More

    ಒಗ್ಗಟ್ಟಿನ ಹೋರಾಟವೇ ಅಸ್ತ್ರ

    ತುಮಕೂರು: ಶಿಕ್ಷಣದಲ್ಲಿ ಬಲಿಜ ಸಮಾಜಕ್ಕೆ ದೊರೆತಿರುವ 2ಎ ಮೀಸಲಾತಿ ಉದ್ಯೋಗ ಮತ್ತು ರಾಜಕೀಯಕ್ಕೂ ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಬಲಿಜ ಸಮುದಾಯ ಒಗ್ಗೂಡಿ ಹೋರಾಟ ನಡೆಸಬೇಕಿದೆ ಎಂದು ಮಾಜಿ ಸಚಿವ ಎಂ.ಆರ್.ಸೀತಾರಾಮಯ್ಯ ಹೇಳಿದರು.

    ನಗರದ ಮಂಜುನಾಥ ಕಲ್ಯಾಣಮಂಟಪದಲ್ಲಿ ಜಿಲ್ಲಾ ಬಲಿಜ ಸಂಘ, ಶ್ರೀಯೋಗಿನಾರಾಯಣ ಸೇವಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀಯೋಗಿನಾರೇಯಣ ಯತೀಂದ್ರರ 188ನೇ ಜೀವ ಸಮಾಧಿ ಮಹೋತ್ಸವ ಹಾಗೂ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

    2002ರಲ್ಲಿ 2ಎನಲ್ಲಿದ್ದ ಬಲಿಜ ಸಮುದಾಯವನ್ನು 3ಎಗೆ ಸೇರಿಸಲಾಯಿತು. ಆದರೆ, ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ಹೋರಾಟದ ಫಲವಾಗಿ ಶಿಕ್ಷಣದಲ್ಲಿ ಸಮುದಾಯವನ್ನು 2ಎಗೆ ಸೇರಿಸಲಾಗಿದೆ. ಇದನ್ನು ಉದ್ಯೋಗ, ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಬೇಕೆಂದರೆ ಒಗ್ಗಟ್ಟಿನ ಹೋರಾಟವೊಂದೇ ಆಸ್ತ್ರ ಎಂದರು.

    40 ವರ್ಷಗಳ ಹಿಂದೆ ನಮ್ಮ ತಂದೆ ಎಂ.ಎಸ್.ರಾಮಯ್ಯ ಅವರು ತುಮಕೂರು ನಗರದಲ್ಲಿ ವಿದ್ಯಾರ್ಥಿ ನಿಲಯ ಉದ್ಘಾಟಿಸಿದ್ದರು. ಇಂದು ನಾನು ಮಹಿಳಾ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದ್ದೇನೆ. ಇದರಿಂದ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ನಮ್ಮ ಆಶಯ ಈಡೇರಿದೆ ಎಂದರು. ಯುವಜನತೆ ರಾಜಕಾರಣಕ್ಕೆ ಬರಬೇಕು, ನಮ್ಮ ಸಮುದಾಯದ ಯಾವುದೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದರೆ, ಆತನ ನೆರವಿಗೆ ಸಮುದಾಯ ಧಾವಿಸಬೇಕು. ಪರಸ್ವರ ಕಾಲೆಳೆಯುವುದನ್ನು ಬಿಡಬೇಕು. ಹುಟ್ಟು, ಸಾವಿನ ನಡುವೆ ಸಾರ್ಥಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋದರೆ, ಅದು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಅಂಜನಪ್ಪ ವಹಿಸಿದ್ದರು. ಹಾಸ್ಟಲ್ ನಿರ್ಮಾಣಕ್ಕೆ ಸಹಕರಿಸಿದ ಸಮುದಾಯದ ಹಿರಿಯರನ್ನು ಗೌರವಿಸಲಾಯಿತು. 200ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸ್ಪೂರ್ತಿ ಚಿದಾನಂದ್, ಜಿಲ್ಲಾ ಬಲಿಜ ಸಂಘದ ಮಾಜಿ ಕಾರ್ಯದರ್ಶಿ ಬಿ.ವೆಂಕಟೇಶ್, ಕಾರ್ಯದರ್ಶಿ ಟಿ.ಆರ್.ಎಚ್. ಪ್ರಕಾಶ್, ಜಂಟಿ ಕಾರ್ಯದರ್ಶಿ ಜಯಣ್ಣ ಮತ್ತಿತರರು ಇದ್ದರು.

    ಸಮುದಾಯದ ಅಭಿವೃದ್ಧಿ: ಸಂಘದ ದೂರದೃಷ್ಟಿಯ ಫಲವಾಗಿ ಮಹಿಳಾ ಹಾಸ್ಟೆಲ್ ತಲೆ ಎತ್ತಿದೆ. ಸಮಾಜದ ಅವಶ್ಯಕತೆ ತಿಳಿದು, ಅದನ್ನು ಪೂರೈಸುವ ನಿಟ್ಟಿನಲ್ಲಿ ಸಮುದಾಯಗಳು ಮುಂದಾಗುವ ನಿಟ್ಟಿನಲ್ಲಿ ಹೆಚ್ಚಿನ ಅಸಕ್ತಿ ವಹಿಸಬೇಕಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ಒಂದು ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ, ಅದರಿಂದ ಸಾಮಾಜಿಕ, ಅರ್ಥಿಕ, ರಾಜಕೀಯ ಅಭಿವೃದ್ಧಿ ನಿರೀಕ್ಷಿಸಬಹುದು. ಈ ಕೆಲಸವನ್ನು ಮಠ, ಮಾನ್ಯಗಳು ಮಾಡಿವೆ. ಶೈಕ್ಷಣಿಕವಾಗಿ ಎಂ.ಎಸ್. ರಾಮಯ್ಯ, ಸಿದ್ದಗಂಗಾ, ಸಿದ್ದಾರ್ಥ ಸಂಸ್ಥೆಗಳು ಹಾಕಿಕೊಟ್ಟ ತಳಹದಿಯಾಕಿವೆ ಎಂದರು.

    ಬಲಿಜ ಸಮುದಾಯದಲ್ಲಿ ಹುಟ್ಟಿರುವುದು ನನ್ನ ಪುಣ್ಯ. ಶುಭ ಸಮಾರಂಭಗಳಿಗೆ ಮಂಗಳ ದ್ರವ್ಯಗಳಾದ ಅರಿಶಿನ, ಕುಂಕುಮ, ಬಳೆ ಒದಗಿಸುವ ವೃತ್ತಿ ಮಾಡಿಕೊಂಡು ಬಂದಿರುವ ಈ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ, ಔದ್ಯೋಗಿಕವಾಗಿ ಮುಂದೆ ಬರಬೇಕಾಗಿದೆ. ನನ್ನ ರಾಜಕೀಯ ತಿಳಿವಳಿಕೆ ಪ್ರಕಾರ ಸ್ವಾಭಿಮಾನಿ ರಾಜಕಾರಣ ಸಾಧ್ಯವಿಲ್ಲ, ಸ್ವಾವಲಂಬಿ ರಾಜಕಾರಣ ಸಾಧ್ಯವಿದೆ. ಸಮುದಾಯದ ರಾಜಕೀಯ ಬೆಳವಣಿಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ. | ತಾರಾ ಚಿತ್ರ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts