More

    ಒಕ್ಕಲಿಗರ ಸಂಘದ ಸಮುದಾಯ ಭವನಕ್ಕೆ ಭೂಮಿ: 3.10 ಜಾಗದ ಹಕ್ಕುಪತ್ರ ಹಸ್ತಾಂತರಿಸಿದ ಶಾಸಕ ಶರತ್ ಬಚ್ಚೇಗೌಡ

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ಹತ್ತಾರು ವರ್ಷಗಳಿಂದ ತಾಲೂಕಿನ ಒಕ್ಕಲಿಗ ಸಂಘಕ್ಕೆ ಸಮುದಾಯ ಭವನ ನಿರ್ಮಾಣದ ಬೇಡಿಕೆ ಈಡೇರಿಸಲು ನಾನು ಸ್ವಂತ ಹಣದಲ್ಲಿ ಜಮೀನು ನೀಡುವುದಾಗಿ ಕೆಲ ತಿಂಗಳ ಹಿಂದೆ ಮಾತು ಕೊಟ್ಟಿದ್ದೆ. ಈಗ 3.10 ಎಕರೆ ಜಾಗವನ್ನು ಸ್ವಂತ ಹಣದಿಂದ ಖರೀದಿಸಿ, ಒಕ್ಕಲಿಗರ ಸಂಘಕ್ಕೆ ನೋಂದಣಿ ಮಾಡಿಕೊಟ್ಟಿದ್ದೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
    ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಅರಳೆಮಾಕನಳ್ಳಿಯ ಸರ್ವೇ ನಂ 18/1 ರಲ್ಲಿನ 3.10 ಎಕರೆ ಜಮೀನನ್ನು ಒಕ್ಕಲಿಗರ ಸಂಘಕ್ಕೆ ನೋಂದಣಿ ಮಾಡಿಸಿ, ಪತ್ರ ಹಸ್ತಾತರಿಸಿ ಮಾತನಾಡಿದರು.


    ಈ ಜಾಗದಲ್ಲಿ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪ ನಿರ್ಮಾಣ, ವಸತಿಶಾಲೆ ನಿರ್ಮಾಣಕ್ಕೆ ಸಂಘ ನಿರ್ಧರಿಸಿದ್ದು, ನನ್ನ ಕಡೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಕಲ್ಯಾಣ ಮಂಟಪ, ವಸತಿ ಶಾಲೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ಸಮುದಾಯದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು ಎಂದರು.
    ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಹತ್ತಾರು ವರ್ಷಗಳಿಂದ ಸಮುದಾಯ ಭವನ ಅಥವಾ ಕಲ್ಯಾಣಮಂಟಪ ನಿರ್ಮಾಣಕ್ಕೆ ಬೇಡಿಕೆಯಿದ್ದು, ಅದನ್ನು ಶಾಸಕರು ಮಾತನ್ನು ಉಳಿಸಿಕೊಂಡಿದ್ದಾರೆ. ಇದರ ಜತೆಗೆ ಬಡಮಕ್ಕಳಿಗೆ ವಸತಿಶಾಲೆ ನಿರ್ಮಾಣ ಮಾಡಲು ಸಂಘ ಅಭಿಪ್ರಾಯ ಕೇಳಿದ್ದು, ವಸತಿ ಶಾಲೆಯೂ ಉತ್ತಮವಾದ ಕೆಲಸವಾಗಿದ್ದು, ಎಲ್ಲ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ನಾವುಗಳು ಬದ್ಧ ಎಂದರು.
    ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜ್ ಹೆಗ್ಗಡೆ ಮಾತನಾಡಿದರು.
    ಮುಖಂಡರಾದ ಕೋಡಿಹಳ್ಳಿ ಸುರೇಶ್, ಸತೀಶ್‌ಗೌಡ, ಬಿ.ವಿ.ಬೈರೇಗೌಡ, ಕೆ. ಕೃಷ್ಣಮೂರ್ತಿ, ಲಕ್ಷ್ಮಣ್‌ಗೌಡ, ಎನ್.ಮಂಜುಗೌಡ, ಆರ್‌ಟಿಸಿ ಗೋವಿಂದರಾಜ್ ಮೊದಲಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts