More

    ಒಳಾಂಗಣ ಕ್ರಿಕೆಟ್ ಸ್ಟೇಡಿಯಂ ಅವೈಜ್ಞಾನಿಕ; ಸ್ಮಾರ್ಟ್‌ಸಿಟಿ ಕಾಮಗಾರಿ ವಿರುದ್ಧ ಪ್ರತಿಭಟನೆ

    ಶಿವಮೊಗ್ಗ: ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ವಿರುದ್ಧ, ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರತಿಭಟನೆ ಮುಂದುವರಿದಿದ್ದು, ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಒಕ್ಕೂಟದ ಪ್ರಮುಖರು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ನಿರ್ಮಿಸಿರುವ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣದ ಅವ್ಯವಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿದರು.
    ತಾಂತ್ರಿಕ ಮಾನ್ಯತೆಯಿಲ್ಲದೇ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಕಳಪೆಯಾಗಿದೆ. 110 ಅಡಿ ಉದ್ದದ ಕ್ರೀಡಾಂಗಣದಲ್ಲಿ 66 ಅಡಿ ಕ್ರೀಸ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ವೇಗದ ಬೌಲಿಂಗ್ ಸಾಧ್ಯವೇ ಇಲ್ಲ. ಕನಿಷ್ಠ 176 ಅಡಿ ಉದ್ದವಿದ್ದರೆ ಅನುಕೂಲವಾಗುತ್ತಿತ್ತು. ಹೀಗಾಗಿ ಇದು ತಾಂತ್ರಿಕವಾಗಿ ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
    ಬೆಳಕಿನ ವ್ಯವಸ್ಥೆ ಸರಿಯಿಲ್ಲ, ವೇಗದ ಬಾಲ್ ಬ್ಯಾಟ್ಸ್‌ಮನ್‌ಗೆ ಕಾಣುವುದೇ ಕಷ್ಟ. ಅತ್ಯುತ್ತಮವಾದ ಮ್ಯಾಟ್ ಅಳವಡಿಕೆ ಮಾಡಿಲ್ಲ. ಜನರೇಟರ್ ವ್ಯವಸ್ಥೆಯೂ ಇಲ್ಲ ಎಂದು ಕಿಡಿಕಾರಿದರು. 50 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸುವ ವೇಳೆ ತಜ್ಞರ ವರದಿಯನ್ನೂ ಪಡೆದಿಲ್ಲ ಎಂದು ದೂರಿದರು.
    ಈ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅವೈಜ್ಞಾನಿಕ ಕಾಮಗಾರಿಗೆ ಕಾರಣರಾದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಆಗಿರುವ ಲೋಪ ಸರಿಪಡಿಸಲು ಮತ್ತೆ ಕಾಮಗಾರಿ ಕೈಗೊಂಡರೆ ಅದರ ನಷ್ಟವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಭರಿಸಬೇಕೆಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts