾಡಿದ್ದರು. ಆದರೆ, ಇಲ್ಲಿಯವರೆಗೆ ನಿವಾಸಿಗಳಿಗೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ. ಆಹಾರದ ಕಿಟ್​ಗಳನ್ನು ಪೂರೈಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪಪಂ ಮಾಜಿ ಸದಸ್ಯ ಸಂತೋಷ ಕುರಿ ಮಾತನಾಡಿ, ಸೀಲ್​ಡೌನ್ ಮಾಡಿದ್ದರಿಂದ ನಿವಾಸಿಗಳು ಮನೆಯಿಂದ ಹೊರಗಡೆ ಹೋಗದಂತೆ ಸೂಚಿಸಲಾಗಿದೆ. ಆದರೆ, 6 ದಿನಗಳಿಂದ ದುಡಿಮೆಗೆ ಹೋಗಿಲ್ಲ. ಪಪಂ ಅಧಿಕಾರಿಗಳು ನಿವಾಸಿಗಳಿಗೆ ಯಾವುದೇ ಸೌಲಭ್ಯ ಹಾಗೂ ಆಹಾರ ಕಿಟ್ ಪೂರೈಕೆ, ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು. ಸ್ಥಳಕ್ಕಾಗಮಿಸಿದ ಪಪಂ ಮುಖ್ಯಾಧಿಕಾರಿ ಮಲ್ಲೇಶ ಎಂ. ಮಾತನಾಡಿ, ಕಂಟೇನ್ಮೆಂಟ್ ಪ್ರದೇಶದ ಜನರಿಗೆ ಕಡ್ಡಾಯವಾಗಿ ಉಚಿತ ಆಹಾರ ಕಿಟ್ ಕೊಡಬೇಕೆಂಬುದು ಇಲ್ಲ. ಸರ್ಕಾರ ಇಲ್ಲವೇ ಜಿಲ್ಲಾಡಳಿತ ಪೂರೈಸಿದರಷ್ಟೇ ನೀಡುತ್ತೇವೆ. ಅಲ್ಲಿಯವರೆಗೆ ಇಲ್ಲಿನ ನಿವಾಸಿಗಳು ದುಡ್ಡು ಕೊಟ್ಟು ನಮ್ಮ ಕಚೇರಿ ಸಿಬ್ಬಂದಿಯಿಂದ ಆಹಾರ ತರಿಸಿಕೊಳ್ಳಬಹುದು ಎಂದು ಹೇಳಿದರು. ಮಾದಮ್ಮ ಮುಷ್ಯಪ್ಪನವರ, ಪರಸಪ್ಪ ಜೋಗೇರ, ನಿಂಗಮ್ಮ ಮುಷ್ಯಪ್ಪನವರ, ಮಂಜು ಗಾರವಾಡ, ಚಂದ್ರು ಜೋಗೇರ, ಯಲ್ಲಪ್ಪ ಮುಷ್ಟಣ್ಣವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts