More

    ಓದುವ ಸಂಸ್ಕೃತಿ ಹೆಚ್ಚಿಸಲು ಪುಸ್ತಕ ದಾನ

    ಶಿರಸಿ: ಪುಸ್ತಕ ದಾನದ ಮೂಲಕ ವಿವಿಧ ಲೇಖಕರ ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಹಂಚಿ ಓದುವ ಸಂಸ್ಕೃತಿಗೆ ಇಂಬು ನೀಡಲಾಗುತ್ತಿದೆ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್​ನ ಕೇಂದ್ರ ಸಮಿತಿಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.

    ಹುಬ್ಬಳ್ಳಿಯ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್​ನಿಂದ ಶಿರಸಿಯ ರುದ್ರದೇವರ ಮಠದಲ್ಲಿ ಶನಿವಾರ ಆಯೋಜಿಸಿದ್ದ ಪುಸ್ತಕ ದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅಧಿಕಮಾಸದ ಅಂಗವಾಗಿ ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿನ ಸಾಹಿತಿಗಳನ್ನು, ಸಾರ್ವಜನಿಕರನ್ನು ಆಹ್ವಾನಿಸಿ ಪುಸ್ತಕ ನೀಡುವ ಮೂಲಕ ಪುಸ್ತಕ ದಾನ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಲೇಖಕರ ಒಂದು ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳನ್ನು ಹಂಚಿದ್ದು, ಓದುವ ಸಂಸ್ಕೃತಿಗೆ ಇಂಬು ನೀಡಲಾಗಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಪುಣ್ಯಪ್ರದ ಅಧಿಕ ಮಾಸದಲ್ಲಿ ಪುಸ್ತಕ ದಾನ ಮಾಡುವ ಮೂಲಕ ಅಳಿಯದ, ಕೊಳೆಯದ, ಕರಗದ, ನಿತ್ಯ ನೂತನವಾಗಿರುವ ಹಂಚಿದಂತೆ ವೃದ್ಧಿಸುವ ಜ್ಞಾನವನ್ನು ದಾನ ಮಾಡಿ ಈ ಚುಟುಕು ಸಾಹಿತ್ಯ ಪರಿಷತ್ತು ಜ್ಞಾನ ಎಂಬ ಅಮೃತ ಹಂಚುತ್ತಿದೆ ಎಂದು ಪ್ರಶಂಸಿಸಿದರು.

    ಲೇಖಕ ಗಣಪತಿ ಭಟ್ಟ ವರ್ಗಾಸರ ಸ್ವಾಗತಿಸಿದರು. ಶ್ರೀಧರ ಭಾಗವತ ಹಣಗಾರು, ಜಿ.ಪಿ. ಹೆಗಡೆ ಕಂಚಿಕೈ ಯಕ್ಷಗಾನ ಶೈಲಿಯಲ್ಲಿ ಗಣಪತಿ ಪೂಜೆ ಮಾಡಿ, ಕೊನೆಯಲ್ಲಿ ಮಂಗಳ ಹಾಡಿ ಪುಸ್ತಕ ದಾನ ಪಡೆದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿಗಳಿಗೆ, ಸಾರ್ವಜನಿಕರಿಗೆ ಪುಸ್ತಕದಾನ ನೀಡಲಾಯಿತು. ರಾಜು ಶೇಟ್ ಶಿರಸಿ, ಡಿ.ಎಂ. ಭಟ್ಟ ಕುಳವೆ, ಅನಿತಾ ಪರ್ವತೀಕರ್ ಮುಂತಾದ ಸಾಹಿತಿಗಳು ಪುಸ್ತಕದಾನ ಸ್ವೀಕರಿಸಿದವರ ಪರವಾಗಿ ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮ ಎಂದು ಬಣ್ಣಿಸಿದರು.

    ಜಿಲ್ಲಾ ಚುಟುಕು ಪರಿಷತ್ತಿನ ಉಪಾಧ್ಯಕ್ಷ ಪೊ›. ಡಾ.ಜಿ.ಎ. ಹೆಗಡೆ ಸೋಂದಾ ಇತರರಿದ್ದರು.

    ————

    ಪೋಟೋ17ಶಿರಸಿ5

    ಶಿರಸಿ, ಡಿಪೂಬೈಲ್ ಮಜಿರೆ, ಸರ್ಕಾರಿ ವೆಬ್​ಸೈಟ್, ಹೆಸರೇ ಮಾಯ

    ಸರ್ಕಾರಿ ವೆಬ್​ಸೈಟ್​ನಲ್ಲಿ ಡಿಪೂಬೈಲ್ ಹೆಸರೇ ಮಾಯ

    ಶಿರಸಿ: ಸರ್ಕಾರಿ ವೆಬ್​ಸೈಟ್​ನಲ್ಲಿ ಮಜಿರೆಯೊಂದರ ಹೆಸರೇ ಮಾಯವಾದ ಕಾರಣ ಅಲ್ಲಿನ ನಿವಾಸಿಗಳು ಅಗತ್ಯ ದಾಖಲೆಗಳ ಜತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಪರದಾಡುವ ಸ್ಥಿತಿ ನಿರ್ವಣವಾಗಿದೆ.

    ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಶಾಲೆ, ಅಂಗನವಾಡಿ, ಹತ್ತಾರು ಅಂಗಡಿಗಳನ್ನು ಹೊಂದಿರುವ ಡಿಪೂಬೈಲ್ ಮಜಿರೆ ಈಗ ಸರ್ಕಾರಿ ಅಧಿಕೃತ ವೆಬ್​ಸೈಟ್​ನಲ್ಲಿ ಮಾಯವಾಗಿದೆ. ಒಂದು ವರ್ಷದಿಂದ ಈ ಸಮಸ್ಯೆಯಿದ್ದು, ನೂರಾರು ಜನರು ತಮ್ಮ ನೆಲೆಯನ್ನು ದಾಖಲಿಸಲಾಗದೆ ಹೈರಾಣಾಗಿದ್ದಾರೆ.

    ಮಜಿರೆಯೇ ಮಾಯ: ಸುಮಾರು 35 ಕುಟುಂಬ ಹಾಗೂ 175 ಮತಗಳನ್ನು ಹೊಂದಿರುವ ಈ ಮಜಿರೆ ವರ್ಷದ ಹಿಂದೆ ಸರ್ಕಾರಿ ದಾಖಲೆಯಲ್ಲಿತ್ತು. ಆದರೆ, ಏಕಾಏಕಿ ವೆಬ್​ಸೈಟ್​ನಲ್ಲಿ ಮಜಿರೆಯ ಹೆಸರು ನಮೂದಿಸಿದಲ್ಲಿ ಯಾವುದೇ ಫಲಿತಾಂಶ ತೋರಿಸುತ್ತಿಲ್ಲ. ಸಮೀಪದ ಅಮ್ಮಿನಳ್ಳಿ ನೆಮ್ಮದಿ ಕೇಂದ್ರಕ್ಕೆ ತೆರಳಿ ವಾಸ್ತವ್ಯ ಪ್ರಮಾಣಪತ್ರಕ್ಕೆ ಅರ್ಜಿ ನೀಡಿದಾಗ ಡಿಪೂಬೈಲ್ ಮಜರೆ ಇಲ್ಲದಿರುವುದು ಸ್ಥಳೀಯರಿಗೆ ತಿಳಿದಿದೆ. ಇದರಿಂದ ಮಜಿರೆಯ ನಿವಾಸಿಗಳು ಕಂಗಾಲಾಗಿದ್ದಾರೆ. ಜಾತಿ ಆದಾಯ ಪ್ರಮಾಣಪತ್ರ, ಆದಾಯ, ವಂಶಾವಳಿ, ಆಧಾರ್ ಸೇರಿದಂತೆ ಆನ್​ಲೈನ್ ಮುಖಾಂತರ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಪಡೆಯುವ ಸುಮಾರು 7 ಪ್ರಮಾಣಪತ್ರಗಳಿಗೆ ಮಜಿರೆ ಹೆಸರೇ ನಮೂದಾಗದ ಕಾರಣ ತೊಂದರೆ ಎದುರಾಗಿದೆ. ಒಂದೊಮ್ಮೆ ಪ್ರಮಾಣಪತ್ರ ದೊರೆತರೂ ವಿಳಾಸ ಸರಿಯಾಗಿ ನಮೂದಾಗದೇ ಕೇವಲ ಗ್ರಾಮ ಮಾತ್ರ ಸಿಗಲಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ.

    ಯಾವ ಯೋಜನೆಗೂ ಅರ್ಹರಲ್ಲ: ದೇವನಹಳ್ಳಿ ಗ್ರಾಮದಲ್ಲಿ ಒಟ್ಟು 25 ಮಜರೆಗಳಿದ್ದು, ಅದರಲ್ಲಿ ಡಿಪೂಬೈಲ್ ಸಹ ಒಂದಾಗಿದೆ. ಆದರೆ, ಈಗ 24 ಮಜರೆಗಳು ಮಾತ್ರ ಉಲ್ಲೇಖವಾಗಿದ್ದು, ಸರ್ಕಾರಿ ವೆಬ್​ಸೈಟ್​ನಿಂದ ಡಿಪೂಬೈಲ್ ಮಾಯವಾಗಿದೆ. ಇದರಿಂದ ಈ ಮಜಿರೆಯ ನಿವಾಸಿಗಳು ಸರ್ಕಾರದ ಯಾವ ಯೋಜನೆಗಳಿಗೂ ಅರ್ಹರಲ್ಲ ಎನ್ನುವಂತಾಗಿದ್ದು, ಹೊಸದಾಗಿ ಯಾವ ದಾಖಲೆಗಳು ಬೇಕಿದ್ದರೂ ತೊಂದರೆಪಡುವಂತಾಗಿದೆ. ಅಲ್ಲದೆ, ಚುನಾವಣೆಗೆ ಸ್ಪರ್ಧಿಸಲು ವಾಸ್ತವ್ಯ ಪ್ರಮಾಣಪತ್ರದ ಅಗತ್ಯವಿದ್ದು, ಪ್ರತಿ ಹಂತದಲ್ಲಿಯೂ ಗ್ರಾಮಸ್ಥರಿಗೆ ಸಮಸ್ಯೆ ಎನ್ನುವಂತಾಗಿದೆ. ಅಧಿಕಾರಿಗಳು ಪಕ್ಕದ ಗ್ರಾಮದಲ್ಲಿನ ವಾಸ್ತವ್ಯ ಪ್ರಮಾಣಪತ್ರ ನೀಡುವುದಾಗಿ ಹೇಳುತ್ತಾರೆ. ಆದರೆ, ಆಯಾ ಗ್ರಾಮಸ್ಥರು ತಕರಾರು ಮಾಡಿದಲ್ಲಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

    ಸಮಸ್ಯೆ ಕುರಿತು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸಬೇಕಾಗಿದ್ದು, ಇಲ್ಲದೇ ಹೋದಲ್ಲಿ ಇದು ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಕಾರಣ ಡಿಪೂಬೈಲ್ ಮಜಿರೆ ವೆಬ್​ಸೈಟ್​ನಲ್ಲಿ ದಾಖಲಾಗುವಂತೆ ಮಾಡಿ, ಅಗತ್ಯ ದಾಖಲೆಗಳು ಶೀಘ್ರದಲ್ಲಿ ಸಿಗುವಂತೆ ಮಾಡಬೇಕು.

    | ನಾರಾಯಣ ಹೆಗಡೆ ಮಜಿರೆ ನಿವಾಸಿ

    ತಾಂತ್ರಿಕ ದೋಷದಿಂದ ಈ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸ್ಥಳೀಯರು ಈಗಾಗಲೇ ಮಾಹಿತಿ ನೀಡಿದ್ದಾರೆ. ಸಮಸ್ಯೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ಎಂ.ಆರ್. ಕುಲಕರ್ಣಿ- ತಹಸೀಲ್ದಾರ್, ಶಿರಸಿ

    =======

    ಕಾರವಾರ, 156 ಕರೊನಾ ಪಾಸಿಟಿವ್, 157 ಸಾವು, ಹೆಲ್ತ್ ಬುಲೆಟಿನ್

    ಜಿಲ್ಲೆಯಲ್ಲಿ 156 ಜನರಲ್ಲಿ ಕರೊನಾ ಪಾಸಿಟಿವ್

    ಕಾರವಾರ: ಜಿಲ್ಲೆಯ 156 ಜನರಲ್ಲಿ ಶನಿವಾರ ಕರೊನಾ ಕಾಣಿಸಿಕೊಂಡಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. 117 ಜನ ಗುಣವಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಕಾರವಾರದಲ್ಲಿ 5, ಅಂಕೋಲಾದಲ್ಲಿ 8, ಕುಮಟಾದಲ್ಲಿ 35, ಹೊನ್ನಾವರದಲ್ಲಿ 12, ಭಟ್ಕಳದಲ್ಲಿ 45, ಶಿರಸಿಯಲ್ಲಿ 6, ಯಲ್ಲಾಪುರ ಹಾಗೂ ಜೊಯಿಡಾದಲ್ಲಿ ತಲಾ 1, ಮುಂಡಗೋಡಿನಲ್ಲಿ 8, ಹಳಿಯಾಳ ಮತ್ತು ದಾಂಡೇಲಿ ಸೇರಿ 35 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 11970 ಕ್ಕೆ ಏರಿಕೆಯಾಗಿದೆ.

    ಕಾರವಾರದಲ್ಲಿ 18, ಅಂಕೋಲಾದಲ್ಲಿ 13, ಕುಮಟಾದಲ್ಲಿ 31, ಹೊನ್ನಾವರದಲ್ಲಿ 6, ಭಟ್ಕಳದಲ್ಲಿ 3, ಶಿರಸಿಯಲ್ಲಿ 25, ಸಿದ್ದಾಪುರದಲ್ಲಿ 6, ಮುಂಡಗೋಡಿನಲ್ಲಿ 12, ಹಳಿಯಾಳದಲ್ಲಿ 3 ಜನ ಕರೊನಾದಿಂದ ಗುಣವಾಗಿದ್ದಾರೆ. ಒಟ್ಟಾರೆ ಗುಣವಾದವರ ಸಂಖ್ಯೆ 10535ಕ್ಕೆ ಏರಿಕೆಯಾಗಿದೆ. 1278 ಸಕ್ರಿಯ ಪ್ರಕರಣಗಳಿವೆ. ಕಾರವಾರದಲ್ಲಿ 2, ಕುಮಟಾ ಹಾಗೂ ಜೊಯಿಡಾದಲ್ಲಿ ತಲಾ ಒಬ್ಬರು ಕರೊನಾದಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಕರೊನಾದಿಂದ 157 ಜನ ಸಾವನ್ನಪ್ಪಿದಂತಾಗಿದೆ.

    ———–

    ಫೋಟೋ: 17ಎಚ್​ಎನ್​ಆರ್1

    ಪಪಂ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಯಿಸಿ

    ಹೊನ್ನಾವರ, ಪಕ್ಷೇತರ ಸದಸ್ಯೆ, ಹೈಕೋರ್ಟ್​ಗೆ ಮೊರೆ, ಬಿಜೆಪಿ ಆಕಾಂಕ್ಷಿಗಳಲ್ಲೇ ಪೈಪೋಟಿ,

    ಹೊನ್ನಾವರ: ಹೊನ್ನಾವರ: ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿಯ ಆಕಾಂಕ್ಷಿಗಳಲ್ಲಿ ಪೈಪೋಟಿ ನಡೆದಿದೆ. ಈ ನಡುವೆ ಅಧ್ಯಕ್ಷ ಹುದ್ದೆಗೆ ಪ್ರಕಟವಾಗಿರುವ ಹಿಂದುಳಿದ ‘ಅ’ ವರ್ಗ ಮೀಸಲಾತಿಯನ್ನೇ ಬದಲಾಯಿಸಬೇಕು ಎಂದು ಒಬ್ಬ ಸದಸ್ಯೆ ಹೈಕೋರ್ಟ್ ಮೊರೆ ಹೋಗಿರುವುದು ಕುತೂಹಲ ಮೂಡಿಸಿದೆ.

    ಪಟ್ಟಣ ಪಂಚಾಯಿತಿಯ 20 ವಾರ್ಡ್​ಗಳಲ್ಲಿ 12 ಸ್ಥಾನ ಪಡೆಯುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮತ್ತು ಹಿಂದುಳಿದ ವರ್ಗದ ಸದಸ್ಯರ ನಡುವೆ ಆಗಿನಿಂದಲೇ ಪೈಪೋಟಿ ನಡೆದಿತ್ತು. ಆದರೆ, ವಾರದ ಹಿಂದಷ್ಟೆ ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಎಂದು ಮೀಸಲಾತಿ ಪ್ರಕಟವಾಗಿದೆ. ಇದು ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ, ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಹಿಂದುಳಿದ ವರ್ಗದ ಶಿವರಾಜ ಮೇಸ್ತ ಅವರ ಹೆಸರು ಮುಂಚೂಣಿಗೆ ಬಂದಿತ್ತು.

    ಪಪಂನ 12ನೇ ವಾರ್ಡ್​ನಿಂದ ಪಕ್ಷೇತರರಾಗಿ ಆಯ್ಕೆಯಾದ ಸದಸ್ಯೆ ತಾರಾ ಕುಮಾರಸ್ವಾಮಿ ಅವರು ಈಗ ಪ್ರಕಟವಾದ ಮೀಸಲಾತಿ ಬದಲಾಯಿಸಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ತರಬೇಕು ಎಂದು ಹೈಕೋರ್ಟ್​ಗೆ ಮೊರೆ ಹೋಗಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ ಎಂದು ಹಿಂದುಳಿದ ವರ್ಗದ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಮೀನುಗಾರ ಸಮುದಾಯದವರು ಅಧ್ಯಕ್ಷ ಗಾದಿಗೆ ಹೋಗಬಾರದೆಂದು ಈ ರೀತಿ ನಾಟಕ ಮಾಡಲು ಮುಂದಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಮೂಲಕ ಅರ್ಜಿ ಹಾಕಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂದೇಶಗಳು ಹರಿದಾಡುತ್ತಿದೆ. ಪಪಂನಲ್ಲಿ ದೀರ್ಘ ಕಾಲದ ಬಳಿಕ ಬಹುಮತ ಪಡೆದ ಬಿಜೆಪಿಯಲ್ಲಿ ಒಳಜಗಳ ಆರಂಭವಾಗಿದೆ. ಇದರಿಂದಾಗಿ ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭವಾಗುವುದೇ? ಎಂಬ ಪ್ರಶ್ನೆ ಮೂಡಿದೆ.

    ಪಕ್ಷೇತರ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಬಹುಮತ ಬಂದಿದೆ ಎಂದು ಬಿಜೆಪಿ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡುತ್ತಾರೆ. ಇದರಿಂದ ಬೇಸತ್ತು ನಾನು ಹೈಕೋರ್ಟ್​ಗೆ ಮೊರೆ ಹೋಗಿದ್ದೇನೆ.

    | ತಾರಾ ಕುಮಾರಸ್ವಾಮಿ, ಹೈಕೋರ್ಟ್ ಮೊರೆ ಹೋದ ಪಕ್ಷೇತರ ಸದಸ್ಯೆ

    ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮೀಸಲಾತಿ ಬಂದಿದೆ. ಪಕ್ಷೇತರ ಅಭ್ಯರ್ಥಿಯನ್ನು ಮುಂದೆ ಬಿಟ್ಟು ಸ್ವಹಿತಾಸಕ್ತಿಯುಳ್ಳವರು ಆಟವಾಡಲು ಮುಂದಾಗಿದ್ದಾರೆ. ಇದರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತಾಗುವುದು.

    | ಶಿವರಾಜ ಮೇಸ್ತ, ಅಧ್ಯಕ್ಷ ಹುದ್ದೆಯ ಆಕಾಂಕ್ಷಿ, ಬಿಜೆಪಿ ಸದಸ್ಯ

    ————————-

    ಫೋಟೋ 17 ಎಸ್ಡಿಪಿ 1

    ಸಿದ್ದಾಪುರ, ಪಪಂ ಸದಸ್ಯ ಕೆ.ಜಿ. ನಾಯ್ಕ, ನಾಡಿದರು. ಮಾರುತಿ ಟಿ. ನಾಯ್ಕ, ವಿನಯ ಹೊನ್ನೆಗುಂಡಿ, ಸುಧೀರ್ ನಾಯ್ಕ, ರವಿ.ನಾಯ್ಕ ಇತರರಿದ್ದರು.

    ಸತ್ಯಾಗ್ರಹ ಸ್ಮಾರಕ ಭವನಕ್ಕೆ ವಿರೋಧವಿಲ್ಲ

    ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಹೇಳಿಕೆ, ಸತ್ಯಾಗ್ರಹ ಸ್ಮಾರಕ ಭವನ, ವಿರೋಧವಿಲ್ಲ,

    ಸಿದ್ದಾಪುರ: ಪಟ್ಟಣದಲ್ಲಿ ಸತ್ಯಾಗ್ರಹ ಸ್ಮಾರಕ ಭವನ ಕಟ್ಟಲು ನಮ್ಮ ವಿರೋಧವಲ್ಲ. ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಹೇಳಿದರು.

    ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ಹಿಂದೆ ಪಪಂ ಕಬ್ಜಾದಲ್ಲಿದ್ದ ಸಮಾಜ ಮಂದಿರ ಸ್ಥಳದಲ್ಲಿ ಭವನದ ಶಂಕುಸ್ಥಾಪನೆ ನಡೆದಿತ್ತು. ಆಗ ಈ ಕಾಮಗಾರಿಗೆ ಅನುದಾನ ಬಾರದೇ ಶಂಕುಸ್ಥಾಪನೆ ಮಾಡುತ್ತಿರುವ ಕುರಿತು ಪ್ರಶ್ನೆ ಮಾಡಿದ್ದೇನೆ. ಅಲ್ಲದೆ, ಶಿರಸಿ ಮತ್ತು ಚಂದ್ರಗುತ್ತಿ ಮಾರ್ಗ ಹೆದ್ದಾರಿಯಾಗಿದ್ದು, ಕಾಯ್ದೆ ಪ್ರಕಾರ ಜಾಗ ಬಿಟ್ಟರೆ ಸ್ಥಳವೇ ಉಳಿಯುವುದಿಲ್ಲ. ಈಗ ಸಮಾಜ ಮಂದಿರ, ಅಲ್ಲಿನ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಗಳೆಲ್ಲ ಪಪಂನಿಂದ ಆಗಿವೆ. ಅಲ್ಲಿ ಸಾರ್ವಜನಿಕ ಸಭೆ, ಸಮಾರಂಭ, ಅನ್ಯ ಧರ್ವಿುಯರ ವಿವಾಹ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಈಗಿನ ಸಂದರ್ಭಕ್ಕೆ ಅನುಗುಣವಾಗಿ ಸಮಾಜ ಮಂದಿರ ಮಾಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ವ್ಯವಸ್ಥಿತವಾದ ಸ್ವಾತಂತ್ರ್ಯ ಭವನ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದರು.

    ನಮಗೂ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಬಗ್ಗೆ ಹೆಮ್ಮೆಯಿದೆ. ವ್ಯವಸ್ಥಿತವಾದ ಭವನ ನಿರ್ವಣಕ್ಕೆ ಅಗತ್ಯವಾದ ಸ್ಥಳ ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದ ಎಸಿಎಫ್ ಕ್ವಾರ್ಟರ್ಸ್ ಬಳಿಯಿದೆ. 2 ಕೋಟಿ ರೂ. ಅನುದಾನ ಆದೇಶದಲ್ಲಿ ಇಂಥ ಜಾಗದಲ್ಲೇ ಭವನ ಆಗಬೇಕು ಎಂದು ಉಲ್ಲೇಖವಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಲಿ. ಭವನ ನಿರ್ವಣಕ್ಕೆ ಈಗ ಹಣ ಬಿಡುಗಡೆ ಮಾಡಿಸಿದವರು 4 ವರ್ಷದ ಹಿಂದೆಯೇ ಹಣ ತರಬಹುದಿತ್ತು. ಈಗ ಈ ಪ್ರಕ್ರಿಯೆಗೆ ಮುಂದಾಗಿರುವುದನ್ನು ನೋಡಿದರೆ ನಮ್ಮ ಮೇಲೆ ಗೂಬೆ ಕೂರಿಸಿ, ವಿಲನ್ ಮಾಡಲು ಹೊರಟಂತೆ ಕಂಡುಬರುತ್ತಿದೆ ಎಂದರು.

    ಪಪಂ ಸದಸ್ಯರಾದ ಮಾರುತಿ ನಾಯ್ಕ ಹೊಸೂರು, ನಂದನ ಬೋರ್ಕರ್, ಸುಧೀರ ಕೊಂಡ್ಲಿ, ವಿನಯ ಹೊನ್ನೆಗುಂಡಿ, ರವಿ ನಾಯ್ಕ ಜಾತಿಕಟ್ಟೆ, ವಿಜಯೇಂದ್ರ ಗೌಡರ್, ವೆಂಕೋಬ ಎನ್.ಜಿ., ಯಶೋಧಾ ಮಡಿವಾಳ, ಮುಬಿನಾ ಎಂ. ಗುರಕಾರ, ಮಂಜುಳಾ ನಾಯ್ಕ, ಕವಿತಾ ಹೆಗಡೆ, ಚಂದ್ರಕಲಾ ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts