More

    ಓದುವ ಹವ್ಯಾಸ ರೂಢಿಸಿಕೊಳ್ಳಿ

    ವಿಜಯವಾಣಿ ಸುದ್ದಿಜಾಲ ಯಲ್ಲಾಪುರ: ಯುವಕರು ವ್ಯಾವಹಾರಿಕ, ಸಾಂಸ್ಕೃತಿಕ ಮನೋಭಾವದ ಜತೆಗೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ ಹೇಳಿದರು.

    ಪಟ್ಟಣದ ವಾಕರಸಾರಿಗೆ ಸಂಸ್ಥೆಯ ಘಟಕದಲ್ಲಿ ಕನ್ನಡ ಕ್ರಿಯಾ ಸಮಿತಿ ಆಶ್ರಯದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಇಂಧನ ತುಂಬುವ ಯಂತ್ರ ಉದ್ಘಾಟಿಸಿದ ವಾ.ಕ.ರ.ಸಾ. ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿ, ಸರ್ಕಾರಿ ಆದೇಶದಿಂದ ಕನ್ನಡ ಉಳಿಯಲು ಸಾಧ್ಯವಿಲ್ಲ. ಜನಸಾಮಾನ್ಯರು ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕೆಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂರ್ದಗಿ, ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್,

    ಎಸ್​ಎಸ್​ಎಲ್​ಸಿಯಲ್ಲಿ ಸಾಧನೆ ಮಾಡಿದ ಪೂರ್ವಿ ಕೊಂಡದಕುಳಿ, ತೇಜಸ್ ಭಟ್ಟ, ಅಜಯ್ ಹೆಗಡೆ, ಸ್ನೇಹಾ ಬೋಳಗುಡ್ಡೆ ಅವರನ್ನು ಗೌರವಿಸಲಾಯಿತು.

    ಅಪಘಾತ ರಹಿತ ಸೇವೆಗಾಗಿ ಚಾಲಕರಾದ ಜಿ.ಕೆ. ನಾರಾಯಣರಾವ್, ಎಸ್.ಬಿ. ಮಡಿವಾಳ, ಆರ್.ಎಂ. ಶೇಖ್, ಆರ್.ಜಿ. ರಾಠೋಡ, ಜೆ.ಟಿ. ನರೋನಾ. ಬಿ.ಎನ್. ಭಂಡಿವಡ್ಡರ್, ಐ.ಬಿ. ಆರಿದ್ರಮಠ, ಜಿ.ಕೆ.ಭಾಸ್ಕರಪ್ಪ, ಎಂ.ಎ. ಶೇಖ್, ಬಿ.ಎಫ್. ಫರ್ನಾಂಸ್, ವಿ.ಎಸ್. ಅಕ್ಕಿ, ಬಿ.ಎಫ್. ಮಿರ್ಜಿ ಅವರಿಗೆ ಬೆಳ್ಳಿ ಪದಕ ವಿತರಿಸಿ ಗೌರವಿಸಲಾಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಡಿ. ನಾಯ್ಕ, ವಿಭಾಗೀಯ ಸಂಚಾರ ಅಧಿಕಾರಿ ಸುರೇಶ ನಾಯ್ಕ, ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ, ಸುವರ್ಣಾ ಹೆಗಡೆ, ಪ್ರಕಾಶ ನಾಯ್ಕ, ವಿನಾಯಕ ಭಂಡಾರಿ, ಎಂ.ಎನ್. ಭಾಗ್ವತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts