More

    ಓಂ ಹಾಸ್ಪಿಟಲ್​ನವರ ಕಾರ್ಯ ಶ್ಲಾಘನೀಯ

    ರಾಣೆಬೆನ್ನೂರ: ನಗರದ ಓಂ ಹಾಸ್ಪಿಟಲ್​ನಲ್ಲಿ ನೂತನ ಕೋವಿಡ್-19 ಆಸ್ಪತ್ರೆಯನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಗುರುವಾರ ಉದ್ಘಾಟಿಸಿದರು.

    ‘ಓಂ ಹಾಸ್ಪಿಟಲ್​ನವರು ಕೋವಿಡ್-19 ರೋಗಿಗಳಿಗಾಗಿ 50 ಬೆಡ್​ಗಳ ಆಸ್ಪತ್ರೆ ಸಿದ್ಧಪಡಿಸಿರುವುದು ಶ್ಲಾಘನೀಯ. ಜನತೆ ಸ್ವಲ್ಪ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೂ ಕೂಡಲೆ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಲಕ್ಷಣವಿಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಂಡರೆ ತೊಂದರೆಯಿಲ್ಲ. ಆದರೆ, ಕೋವಿಡ್ ಟೆಸ್ಟ್​ಗೆ ಯಾರೂ ಹಿಂಜರಿಯಬಾರದು. ಜನತೆ ಸಹಕಾರ ನೀಡದಿದ್ದರೆ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯಲ್ಲಿ ಕರೊನಾ ರೋಗಿಗಳ ಸಂಖ್ಯೆ 8 ಸಾವಿರ ದಾಟಿದರೂ ಅಚ್ಚರಿ ಪಡಬೇಕಿಲ್ಲ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

    ಓಂ ಸಮೂಹ ಸಂಸ್ಥೆ ಕಾರ್ಯದರ್ಶಿ ಮನೋಜ ಸಾವಕಾರ ಮಾತನಾಡಿ, ನನ್ನ ತಂದೆಗೆ ಕರೊನಾ ಪಾಸಿಟಿವ್ ಬಂದಾಗ ಚಿಕಿತ್ಸೆಗಾಗಿ ನಾನೇ ತೊಂದರೆ ಅನುಭವಿಸಿದ್ದೇನೆ. ಇತರರಿಗೆ ಅನುಕೂಲ ಒದಗಿಸಲು ಕೋವಿಡ್-19 ಆಸ್ಪತ್ರೆ ಆರಂಭಿಸಿದ್ದೇನೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಜಿಪಂ ಸಿಇಒ ರಮೇಶ ದೇಸಾಯಿ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ, ತಹಸೀಲ್ದಾರ್ ಬಸನಗೌಡ ಕೋಟೂರು, ತಾಪಂ ಇಒ ಎಸ್.ಎಂ. ಕಾಂಬಳೆ, ಓಂ ಸಮೂಹ ಸಂಸ್ಥೆ ಅಧ್ಯಕ್ಷೆ ರುಕ್ಮಿಣಿ ಸಾವಕಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts