More

    ಒಲೈಕೆ ರಾಜಕಾರಣ ಮಾಡುವುದು ಬಿಜೆಪಿ ಅಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಮತ

    ಮಾಲೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಿಟ್ಟು ರಾಜಕಾರಣ ಮಾಡಲಿಲ್ಲ, ಅನುದಾನ ನೀಡಲು ಜಾತಿಮತ ನೋಡಲಿಲ್ಲ, ಬಿಜೆಪಿಗೆ ಜಾತಿ ಇಲ್ಲ. ನೀತಿಯ ಆಧಾರದ ಮೇಲೆ ನಡೆಯುವ ಪಕ್ಷವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.


    ಪಟ್ಟಣದ ಮಾಲೂರು ಹೊಸೂರು ರಸ್ತೆಯ ಪಿಆರ್​ಎ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡ ಅವರ ಬೆಂಬಲಿಗ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕಾರಣಕ್ಕಾಗಿ ನಾವು ಒಲೈಕೆ ಮಾಡುವುದಿಲ್ಲ. ದೇಶ ಮೊದಲು ಎನ್ನುವ ತತ್ವ, ಹಿಂದುತ್ವ, ಪ್ರಜಾಪ್ರಭುತ್ವವನ್ನು ಅನುಸರಿಸಿಕೊಂಡು ಹೋಗುವುದೇ ನಮ್ಮ ನೀತಿ ಎಂದರು.


    ಬಿಜೆಪಿ ಯಾರಿಗೂ ದುಶ್ಮನ್​ ಅಲ್ಲ. ಬಿಜೆಪಿ ಸರ್ಕಾರದಿಂದ ಪಡಿತರ, ಗ್ಯಾಸ್​ ಸಿಲಿಂಡರ್​ ಹಾಗೂ ಇತ್ಯಾದಿ ಯೋಜನೆಗಳನ್ನು ಪಡೆಯಲು ಯಾವುದೇ ಜಾತಿ ಇರುವುದಿಲ್ಲ. ಆದರೆ ಚುನಾವಣೆ ಬಂದಾಗ ಮಾತ್ರ ಬಿಜೆಪಿ ದುಶ್ಮನ್​ ಎಂದು ಎಂದವರಿಗೆ ಬಿಜೆಪಿ ದುಶ್ಮನ್​ ಹಾಗಿಯೇ ಇರುತ್ತದೆ ಎಂದರು.


    ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಅವರ ಕನಸು ನನಸಾಗಲ್ಲ. ಕಾಂಗ್ರೆಸ್​ ಮುಖಂಡರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದರು.


    ಸಚಿವ ಆರ್​.ಅಶೋಕ್​ ಮಾತನಾಡಿ, ಮಾಜಿ ಶಾಸಕ ಕೆ.ಎಸ್​.ಮಂಜುನಾಥಗೌಡ ಬಿಜೆಪಿ ಸೇರಲು ಕಾರಣಾಂತರಗಳಿಂದ ತಡವಾಯಿತು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಕೆ.ಎಸ್​.ಮಂಜುನಾಥಗೌಡ ಕಾಂಗ್ರೆಸ್​ ಅಭ್ಯರ್ಥಿ ಕೆ.ಎಚ್​.ಮುನಿಯಪ್ಪ ಅವರನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಚಾರ ಮಾಡಿ ಶ್ರಮಪಟ್ಟಿದ್ದಾರೆ. ಅವರು ಅಂದೇ ಮಾನಸಿಕವಾಗಿ ಬಿಜೆಪಿ ಸೇರಿದ್ದರು. 2 ತಿಂಗಳ ಹಿಂದೆ ಸಾಂಕೇತಿಕವಾಗಿ ಎಲ್ಲ ನಾಯಕರ ಒಮ್ಮತ ಅಭಿಪ್ರಾಯದಿಂದ ಬಿಜೆಪಿ ಸೇರಿಕೊಂಡಿದ್ದಾರೆ. ಕೆ.ಎಸ್​.ಮಂಜುನಾಥ್​ಗೌಡ ಅವರು ತಾಲೂಕಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಿ ಬೂತ್​ ಮಟ್ಟದಲ್ಲಿ ಪಕ್ಷ ಸಂಟಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಬೇಕು ಎಂದು ತಿಳಿಸಿದರು.


    ಜಿಲ್ಲೆಯಲ್ಲಿ 6 ಸ್ಥಾನಗಳು ಗೆದ್ದುಕೊಂಡರೆ 2 ಮಂತ್ರಿ ಸ್ಥಾನಗಳು ಸಿಗುತ್ತದೆ. ಪಕ್ಷವನ್ನು ಸಂಟಿಸಿ ಜನರ ಆಶೀರ್ವಾದ ಪಡೆಯಬೇಕು ಎಂದರು.

    ಸಚಿವ ಡಾ.ಸುಧಾಕರ್​ ಮಾತನಾಡಿ, ವಿಶ್ವವೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ನೋಡುತ್ತಿದೆ. ಮೋದಿ ಅವರು ಭಾರತದಲ್ಲಿರುವ 135 ಕೋಟಿ ಜನತೆಗೆ ಲಸಿಕೆ ನೀಡುವ ಕೆಲಸವನ್ನು ಹೊರದೇಶದ ಜನರಿಗೂ ಮಾಡಿದ್ದಾರೆ. 2023ರಲ್ಲಿ ರಾಜ್ಯದಲ್ಲಿ, 2024ಕ್ಕೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವುದು ಖಚಿತ. ಮುಂದಿನ 40&50ವರ್ಷಗಳು ಭಾರತದಲ್ಲಿ ಬಿಜೆಪಿ ಆಡಳಿತ ನಡೆಸುವುದರೊಂದಿಗೆ ಜನತೆ ನೆಮ್ಮದಿಯಿಂದ ಜೀವನ ಮಾಡುತ್ತಾರೆ ಎಂದು ತಿಳಿಸಿದರು.

    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ತಾಲೂಕಿನ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕ ಕೆ.ವೈ.ನಂಜೇಗೌಡ ಅವರು ಬಿಜೆಪಿ ಸರ್ಕಾರದಿಂದ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ತಾನು ಮಾಡಿರುವುದಾಗಿ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡ ಅವರ ಅವಧಿಯಲ್ಲಿ ತಾಲೂಕಿನಲ್ಲಿ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಜನರಿಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ಕೆ.ಎಸ್​.ಮಂಜುನಾಥಗೌಡ ಶಾಸಕರಾಗುವುದು ಶತಸಿದ್ಧ ಎಂದು ಹೇಳಿದರು.


    ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್​, ಉಪಾಧ್ಯಕ್ಷ ರಾಮಮೂರ್ತಿ, ತಾಲೂಕು ಅಧ್ಯಕ್ಷ ಪುರನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್​, ಸಂಪಂಗಿ, ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ಜಿಪಂ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ವಕೀಲರ ಸಂದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಮುಖಂಡರಾದ ಬೆಳ್ಳಾವಿ ಸೋಮಣ್ಣ, ಎಂ.ಪಿ.ಚಂದ್ರಶೇಖರ್​, ಅಜ್ಗರ್​, ಅಪ್ಪಿ ಹಾಜರಿದ್ದರು.

    ನಾನು ಶಾಸಕನಾಗಿದ್ದಾಗ 5 ವರ್ಷದ ಅವಧಿಯಲ್ಲಿ 1 ರೂಪಾಯಿಗೂ ಆಸೆಪಡದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು, ಬಿಜೆಪಿ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷ ಸೇರಿದ್ದು, ಇಂದು ನನ್ನ ರಾಜಕೀಯ ಭವಿಷ್ಯಕ್ಕಾಗಿ ತಾಲೂಕಿನಲ್ಲಿ ಶ್ರಮಿಸಿದ ಬೆಂಬಲಿಗರು, ಕಾರ್ಯಕರ್ತರು, ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿದ್ದೇನೆ. ಮುಂದಿನ 5 ವರ್ಷದಲ್ಲಿ ತಾಲೂಕಿನ ಪ್ರತಿ ಕುಟುಂಬಕ್ಕೂ ಉಚಿತ ನಿವೇಶನ ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ಎಸ್​.ಮಂಜುನಾಥಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts